90ರ ದಶಕದಲ್ಲಿ ಅತ್ಯಂತ ಬ್ಯುಸಿ, ಯಶಸ್ವಿ ಬಾಲನಟಿಯಾಗಿದ್ದ ಬೇಬಿ ಶಾಮಿಲಿ ಈಗ ಸಿನಿಮಾಗಳಿಂದ ತುಸು ದೂರವಾಗಿದ್ದಾರೆ.
ಬೇಬಿ ಶಾಮಿಲಿ ನಾಯಕಿಯಾಗಿಯೂ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಯಶಸ್ವಿಯಾಗಲಿಲ್ಲ.
ಶಾಮಿಲಿ ಇದೀಗ ಕಲಾವಿದೆಯಾಗಿದ್ದು ಚಿತ್ರಗಳ ರಚನೆಯನ್ನೇ ವೃತ್ತಿ, ಪ್ರವೃತ್ತಿ ಎರಡಾಗಿಯೂ ಮಾಡಿಕೊಂಡಿದ್ದಾರೆ.
ಶಾಮಿಲಿ ಯುವ ಉದ್ಯಮಿಯೂ ಆಗಿದ್ದು ಶೀ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೆ ಚೆನ್ನೈನಲ್ಲಿ ತಮ್ಮ ಚಿತ್ರಕಲೆಯ ಪ್ರದರ್ಶನವನ್ನು ಶಾಮಿಲಿ ಆಯೋಜನೆ ಮಾಡಿದ್ದರು. ಎ.ಆರ್.ರೆಹಮಾನ್, ಮಣಿರತ್ನಂ ಇನ್ನಿತರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಶಾಮಿಲಿ ಸಿನಿಮಾ ನಿರ್ದೇಶನವನ್ನೂ ಕಲಿತಿದ್ದು ಸಿನಿಮಾ ನಿರ್ದೇಶನದ ಕನಸನ್ನೂ ಹೊಂದಿದ್ದಾರೆ.
ಶಾಮಿಲಿಯ ಅಕ್ಕ ಶಾಲಿನಿಯೂ ನಟಿಯೇ ಆದರೆ ಅವರೂ ಸಹ ಸಿನಿಮಾಗಳಿಂದ ದೂರವಾಗಿದ್ದಾರೆ.