UPI ಮೂಲಕ ಬಿಎಂಟಿಸಿಗೆ ಹರಿದುಬಂತು 1 ಕೋಟಿ ರೂ., ದೇಶದಲ್ಲೇ ಮೊದಲು

| Updated By: ವಿವೇಕ ಬಿರಾದಾರ

Updated on: Feb 07, 2025 | 8:15 AM

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್​​ ನಲ್ಲಿ ಯುಪಿಐ ಪಾವತಿಯ ಮೂಲಕ ದಿನಕ್ಕೆ ಒಂದು ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಹೊಸ ದಾಖಲೆ ನಿರ್ಮಾಣವಾಗಿದೆ. ಫೆಬ್ರವರಿಯಲ್ಲಿ ಕಳೆದ ಮೂರು ದಿನಗಳಿಂದ ಈ ಸಾಧನೆ ಸಾಧ್ಯವಾಗಿದೆ. ಇದು ಚಿಲ್ಲರೆ ಸಮಸ್ಯೆಗೆ ಪರಿಹಾರವಾಗಿದ್ದು, ನಿರ್ವಾಹಕರು ಮತ್ತು ಪ್ರಯಾಣಿಕರ ನಡುವಿನ ಚಿಲ್ಲರೆ ಜಗಳಕ್ಕೆ ತೆರೆ ಎಳೆದಿದೆ. ಬಿಎಂಟಿಸಿಯ ಯಶಸ್ಸು ಇತರ ಸಾರಿಗೆ ನಿಗಮಗಳಿಗೆ ಮಾದರಿಯಾಗಿದೆ.

1 / 6
 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್​​ನಲ್ಲಿ ಬೆಂಗಳೂರು ಜನತೆಯ ಜೀವನಾಡಿಯಾಗಿದೆ. ಪ್ರತಿದಿನ  ನಲವತ್ತು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆರು ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತದೆ. ಆದರೆ, ಅದರಲ್ಲಿ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಕಲೆಕ್ಷನ್ ಆಗುವ ಹೊಸ ದಾಖಲೆ ಸೃಷ್ಟಿಯಾಗಿದೆ.

2 / 6
ಈ ಹಿಂದೆ ಬಿಎಂಟಿಸಿ ಯಪಿಐ ಮೂಲಕ ಪ್ರತಿ ತಿಂಗಳಿಗೆ 8 ರಿಂದ 10 ಕೋಟಿ ಕಲೆಕ್ಷನ್ ಮಾಡ್ತಿತ್ತು, ಆದರೆ ಜನವರಿ 4 ರ ನಂತರ ಯುಪಿಐ ಮ‌ೂಲಕ ಟಿಕೆಟ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇದೀಗ ಕಳೆದ ಮೂರು ದಿನಗಳಿಂದ ಅಂದರೆ ಫೆಬ್ರವರಿಯಲ್ಲಿ ಪ್ರತಿದಿನ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಬಿಎಂಟಿಸಿಗೆ ಬರುತ್ತಿದೆ.

3 / 6
ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಆದಾಯ ಸಂಗ್ರಹಿಸುವ ಮೂಲಕ ಬಿಎಂಟಿಸಿ ಮೂರೂ ಸಾರಿಗೆ ನಿಗಮಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಈ ಮೂಲಕ ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಿದಂತೆ ಆಗಿದೆ. ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ಕಿರಿಕ್ ಯುಪಿಐನಿಂದ ನಿಂತಿದೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

4 / 6
ಬಿಎಂಟಿಸಿಯಲ್ಲಿ 6500 ಬಸ್​ಗಳಿವೆ, ಆ ಬಸ್​ಗಳಿಂದ ಪ್ರತಿದಿನ 5 ರಿಂದ 6 ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಹರಿದು ಬರುತ್ತದೆ. ತಿಂಗಳಿಗೆ 180 ಕೋಟಿಯಷ್ಟು ಸಂಗ್ರಹವಾದರೆ, ಅದರಲ್ಲಿ 90 ಕೋಟಿಯಷ್ಟು ಶಕ್ತಿ ಯೋಜನೆ ಟಿಕೆಟ್ ಕಲೆಕ್ಷನ್ ಆಗುತ್ತಿದೆ.

5 / 6
ಅದರಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಕಲೆಕ್ಷನ್ ಆಗುತ್ತಿರುವುದು ವಿಶೇಷ. ಬಿಎಂಟಿಸಿಯ ಎಲ್ಲಾ ಬಸ್​ಗಳಲ್ಲೂ UPI ಕೋಡ್ ಅಳವಡಿಸಲಾಗಿದೆ. ಇದರಿಂದ ಬಿಎಂಟಿಸಿಯಲ್ಲಿ ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ಮುಖಂಡ ಜಗದೀಶ್ ಇದಕ್ಕೆ ನಮ್ಮ ಬಿಎಂಟಿಸಿ ನಿರ್ವಾಹಕರು ಕಾರಣ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

6 / 6
ಒಟ್ಟಿನಲ್ಲಿ ಪ್ರತಿದಿನ ಬಿಎಂಟಿಸಿ ಬಸ್​ನಲ್ಲಿ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ದೊಡ್ಡ ಜಗಳಕ್ಕೆ ಈ ಯುಪಿಐ ಪೇಮೆಂಟ್ ಬ್ರೇಕ್ ಹಾಕಿರುವುದಂತು ಸುಳ್ಳಲ್ಲ.