ಬಸವನಗುಡಿಯಲ್ಲಿ ಅವರೆಬೇಳೆ ಮೇಳ: ವಿವಿಧ ಖಾದ್ಯಗಳಿಗೆ ಮನಸೋತ ಸಿಟಿಮಂದಿ
ಶಾಂತಮೂರ್ತಿ | Updated By: ಗಂಗಾಧರ ಬ. ಸಾಬೋಜಿ
Updated on:
Dec 28, 2024 | 8:36 PM
ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುವ ಅವರೆಬೇಳೆ ಮೇಳವು ಈ ವರ್ಷವೂ ಭರ್ಜರಿಯಾಗಿ ಆರಂಭವಾಗಿದೆ. 100ಕ್ಕೂ ಹೆಚ್ಚು ಸ್ಟಾಲ್‌ಗಳು ವಿವಿಧ ರೀತಿಯ ಅವರೆಬೇಳೆ ಖಾದ್ಯಗಳನ್ನು ಒಳಗೊಂಡಿವೆ. ಅವರೆಬೇಳೆ ಐಸ್‌ಕ್ರೀಮ್‌ನಿಂದ ಹಿಡಿದು ಹೋಳಿಗೆ, ಚಾಟ್‌ಗಳವರೆಗೆ ಅನೇಕ ಆಯ್ಕೆಗಳಿವೆ. ವಾರಾಂತ್ಯದಲ್ಲಿ ಬೆಂಗಳೂರಿನ ಜನರು ಈ ಮೇಳದಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷಪಡುತ್ತಿದ್ದಾರೆ.
1 / 6
ಒಂದೆಡೆ ವೀಕೆಂಡ್ ಜೋಶ್, ಮತ್ತೊಂದೆಡೆ ಹೊಸ ವರ್ಷವನ್ನು ವೆಲ್ ಕಮ್ ಮಾಡುವ ತವಕ. ಇದೆಲ್ಲದರ ಮಧ್ಯೆ ಸಿಟಿಮಂದಿಗೆ ಮನರಂಜನೆ ಕೊಡುವುದಕ್ಕೆ ಮತ್ತೊಂದು ಲೋಕ ನಿರ್ಮಾಣವಾಗಿದೆ. ಪ್ರತಿವರ್ಷ ಚಳಿಗಾಲದಲ್ಲಿ ನಡೆಯುವ ಅವರೆಬೇಳೆ ಮೇಳ ಈ ಬಾರೀ ಕೂಡ ಭರ್ಜರಿ ಓಪನಿಂಗ್ ಪಡೆದಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅವರಬೇಳೆಯ ಬಗೆ ಬಗೆಯ ಖಾದ್ಯದ ಘಾಟು ಜನರನ್ನ ಆಕರ್ಷಿಸುತ್ತಿವೆ. ಸಿಟಿಮಂದಿ ವೀಕೆಂಡ್ ಜೊತೆಗೆ ಅವರೆಬೇಳೆ ಮೇಳದಲ್ಲಿ ಮಿಂದೇಳುತ್ತಿದ್ದಾರೆ.
2 / 6
ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅವರಬೇಳೆ ಮೇಳ ಮೇಳೈಸಿದ್ದು, ಚುಮು ಚುಮು ಚಳಿಯ ಜೊತೆಗೆ ನಾಲಿಗೆಗೆ ರುಚಿ ಕೊಡುವ ಅವರೆಬೇಳೆಯ ಬಗೆ ಬಗೆಯ ಖಾದ್ಯಗಳ ಕಂಪು ವೀಕೆಂಡ್ ಮೂಡ್ನಲ್ಲಿರುವ ಜನರನ್ನ ಕೈಬೀಸಿ ಕರೆಯುತ್ತಿದೆ. ನಿನ್ನೆ ಇಂದ ಶುರುವಾಗಿರುವ ಅವರೆಬೇಳೆ ಮೇಳದಲ್ಲಿ ಸಿಟಿಮಂದಿ ನಾಲಿಗೆ ಚಪ್ಪರಿಸಿ ಎಂಜಾಯ್ ಮಾಡುತ್ತಿದ್ದಾರೆ.
