ಬೆಂಗಳೂರಿನಲ್ಲಿ ಮತ್ತೆ ಮಳೆ: ಧಾರಾಕಾರ ಮಳೆಗೆ ಹಲವು ರಸ್ತೆಗಳು ಜಲಾವೃತ, ವಾಹನಗಳು ಮುಳುಗಡೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 05, 2024 | 9:22 PM

ಬಂಗಾಳಕೊಲ್ಲಿಯ ಟರ್ಫ್ ಎಫೆಕ್ಟ್​​ನಿಂದ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನದಿಂದ ಮಳೆಯಾಗುತ್ತಿದೆ. ಕತ್ತಲಾಗ್ತಿದ್ದಂತೆ ಎಂಟ್ರಿಯಾಗುವ ವರುಣನ ಅಬ್ಬರಕ್ಕೆ ಸಿಲಿಕಾನ್​ ಸಿಟಿಯಲ್ಲಿ ಹಲವು ಅವಾಂತರಗಳು ಅನಾವರಣವಾಗುತ್ತಿವೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಹಲವೆಡೆ ವಾಹನಗಳು ಮುಳುಗಿ ಹೋಗಿವೆ.

1 / 6
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನದಿಂದ ವರುಣನ ಎಂಟ್ರಿಯಾಗುತ್ತಿದೆ. ಸಂಜೆಯಾದರೆ ಸಾಕು ಧೋ ಅಂತಾ ಸುರಿಯುವ ಮಳೆಗೆ ಜನರು ಹೈರಾಣಾಗಿದ್ದಾರೆ. ಇದೀಗ ರಾತ್ರಿಯಾಗುತ್ತಿದ್ದಂತೆ ನಗರದಲ್ಲಿ ಗುಡುಗು ಸಹಿತ ಮತ್ತೆ ಧಾರಾಕಾರ ಮಳೆ ಆರಂಭವಾಗಿದೆ.

2 / 6
ಚಾಮರಾಜಪೇಟೆ, ಸಂಪಂಗಿರಾಮನಗರ, ಟೌನ್ ಹಾಲ್, ಲಾಲ್ ಬಾಗ್, ರಿಚ್ಮಂಡ್ ರಸ್ತೆ, ಜಯನಗರ, ಬನಶಂಕರಿ ಮತ್ತು ಕಾರ್ಪೋರೇಷನ್​​ ಸುತ್ತಮುತ್ತ ಧಾರಾಕಾರ ಮಳೆ ಆಗಿದೆ. ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ.

3 / 6
ರಾಜಾಜಿನಗರ ಸುತ್ತಮುತ್ತ ವರುಣಾರ್ಭಟ ಜೋರಾಗಿದ್ದು, ಮಳೆಗೆ ರಸ್ತೆಗಳು ಹೊಳೆಯಂತಾಗಿವೆ. ನೀರು ತುಂಬಿದ ರಸ್ತೆಯಲ್ಲೇ ವಾಹನ ಸವಾರರು ಸಂಚಾರ ಮಾಡುವ ಪರಿಸ್ಥತಿ ನಿರ್ಮಾಣವಾಗಿದೆ.

4 / 6
ಮಳೆ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿಯ ನೀರಿನಲ್ಲಿ ಕಾರು, ಆಟೋ, ಬೈಕ್​ಗಳು ಮುಳುಗಿವೆ.

5 / 6

6 / 6
ಅತ್ತ ಸರ್ಜಾಪುರ ರಸ್ತೆಯಲ್ಲಿ ಇಡೀ ರಸ್ತೆ ಜಲಾವೃತವಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Published On - 9:17 pm, Sat, 5 October 24