Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಏಕದಿನದಲ್ಲಿ ಧೋನಿಗಿಂತ ರೋಹಿತ್ ಬೆಸ್ಟ್ ನಾಯಕ; ಇದು ಅಂಕಿ ಅಂಶ ನುಡಿದ ಸತ್ಯ

Rohit Sharma captaincy: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕಳೆದ 6 ಪಂದ್ಯಗಳ ಸೋಲಿನ ಸರಣಿಗೆ ತೆರೆ ಎಳೆದಿದ್ದಾರೆ. ನಾಯಕನಾಗಿ ಅವರ ಯಶಸ್ಸು, ಏಕದಿನ ಮಾದರಿಯಲ್ಲಿ ಅವರ ಅತ್ಯುತ್ತಮ ನಾಯಕತ್ವವನ್ನು ಮತ್ತೆ ಸಾಬೀತುಪಡಿಸಿದೆ.

ಪೃಥ್ವಿಶಂಕರ
|

Updated on: Feb 07, 2025 | 10:45 AM

ಸುಮಾರು 8 ತಿಂಗಳ ಹಿಂದೆ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇಡೀ ದೇಶವನ್ನು ಸಂತೋಷಪಡಿಸಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ಕೆಲವು ಸರಣಿಗಳಲ್ಲಿ ಸತತ ಸೋಲುಗಳನ್ನೇ ಎದುರಿಸಬೇಕಾಯಿತು. ಇದರಿಂದಾಗಿ ರೋಹಿತ್​​ ನಿವೃತ್ತಿ ಘೋಷಿಸಬೇಕೆಂಬ ಕೂಗು ಕೂಡ ಹೆಚ್ಚಾಗಿತ್ತು. ನಾಯಕನಾಗಿ ಮಾತ್ರವಲ್ಲದೆ ರೋಹಿತ್ ಆಟಗಾರನಾಗಿಯೂ ವೈಫಲ್ಯ ಅನುಭವಿಸಿದ್ದರು.

1 / 7
ಆದರೀಗ ನಾಯಕನಾಗಿ ಮತ್ತೊಮ್ಮೆ ಗೆಲುವಿನ ಹಾದಿಗೆ ರೋಹಿತ್ ಮರಳಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ರೋಹಿತ್ ಶರ್ಮಾ ಕಳೆದ 6 ಪಂದ್ಯಗಳ ಸೋಲಿನ ಸರಣಿಗೆ ಬ್ರೇಕ್ ಹಾಕಿದ್ದಾರೆ. ಆಟಗಾರನಾಗಿ ರೋಹಿತ್ ಯಶಸ್ವಿಯಾಗದಿದ್ದರೂ ನಾಯಕನಾಗಿ ಯಶಸ್ಸು ಸಾಧಿಸುವಲ್ಲಿ ಸಫಲರಾಗಿದ್ದಾರೆ.

2 / 7
ನಾಗ್ಪುರದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.  ಈ ಮೂಲಕ ರೋಹಿತ್ ನಾಯಕನಾಗಿ​ ಮತ್ತೆ ಗೆಲುವಿನ ಸವಿ ಅನುಭವಿಸಿದ್ದಾರೆ. ವಾಸ್ತವವಾಗಿ ರೋಹಿತ್ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾ ಗೆಲುವು ಸಾಧಿಸಿದಕ್ಕಿಂತ ಸೋತಿದ್ದೇ ಹೆಚ್ಚು.

3 / 7
ಟಿ20 ವಿಶ್ವಕಪ್ ಮುಗಿದ ಬಳಿಕ ಬಾಂಗ್ಲಾದೇಶ ವಿರುದ್ಧ ರೋಹಿತ್ ನಾಯಕತ್ವದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ ಆ ಬಳಿಕ ಒಂದೂ ಪಂದ್ಯವನ್ನು ಗೆದ್ದಿಲ್ಲ. 3 ಪಂದ್ಯಗಳ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದ್ದ ಭಾರತ, ರೋಹಿತ್ ನಾಯಕತ್ವದಲ್ಲಿ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿತ್ತು.

4 / 7
ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದಿದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 3-0 ಅಂತರದಿಂದ ಸೋತಿತ್ತು. ವರ್ಷಾಂತ್ಯದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಭಾರತ ಬುಮ್ರಾ ನಾಯಕತ್ವದಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡರೆ, ಆ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ3 ಟೆಸ್ಟ್‌ಗಳಲ್ಲಿ 2 ರಲ್ಲಿ ಸೋತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

5 / 7
ಈ ಪಂದ್ಯದಲ್ಲಿನ ಗೆಲುವಿನೊಂದಿಗೆ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದ ಅತ್ಯುತ್ತಮ ನಾಯಕ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ರೋಹಿತ್ ಇದುವರೆಗೆ ಏಕದಿನ ಮಾದರಿಯಲ್ಲಿ 49 ಪಂದ್ಯಗಳಲ್ಲಿ ತಂಡದ ನಾಯಕತ್ವವಹಿಸಿದ್ದು, ಇದರಲ್ಲಿ 35 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.

6 / 7
ಇನ್ನು ಇದೇ ಸಂಖ್ಯೆಯ ಅಂದರೆ 49 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಎಂಎಸ್ ಧೋನಿ 30 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರೆ, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 49 ಏಕದಿನ ಪಂದ್ಯಗಳಲ್ಲಿ 38 ಪಂದ್ಯಗಳನ್ನು ನಾಯಕನಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

7 / 7
Follow us