- Kannada News Photo gallery Kannada News | Bengaluru Traffic Police unique plan to help public during rain bengaluru news
Bengaluru Traffic Police: ಬೆಂಗಳೂರಿನಲ್ಲಿ ಮಳೆ ಅವಾಂತಕ್ಕೆ ಬಕೇಟ್, ಕಟ್ಟಿಂಗ್ ಮಿಷನ್, ಸುತ್ತಿಗೆ ಹಿಡಿದು ನಿಂತ ಟ್ರಾಫಿಕ್ ಪೊಲೀಸ್
ಬಿಬಿಎಂಪಿಗೆ ಕಾಯುವ ಬದಲು ತಾವೇ ಫೀಲ್ಡಿಗಿಳಿಯಲು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದು ನೀರು ತುಂಬಿದ, ಮಳೆಯ ಅವಾಂತರಕ್ಕೆ ಸಿಲುಕಿದ ಸಂದರ್ಭಕ್ಕೆ ಪರಿಹಾರದ ಹೆಜ್ಜೆ ಇಟ್ಟಿದ್ದಾರೆ. ಮಳೆಯ ಸಮಸ್ಯೆ ಕ್ಲಿಯರ್ ಮಾಡಲು ಅಗತ್ಯ ಸಾಮಾಗ್ರಿಗಳ ಜೊತೆ ಫೀಲ್ಡ್ ನಲ್ಲಿ ಸಂಚರಿಸಲು ಪೊಲೀಸರು ಸಜ್ಜಾಗಿದ್ದಾರೆ.
Updated on:May 28, 2023 | 9:41 AM

ಬೆಂಗಳೂರಿನಲ್ಲಿ ಮಳೆ ಆತಂಕ ಹೆಚ್ಚಾಗಿದ್ದು ಸಾಲು ಸಾಲು ಅವಾಂತರಗಳ ಬಳಿಕ ಸಂಚಾರಿ ಪೊಲೀಸರು ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಬಿಬಿಎಂಪಿಗೆ ಕಾಯುವ ಬದಲು ತಾವೇ ಫೀಲ್ಡಿಗಿಳಿದಿದ್ದಾರೆ.

ನೀರು ತುಂಬಿದ, ಮಳೆಯ ಅವಾಂತರಕ್ಕೆ ಸಿಲುಕಿದ ಸಂದರ್ಭಕ್ಕೆ ಪರಿಹಾರದ ಹೆಜ್ಜೆ ಇಟ್ಟಿದ್ದಾರೆ. ಮಳೆಯ ಸಮಸ್ಯೆ ಕ್ಲಿಯರ್ ಮಾಡಲು ಅಗತ್ಯ ಸಾಮಾಗ್ರಿಗಳ ಜೊತೆ ಫೀಲ್ಡ್ ನಲ್ಲಿ ಸಂಚರಿಸಲು ಪೊಲೀಸರು ಸಜ್ಜಾಗಿದ್ದಾರೆ.

ಮಳೆ ಸಂದರ್ಭದಲ್ಲಿ ಅಗತ್ಯ ಸಲಕರಣೆಗಳ ಜೊತೆ ಫೀಲ್ಡ್ ನಲ್ಲಿರಲು ಸಂಚಾರಿ ಪೊಲೀಸರನ್ನು ನೇಮಿಸಲಾಗುತ್ತಿದೆ. ಒಂದೊಂದು ಏರಿಯಾದಲ್ಲಿ ಒಬ್ಬಬ್ಬ ಸಂಚಾರಿ ಪೊಲೀಸರನ್ನು ನೇಮಿಸಿ ಮಳೆ ಬರುವ ವೇಳೆ ಉಂಟಾಗುವ ತುರ್ತು ಸಂದರ್ಭಗಳಲ್ಲಿ ಬಳಕೆಯಾಗುವ ವಸ್ತುಗಳು ನೀಡಲಾಗುತ್ತಿದೆ.

ಕುಡುಗೋಲು, ಮರದ ಕಟ್ಟಿಂಗ್ ಮಿಷನ್, ಡಿ ಕನೆಕ್ಟರ್, ಬಕೇಟ್, ಸುತ್ತಿಗೆ ಸೇರಿ ಮರ ಬಿದ್ದ ಸ್ಥಳಗಳಲ್ಲಿ ಬಳಕೆಯಾಗಲಿರುವ ವಸ್ತುಗಳನ್ನು ಪ್ರತಿಯೊಬ್ಬರಿಗೆ ನೀಡಲಾಗುತ್ತಿದೆ. ಪೊಲೀಸರು ಅಗತ್ಯ ವಸ್ತುಗಳನ್ನು ಪೊಲೀಸ್ ವಾಹನದಲ್ಲಿಟ್ಟುಕೊಂಡಿದ್ದಾರೆ. ತುರ್ತು ಸಂದರ್ಭದಲ್ಲಿ ತಾವೇ ಫೀಲ್ಡ್ ನಲ್ಲಿ ಆ್ಯಕ್ಟೀವ್ ಆಗಲಿದ್ದಾರೆ.

ಕೆಆರ್ ಸರ್ಕಲ್ ಘಟನೆ ಬಳಿಕ ಸಾರ್ವಜನಿಕರ ರಕ್ಷಣೆಗೆ ಹೊಸ ಹೆಜ್ಜೆ ಇಟ್ಟಿದ್ದು ನಗರ ಸಂಚಾರಿ ವಿಶೇಷ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪೊಲೀಸರು ಅಗತ್ಯ ಸಾಮಾಗ್ರಿಗಳ ಜೊತೆಗೆ ಸಜ್ಜಾಗಿದ್ದಾರೆ. ನಗರದ ಎಲ್ಲಾ ಸಂಚಾರಿ ಠಾಣೆಗೂ ಈ ಕಿಟ್ ನೀಡಲಾಗಿದೆ.
Published On - 9:12 am, Sun, 28 May 23



















