ಕಳೆಗಟ್ಟಿದ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ, ಫೋಟೋಸ್ ನೋಡಿ
ಬೆಂಗಳೂರಿನ ಬಸವನಗುಡಿಯಲ್ಲಿ ವಾರ್ಷಿಕವಾಗಿ ನಡೆಯುವ ಪ್ರಸಿದ್ಧ ಕಡಲೆಕಾಯಿ ಪರಿಷೆಯ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಈ ಲೇಖನ ವಿವರಿಸುತ್ತದೆ. ನೂರಾರು ವರ್ಷಗಳ ಹಿನ್ನೆಲೆಯನ್ನು ಹೊಂದಿರುವ ಈ ಜಾತ್ರೆ, ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುತ್ತದೆ. ವಿವಿಧ ಬಗೆಯ ಕಡಲೆಕಾಯಿಗಳು ಮತ್ತು ಅವುಗಳ ಬೆಲೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಪರಿಷೆಯ ಹಿಂದಿನ ಆಧ್ಯಾತ್ಮಿಕ ನಂಬಿಕೆಗಳನ್ನೂ ಇಲ್ಲಿ ವಿವರಿಸಲಾಗಿದೆ.
1 / 7
ಬೆಂಗಳೂರು ಕರಗ ಎಷ್ಟು ಪ್ರಸಿದ್ಧವೋ ಅಷ್ಟೇ ಪ್ರಸಿದ್ಧಿ ಪಡೆದಿರುವುದು ಕಡಲೆಕಾಯಿ ಪರಿಷೆ (ಜಾತ್ರೆ). ಬೆಂಗಳೂರಿನಲ್ಲಿ ಪ್ರತಿವರ್ಷ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವನಗುಡಿಯ ದೊಡ್ಡ ಬಸವನ ದೇವಸ್ಥಾನದ ಹತ್ತಿರ ಕಡಲೆಕಾಯಿ ಪರಿಷೆ ನಡೆಯುತ್ತದೆ.
2 / 7
ಬಸವನಗುಡಿಯಲ್ಲಿ ನೂರಾರು ವರ್ಷಗಳಿಂದ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಈ ಕಡಲೆಕಾಯಿ ಪರಿಷೆಗೆ ಹಿನ್ನೆಲೆ/ ಇತಿಹಾಸ ಇದೆ. ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ಸೋಮವಾರ (ನ.25) ಇಂದಿನಿಂದ ಆರಂಭವಾಗಲಿದೆ. ಆದರೆ, ಎಂದಿನಂತೆ ಎರಡು ದಿನಕ್ಕೆ ಮುಂಚಿತವಾಗಿಯೇ ಸಡಗರ ಆರಂಭವಾಗಿದೆ.
3 / 7
ಹೀಗಾಗಿ ಬಸವನಗುಡಿ ಹಾಗೂ ಸುತ್ತಮುತ್ತಲಿನ ರಸ್ತೆಗಳು ಕಳೆಗಟ್ಟಿವೆ. ಎತ್ತ ನೋಡಿದರತ್ತ ಕಡಲೆಕಾಯಿ, ಜನವೋ ಜನ. ನಿನ್ನೆ ರವಿವಾರವಾದ ಹಿನ್ನೆಲೆಯಲ್ಲಿ ಕಡಲೆಕಾಯಿ ಪರಿಷೆಗೆ ಸಾಕಷ್ಟು ಜನರು ಬಂದಿದ್ದರು. ಹೀಗಾಗಿ ಎಲ್ಲಿ ನೋಡಿದರೂ ಜನವೋ ಜನ.
