Updated on: Apr 05, 2023 | 7:30 AM
ಅಮೆರಿಕದ ಟ್ರೀ ಆಫ್ ಗೋಲ್ಡ್ ಎಂದು ಪ್ರಖ್ಯಾತ ಪಡೆದಿರುವ ಟಬಿಬಿಯಾ ಹೂವು ಈಗ ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ ಸಮಯದಲ್ಲೂ ಕೂಲ್ ಆಗಿ ಅರಳಿ ನಗುತ್ತಲೇ ನಗರದ ರಸ್ತೆಗಳಲ್ಲಿ, ಪಾರ್ಕ್ ಗೆ ಬರುವ ಜನರ ಗಮನ ಸೆಳೆಯುತ್ತಿದೆ. (ಚಿತ್ರ: ಸಾಮಾಜಿಕ ಜಾಲತಾಣ)
ಜನರು ಕೂಡ ಟಬಿಬಿಯಾದ ಪಿಂಕ್ ಕಲರ್ ಗೆ ಫಿದಾಗಿ ಲೋಕವನ್ನು ಮರೆತು ಫೋಟೋ ಕ್ಲಿಕ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಟಬಿಬಿಯಾ ಹೂಗಳು ಇಡೀ ಬೆಂಗಳೂರನ್ನು ಆವರಿಸಿದ್ದು ಸಿಲಿಕಾನ್ ಸಿಟಿಯಲ್ಲಿ ಇವರದ್ದೇ ಕಾರುಬಾರು.
ಧರೆಗಿಳಿದ ಹೂವಿನ ಲೋಕ. ಹಾದಿಯುದ್ದಕ್ಕೂ ಹೂಮಳೆ ಸ್ವಾಗತ. ಕಣ್ಣು ಹಾಯಿಸಿದ ಕಡೆಗೆಲ್ಲ ಬಣ್ಣ ಬಣ್ಣದ ಹೂವಿನ ಚಿತ್ತಾರ. ಸಿಲಿಕಾನ್ ಸಿಟಿಯ ರಸ್ತೆಯಲ್ಲಿ ಹೂವಿನ ಚಪ್ಪರ ಹಾಸಿದಂತೆ ಕಾಣ್ತಿದೆ.
ಗಾರ್ಡನ್ ಸಿಟಿ ಸಿಕ್ಕಾಪಟ್ಟೆ ಬ್ಯೂಟಿಫುಲ್ ಆಗಿದೆ. ಕಣ್ಣು ಹಾಯಿಸಿದ ಕಡೆಗೆಲ್ಲ ಪಿಂಕ್, ನೀಲಿ, ಹಳದಿ, ಕೆಂಪು ಅಬ್ಬಾಬ್ಬಾ ಹೂವುಗಳ ಸೊಬಗೇ ಧರೆಗಳಿದಿದೆ. ಹೀಗೆ ನಗೆ ಬೀರುತ್ತಾ. ಎಲ್ಲರಿಗೂ ಸ್ವಾಗತವನ್ನ ಕೋರ್ತಿರೋ ಇದು ಟಬಿಬಿಯಾ ಹೂವು.
ಟಬಿಬಿಯಾ ಹೂ ಜನವರಿಯಿಂದ ಮೇ ವರೆಗೂ ಕಂಗೊಳಿಸುತ್ತೆ. ಬೆಂಗಳೂರಿನ ಹಲವು ರಸ್ತೆಗಳಲ್ಲಿ ಟಬಿಬಿಯಾ ಮರಗಳಿದ್ದು, ಎಲ್ಲವೂ ಈಗ ಹೂಗಳಿಂದ ಕಂಗೊಳಿಸುತ್ತಿವೆ. ದಾರಿಯೆಲ್ಲವೂ ನೀಲಿ, ಹಳದಿ, ಪಿಂಕ್ ಬಣ್ಣದಿಂದ ಮಸ್ತ್ ಮಸ್ತ್ ಕಾಣ್ತಿದೆ.
ಟಬಿಬಿಯಾ ಹೂವಿನ ಎದುರು ಸಿಟಿ ಮಂದಿ ಫೋಟೋ ಶೂಟ್ ಮಾಡಿಸಿಕೊಳ್ತಿದ್ದಾರೆ. ದಾರಿಯಲ್ಲಿ ಹೋಗೋರೆಲ್ಲ ಸೆಲ್ಫಿ ಕ್ಲಿಕಿಸಿಕೊಳ್ತಿದ್ದಾರೆ. ಯುವಕ ಮತ್ತು ಯುವತಿಯರು ಅಂತೂ ತಮ್ಮ ಮೊಬೈಲ್ ನಿಂದಲೇ ಸಿನಿಮಾ ಸ್ಟೈಲ್ ನಲ್ಲಿ ರೀಲ್ಸ್ ಮಾಡುತ್ತಾ ಫೋಸ್ ನೀಡ್ತಿದ್ದಾರೆ. ಟಬಿಬಿಯಾ ವಿಡಿಯೋಗಳು ಸಾಮಾಜಿಕ ಜಾಲತಣಾಗಳಲ್ಲಿ ಹರಿದಾಡುತ್ತಿವೆ.
ಕಬ್ಬನ್ ಪಾರ್ಕ್ , ಲಾಲ್ಬಾಗ್, ಫ್ರೀಡಂ ಪಾರ್ಕ್ ರಸ್ತೆ, ಕೆ ಆರ್, ಪುರಂ, HSR ಲೇಔಟ್ ನ ರಸ್ತೆಗಳಲ್ಲಿ ಟಬೂಬಿಯ ಬ್ಯೂಟಿಯದ್ದೇ ಕಾರುಬಾರು. ಪಾರ್ಕ್ ಗೆ ಬಂದ ಜನರು ಪಿಂಕ್ ಬ್ಯೂಟಿ ಕಂಡು ಬೆರಗಾಗಿದ್ದಾರೆ.
ಟಬಿಬಿಯಾದಲ್ಲಿ 90ಕ್ಕೂ ಹೆಚ್ಚು ತಳಿಗಳು ಇವೆ. ಇವುಗಳ ಜತೆ ಬ್ಲೂ ಗುಲ್ಮೊಹರ್, ಕಾಪರ್ ಪಾಟ್, ಬ್ರೌನಿ ರೋಸಿಯಾ ಹೂಗಳು ಕಂಗೊಳಿಸುತ್ತಿವೆ.
ಒಟ್ಟಿನಲ್ಲಿ ಟಬಿಬಿಯಾ ಹೂವಿನಿಂದ ಬೆಂಗಳೂರಿಗೆ ಬೇರೆಯದೇ ಕಳೆ ಬಂದಿದೆ. ರಸ್ತೆ ರಸ್ತೆಗಳೆಲ್ಲವೂ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. (ವರದಿ: ಬಾಲಾಜಿ, ಟಿವಿ 9 ಬೆಂಗಳೂರು)