AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

61 ಲಕ್ಷ ರೂಪಾಯಿ ಬೆಲೆಬಾಳುವ ಬೆಳಗಾವಿ ಕೋಣ ಇಲ್ಲಿ ಕಟ್ಟಿಹಾಕಿದ್ದೇವೆ, ನೋಡಿ! Photos

ಸಾಮಾನ್ಯವಾಗಿ ಕೋಣಕ್ಕೆ ಹೆಚ್ಚೆಂದರೆ ಎರಡರಿಂದ ಎರಡೂವರೆ ಲಕ್ಷಕ್ಕೆ ಬೆಲೆಬಾಳುತ್ತದೆ. ಆದರೆ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ-ಐನಾಪುರ ಗ್ರಾಮದ ಒಂದು ಕೋಣಕ್ಕೆ 61 ಲಕ್ಷಕ್ಕೆ ಬೆಲೆಬಾಳುತ್ತದೆ. ಮನೆಯಲ್ಲೇ ಸಾಕಿರುವ ಸಾಮಾನ್ಯ ತಳಿಯ ಕೋಣ ಗಜೇಂದ್ರ. ಮೂರು ವರ್ಷದ ಈ ಕೋಣ ಮನೆಯಲ್ಲೇ ಹುಟ್ಟಿ ಬೆಳೆಯುತ್ತಿದೆ.

sandhya thejappa
|

Updated on:Mar 02, 2021 | 2:28 PM

Share
ದಪ್ಪ ಕಾಲುಗಳು, ದೈತ್ಯಾಕಾರದ ದೇಹವನ್ನು ಹೊಂದಿರುವ ಕೋಣದ ಹೆಸರು ಗಜೇಂದ್ರ.

1 / 10
ಗಜೇಂದ್ರ ಕೋಣವನ್ನ ಸಾಕಲು ದಿನಕ್ಕೆ 1,200 ರೂಪಾಯಿ ವರೆಗೂ ಖರ್ಚಾಗುತ್ತಿದ್ದು, ಅದನ್ನ ಖರ್ಚು ಅಂದುಕೊಳ್ಳದೆ ತನ್ನ ಮನೆಯ ಮಗನಂತೆ ಸಾಕುತ್ತಿದ್ದೇನೆ ಎಂದು ವಿಲಾಸ ನಾಯಿಕ್ ಹೇಳುತ್ತಾರೆ.

2 / 10
ಮಾರಾಟ ಮಾಡದೆ ಚೆನ್ನಾಗಿ ಮೇಯಿಸಿ ಮಗನಂತೆ ಈ ಮಟ್ಟಿಗೆ ಬೆಳೆಸಿದ್ದಾರೆ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ-ಐನಾಪುರ ಗ್ರಾಮದ ವಿಲಾಸ್ ನಾಯಿಕ್.

3 / 10
ಐದು ಕೆ ಜಿ ಹಿಂಡಿ, ಐದು ಕೆ ಜಿ ಹಿಟ್ಟು ಗಜೇಂದ್ರನಿಗೆ ತಿನ್ನಿಸುತ್ತಾರೆ. ಜೊತೆಗೆ ಎಂದಿನಂತೆ ಜಾನುವಾರುಗಳಿಗೆ ನೀಡುವ ಮೇವನ್ನು ಹಾಕಿ ಮೇಯಿಸುತ್ತಾರೆ.

4 / 10
ಗಜೇಂದ್ರ ಆಚೆ ಬಂದರೆ ಸಾಕು ಜನರೆಲ್ಲಾ ಕೂಗೊಕೆ ಶುರು ಮಾಡುತ್ತಾರೆ. ಹುಟ್ಟುವಾಗಲೇ ಲಕ್ಷ ಬೇಡಿಕೆಯಿಂದ ಹುಟ್ಟಿದ್ದ ಗಜೇಂದ್ರ ಇದೀಗ ಕೋಟಿ ಬೆಲೆ ಬಾಳುವಂತಿದೆ.

5 / 10
ಫೆಬ್ರವರಿ 20ರಂದು ಮಹಾರಾಷ್ಟ್ರದ ತಾಸಗಾಂವದಲ್ಲಿ ನಡೆದ ಕೃಷಿ ಮೇಳದಲ್ಲಿ ಇವರು ಕೂಡ ಭಾಗವಹಿಸಿರುತ್ತಾರೆ. ಈ ವೇಳೆ ಮಹಾರಾಷ್ಟ್ರದ ಹಾಲು ಉದ್ಯಮಿ ಜಿತಳೆ ಎಂಬುವವರೂ ಇದಕ್ಕೆ 61 ಲಕ್ಷ ಕೊಡುತ್ತೀನಿ ಕೊಡಿ ಎಂದು ಕೇಳಿದ್ದರೂ ರೈತ ವಿಲಾಸ್ ನೀಡಿಲ್ಲ.

tv9 kannada digital news digest important developments of the day march 02 2021

6 / 10
ದೈತ್ಯಾಕಾರದ ಗಜೇಂದ್ರ ಕೋಣದ ತೂಕ ಬರೋಬ್ಬರಿ ಒಂದೂವರೆ ಟನ್ ಅಂದರೆ 1,500 ಕೆಜಿ ಇದೆ.

7 / 10
ಪ್ರತಿ ನಿತ್ಯ ಬೆಳಗ್ಗೆ, ಸಂಜೆ ಎರಡು ಹೊತ್ತು ಸೇರಿ ಸುಮಾರು ಹದಿನೈದು ಲೀಟರ್ ಹಾಲನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿ ಕುಡಿಸುತ್ತಾರೆ.

8 / 10
ವಿಲಾಸ ನಾಯಿಕ್ ಗಜೇಂದ್ರನನ್ನು ಸಾಕುವುದರ ಜೊತೆಗೆ ಐವತ್ತು ಬೇರೆ ಬೇರೆ ತಳಿಗಳ ಎಮ್ಮೆಯನ್ನ ಸಾಕಿದ್ದು, ನಿತ್ಯವೂ 125 ಲೀಟರ್ ಹಾಲು ಉತ್ಪಾದಿಸುತ್ತಾರೆ.

9 / 10
ಕೋಣವನ್ನ ನೋಡಿದ ಮಹಾರಾಷ್ಟ್ರದ ಕೃಷಿ ಇಲಾಖೆಯ ಅಧಿಕಾರಿಗಳು ಇದಕ್ಕೆ ‘ಕರ್ನಾಟಕದ ಕಿಂಗ್’ ಅಂತಾ ಬಿರುದು ಕೊಟ್ಟು ಸರ್ಟಿಫಿಕೇಟ್ ಕೂಡ ಕೊಟ್ಟು ಕಳುಹಿಸಿದ್ದಾರೆ.

10 / 10

Published On - 2:00 pm, Tue, 2 March 21