4 / 7
ಬಸವನಗುಡಿಯ ಕಡಿಲೆಕಾಯಿ ಪರಿಷೆಯಲ್ಲಿ 10 ಬಗೆಯ ಬಗೆಯ ಕಡಲೆಕಾಯಿಗಳು ಬಂದಿವೆ. ಕೋಲಾರ, ತಮಿಳುನಾಡು, ಚಿಕ್ಕಬಳ್ಳಾಪುರ, ಆಂಧ್ರ ಪ್ರದೇಶ, ಸೇರಿದಂತೆ ವಿವಿಧೆಡೆಯಿಂದ ರೈತರು ಬಂದಿದ್ದು, ನಾಟಿ, ಫಾರಂ, ಬೋಂಡಾ ಹಾಗೂ ಬಾದಮಿ ಕಡಲೆಕಾಯಿಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಬಾರಿ ಕಡಲೆಕಾಯಿ ಬೆಲೆ ಕೊಂಚ ಜಾಸ್ತಿಯಾಗಿದ್ದು, ವ್ಯಾಪಾರ ವಹಿವಾಟು ಕೂಡ ಚೆನ್ನಾಗಿ ನಡೆಯುತ್ತಿದೆ ಅಂತ ವ್ಯಾಪಾರಸ್ಥರು ಖುಷಿ ಪಟ್ಟರು. ಬಾದಾಮಿ ಕಡಲೆಕಾಯಿ - ಸೇರಿಗೆ 50 ರೂ., ಬೋಂಡಾಕಾಯಿ - 70 ರೂ., ನಾಟಿ ಕಡಲೆಕಾಯಿ - 60 ರೂ. ಫಾರಂಕಡಲೆಕಾಯಿ - 70 ರೂ. ಇದೆ.
5 / 7
ಹಿಂದಿನ ಕಾಲದಲ್ಲಿ ಬಸವನಗುಡಿಯಲ್ಲಿ ಸಾಕಷ್ಟು ಕಡಲೆಕಾಯಿ (ಶೇಂಗಾ) ಬೆಳೆಯುತ್ತಿದ್ದರು. ಕಟಾವಿಗೆ ಸಿದ್ಧವಾದ ಕಡಲೆಕಾಯಿ ಗದ್ದಗೆ ಬಸವ (ನಂದಿ) ನುಗ್ಗಿ ನಾಶಪಡಿಸುತ್ತಿತ್ತು. ಹೀಗಾಗಿ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವ (ನಂದಿ)ಯನ್ನು ಪ್ರಾರ್ಥಿಸಲು ಆರಂಭಿಸಿದರು.
6 / 7
ಹೀಗೆ ನಡೆದುಕೊಂಡು ಬರುತ್ತಿದ್ದ ಸಮಯದಲ್ಲೇ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು. ನಂತರ ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಂದಿಯ ವಿಗ್ರಹದ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಾಗುತ್ತದೆ. ಕಡಲೆಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂದು ರೈತರ ನಂಬಿಕೆಯಾಗಿದೆ.ಹೀಗೆ ನಡೆದುಕೊಂಡು ಬರುತ್ತಿದ್ದ ಸಮಯದಲ್ಲೇ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು. ನಂತರ ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಂದಿಯ ವಿಗ್ರಹದ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಾಗುತ್ತದೆ. ಕಡಲೆಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂದು ರೈತರ ನಂಬಿಕೆಯಾಗಿದೆ.
7 / 7
ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆ ಕಾಯಿ ಪರಿಷೆ ನಡೆಯುತ್ತದೆ. ಕಾರ್ತಿಕ ಮಾಸದ ಸೋಮವಾರವು ಭಗವಾನ್ ಶಿವನ ನೆಚ್ಚಿನ ದಿನವಾಗಿದ್ದು, ನಂದಿಯು ಶಿವನ ವಾಹನವಾಗಿರುವುದರಿಂದ ನಂದಿಗೆ ಈ ದಿನಗಳು ಪ್ರಿಯವಾಗಿದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಕಡೆಲೆಕಾಯಿ ಪರಿಷೆ ನಡೆಯುತ್ತದೆ.
Published On - 8:45 am, Mon, 25 November 24