3 / 6
ಸದ್ಯ ಪ್ರತಿವರ್ಷ ಅವರೆಬೇಳೆ ಮೇಳದಂತೆ ಈ ಭಾರೀ ಕೂಡ 25ನೇ ವರ್ಷದ ಅವರೆಬೇಳೆ ಮೇಳ ಶುರುವಾಗಿದ್ದು, ಜನವರಿ 5ರ ವರೆಗೆ ಮೇಳ ನಡೆಯಲಿದೆ. ಇತ್ತ ಮೇಳದಲ್ಲಿ ಅವರೆಬೇಳೆ ಐಸ್ ಕ್ರೀಮ್ ವಿಶೇಷವಾಗಿದ್ದು, ಇದರೊಟ್ಟಿಗೆ ಬಗೆ ಬಗೆಯ ಸಿಹಿತಿಂಡಿಗಳು, ಅವರೆಬೇಳೆ ಹೋಳಿಗೆ, ಅವರೆಬೇಳೆ ಚಾಟ್ಸ್, ಸೇರಿ ಹಲವು ಖಾದ್ಯಗಳು ಜನರ ಬಾಯಿಗೆ ರುಚಿ ನೀಡುತ್ತಿದೆ.
4 / 6
ಇನ್ನು ಈ ಭಾರೀ 100ಕ್ಕೂ ಹೆಚ್ಚು ಸ್ಟಾಲ್‌ಗಳು ತಲೆಎತ್ತಿದ್ದು, 125ಕ್ಕೂ ಹೆಚ್ಚು ಬಗೆಯ ಅವರೆಬೇಳೆ ಖಾದ್ಯಗಳು ಜನರ ಮನಗೆಲ್ಲೋಕೆ ಸಜ್ಜಾಗಿವೆ.
5 / 6
ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿರುವ ಹೊತ್ತಲ್ಲೇ ಅವರೆಬೇಳೆ ಮೇಳ ಆಯೋಜನೆಯಾಗಿರುವುದು ಸಿಟಿ ಜನರನ್ನ ಮತ್ತಷ್ಟು ಆಕರ್ಷಿಸುತ್ತಿದೆ. ಕೇವಲ ಬೆಂಗಳೂರಷ್ಟೇ ಅಲ್ಲದೇ ಬೇರೆ ಬೇರೆ ಭಾಗಗಳಿಂದ ಕೂಡ ಮೇಳಕ್ಕೆ ಆಗಮಿಸುತ್ತಿರುವ ಜನರು ವೆರೈಟಿ ವೆರೈಟಿ ಅವರೆಬೇಳೆಯ ಖಾದ್ಯಗಳ ರುಚಿ ನೋಡಿ ಖುಷ್ ಆಗ್ತಿದ್ದಾರೆ. ಅಲ್ಲದೇ ಅವರೆಬೇಳೆಯ ಮೂಲಕ ಮಾಡಬಹುದಾದ ಹೊಸ ಹೊಸ ತಿಂಡಿ ತಿನಿಸುಗಳನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.
6 / 6
ಮಾಗಡಿ ಸುತ್ತಮುತ್ತ ಅವರೆಬೇಳೆ ಬೆಳೆದ ರೈತರಿಗೆ ಈ ಮೇಳದ ಮೂಲಕ ಮಾರುಕಟ್ಟೆ ಸಿಕ್ಕಿದ್ದರೆ, ಇತ್ತ ಅವರೆಬೇಳೆಯನ್ನ ಬಳಸಿ ಬಗೆ ಬಗೆಯ ತಿಂಡಿಗಳನ್ನ ಉಣಬಡಿಸುತ್ತಿರುವ ಬಾಣಸಿಗರಿಗೂ ವೇದಿಕೆ ಸಿಕ್ಕಿದಂತಾಗಿದೆ. ಸದ್ಯ ಚಳಿ ಚಳಿ ವಾತಾವರಣದ ಜೊತೆಗೆ ಅವರೆಬೇಳೆಯ ಕುರುಕ್ ತಿಂಡಿಗಳನ್ನ ಬಾಯಾಡಿಸುತ್ತ ತಮ್ಮ ಫ್ರೆಂಡ್ಸ್, ಫ್ಯಾಮಿಲಿ ಜೊತೆ ಸಿಟಿಮಂದಿ ಸಂತಸಗೊಂಡಿದ್ದಾರೆ.