ಬ್ರೇಕ್ ಫೇಲ್ ಆಗಿ ರಾಜಹಂಸ ಬಸ್ ಪಲ್ಟಿಯಾಗಿರುವ ಘಟನೆ ಇಂದು (ಏಪ್ರಿಲ್ 16) ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ತಿಮ್ಮಾಪುರ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ಬೆಳಗಾವಿಗೆ ತೆರಳುತ್ತಿದ್ದ ರಾಜಹಂಸ ಬಸ್ ತಿಮ್ಮಾಪುರ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ಪರಿಣಾಮ ರಸ್ತೆ ಪಕ್ಕದಲ್ಲಿದ್ದ ಬ್ಯಾರಿಕೇಡ್ಗೆ ಡಿಕ್ಕಿಯಾಗಿ ಬಳಿಕ ಪಲ್ಟಿಯಾಗಿದೆ
ಇನ್ನು ಘಟನೆಯಲ್ಲಿ 10ಕ್ಕೂ ಹೆಚ್ಚು ಗಂಭೀರ ಗಾಯಗಳಾಗಿದ್ದರೆ, 20 ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಬಸ್ ಪಲ್ಟಿಯಾಗಿದ್ದ ತಡ ಸ್ಥಳಕ್ಕೆ ಸ್ಥಳೀಯ ನಿವಾಸಿಗಳು ಓಡೋಡಿ ಬಂದು ಬಸ್ನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಬಸ್ ಒಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹಿಂದಿನ ಗಾಜು ಒಡೆದು ಹೊರಕ್ಕೆ ಕರೆತರಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಬ್ರೇಕ್ ಫೆಲ್ ನಿಂದಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಇನ್ನು ಕಿತ್ತೂರು ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದರು.
ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕನಿಗೆ ಸ್ಥಳೀಯರು ನೀರು ಕೊಟ್ಟು ಸಂತೈಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ರವಾನಿಸಿದರು.