ವರ್ಷದ ಮೊದಲ ಮಳೆಗೆ ಬಂಡೀಪುರ ಹಸಿರುಮಯ: ಕೆರೆಗಳು ಭರ್ತಿ, ಸಫಾರಿಗೆ ಒಳ್ಳೆ ಸಮಯ

Updated By: ವಿವೇಕ ಬಿರಾದಾರ

Updated on: Jun 01, 2025 | 4:29 PM

ಈಗ ಭಾರೀ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಸಿರಿನಿಂದ ತುಂಬಿದೆ. ಬರಿದಾಗಿದ್ದ ಕೆರೆ-ಕಟ್ಟೆಗಳು ಮತ್ತೆ ತುಂಬಿವೆ, ಮತ್ತು ಕಾಡು ಪ್ರಾಣಿಗಳು ಮರಳಿ ಬಂದಿವೆ. ಪೂರ್ವ ಮುಂಗಾರು ಮಳೆಯು ಬಂಡೀಪುರಕ್ಕೆ ಜೀವ ತುಂಬಿದೆ. ಇದು ಸಫಾರಿ ಪ್ರವಾಸಕ್ಕೆ ಅತ್ಯುತ್ತಮ ಸಮಯವಾಗಿದೆ. ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆ ದೂರವಾಗಿದೆ.

1 / 6
ಕಳೆದೊಂದು ವರ್ಷದಿಂದ ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ತೀವ್ರ ಬರದಿಂದ ಬಂಡೀಪುರ ಕಾಡು ಸಂಪೂರ್ಣವಾಗಿ ಒಣಗಿ ಹೋಗಿತ್ತು. ಆದರೆ, ಪೂರ್ವ ಮುಂಗಾರು ಮಳೆಗೆ ಬಂಡೀಪುರ ಸಂಪೂರ್ಣ ಹಸಿರುಮಯವಾಗಿದ್ದು, ಕೆರೆ-ಕಟ್ಟೆಗಳಿಗೆ ಜೀವ ಕಳೆ ಬಂದಿದೆ. ಕಾಡು ಪ್ರಾಣಿಗಳಿಗಿದ್ದ ಕಂಟಕ ಈಗ ದೂರವಾಗಿದೆ.

2 / 6
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದೊಂದು ವರ್ಷದಿಂದ ಸಕಾಲಕ್ಕೆ ಮಳೆಯಾಗಿರಲಿಲ್ಲ. ಕಾಡು ಒಣಗಿತ್ತು. ಕೆರೆ ಕಟ್ಟೆಗಳೆಲ್ಲ ಬರಿದಾಗಿದ್ದವು. ಇದರಿಂದ ಕಾಡು ಪ್ರಾಣಿಗಳಿಗೆ ಸಂಕಷ್ಟ ಎದುರಾಗಿತ್ತು.

3 / 6
ಆದರೆ, ಈ ವರ್ಷ ಭಾರಿ ಪೂರ್ವ ಮುಂಗಾರು ಮಳೆಯಾಗಿದೆ. ಈ ಹಿನ್ನಲೆ ಬಂಡೀಪುರ ಅಭಯಾರಣ್ಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇದು ಸಫಾರಿಗೆ ಸೂಕ್ತ ಸಮಯವಾಗಿದೆ.

4 / 6
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 400 ಕ್ಕೂ ಅಧಿಕ ಕೆರೆ ಕಟ್ಟೆಗಳಿವೆ. ಕಳೆದ ವರ್ಷ ಭಾರಿ ಬರಗಾಲ ಎದುರಾಗಿದ್ದು ಶೇ 90 ರಷ್ಟು ಕೆರೆಗಳು ಬತ್ತಿ ಹೋಗಿದ್ದವು. ಬೆರೆಳೆಣಿಕೆಯಷ್ಟು ಕೆರೆಗಳಿಗೆ ಮಾತ್ರ ಸೋಲಾರ್ ಬೋರ್​ನಿಂದ ನೀರು ತುಂಬಿಸುವ ಕಾರ್ಯವನ್ನು ಅರಣ್ಯಾಧಿಕಾರಿಗಳು ಮಾಡಿದ್ದರು. ಆದರೆ, ಅದು ಅಷ್ಟರ ಮಟ್ಟಿಗೆ ಯಶಸ್ವಿ ಕೂಡ ಆಗಿರಲಿಲ್ಲ.

5 / 6
ನೀರಿನ ಅಭಾವದಿಂದ ಕಾಡು ಪ್ರಾಣಿಗಳೆಲ್ಲ ನೀರು ಅರಸಿ ಬಂಡೀಪುರ ತೊರೆದಿದ್ದವು. ಆದರೆ, ವರ್ಷದ ಮೊದಲ ಮಳೆ ಉತ್ತಮವಾಗಿದ್ದು ಕೆರೆ ಕಟ್ಟೆಗಳು ತುಂಬುತ್ತಿದ್ದು ಜೀವ ಕಳೆ ಮರುಕಳಿಸಿದೆ. ಪ್ರಾಣಿಗಳೆಲ್ಲ ಮತ್ತೆ ಬಂಡೀಪುರ ಅರಣ್ಯಕ್ಕೆ ಆಗಮಿಸಿವೆ.

6 / 6
ಒಟ್ಟಾರೆಯಾಗಿ ಮೊದಲ ಮಳೆ ಉತ್ತಮವಾಗಿದ್ದು, ಮೂಲೆ ಹೊಳೆ ಸೇರಿದಂತೆ ತಮಿಳುನಾಡು ಹಾಗೂ ಕೇರಳ ಗಡಿಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ಕಾಡು ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ. ಪ್ರಾಣಿಗಳಿಗಿದ್ದ ನೀರಿನ ಸಮಸ್ಯೆ ದೂರವಾಗಿದೆ.