IPL 2025: ರಿಷಭ್ ಪಂತ್​ಗಾಗಿ ಏಕಾಏಕಿ 7 ಕೋಟಿ ರೂ. ಹೆಚ್ಚಿಸಿದ LSG

IPL 2025 Mega Auction: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿನಲ್ಲಿ ರಿಷಭ್ ಪಂತ್ 20.75 ಕೋಟಿ ರೂ.ಗೆ ಹರಾಜಾಗಿದ್ದರು. ಆದರೆ ಆರ್​ಟಿಎಂ ಬಳಕೆಯನ್ನು ತಪ್ಪಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ರೂ. ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿರುವುದು ವಿಶೇಷ.

ಝಾಹಿರ್ ಯೂಸುಫ್
|

Updated on: Nov 25, 2024 | 10:54 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಇತಿಹಾಸದಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರನ ದಾಖಲೆ ರಿಷಭ್ ಪಂತ್ ಹೆಸರಿಗೆ ಸೇರ್ಪಡೆಯಾಗಿದೆ. ಐಪಿಎಲ್​ ಸೀಸನ್-18ರ ಮೆಗಾ ಹರಾಜಿ ಮೂಲಕ ಲಕ್ನೋ ಸೂಪರ್ ಜೈಂಟ್ಸ್​ ಫ್ರಾಂಚೈಸಿಯು ಪಂತ್ ಅವರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಬರೋಬ್ಬರಿ 27 ಕೋಟಿ ರೂ. ನೀಡುವ ಮೂಲಕ ಎಂಬುದು ವಿಶೇಷ.

1 / 7
ಕುತೂಹಲಕಾರಿ ವಿಷಯ ಎಂದರೆ ರಿಷಭ್ ಪಂತ್ ಬಿಡ್ಡಿಂಗ್ ಮೂಲಕ ಪಡೆದ ಮೊತ್ತ 20.75 ಕೋಟಿ ರೂ. ಮಾತ್ರ. ಪಂತ್ ಖರೀದಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್​ ನಡುವೆ ಆರಂಭದಿಂದಲೇ ಪೈಪೋಟಿ ಏರ್ಪಟ್ಟಿತ್ತು.

2 / 7
ಈ ಪೈಪೋಟಿಯೊಂದಿಗೆ ಪಂತ್ ಅವರ ಮೊತ್ತವು 20 ಕೋಟಿ ರೂ. ದಾಟಿದೆ. ಈ ವೇಳೆ ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 20.75 ಕೋಟಿ ರೂ. ಹರಾಜು ಕೂಗಿದ್ದರು. ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ RTM ಆಯ್ಕೆ ಬಳಸಿಕೊಂಡಿತು.

3 / 7
ಕಳೆದ ಸೀಸನ್​ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಹೀಗಾಗಿ ಅವರ ಮೇಲೆ ಆರ್​ಟಿಎಂ ಆಯ್ಕೆ ಬಳಸಿ ತಂಡದಲ್ಲೇ ಉಳಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಅವಕಾಶವಿತ್ತು. ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 20.75 ಕೋಟಿ ರೂ. ನಾವೇ ನೀಡುತ್ತೇವೆ ಎಂದು ಪಂತ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಗಿದೆ.

4 / 7
ಆದರೆ ಐಪಿಎಲ್ ಮೆಗಾ ಹರಾಜಿನ ಹೊಸ ನಿಯಮದ ಪ್ರಕಾರ, ಆರ್​ಟಿಎಂ ಬಳಕೆಯ ಬಳಿಕ ಕೊನೆಯ ಬಾರಿ ಬಿಡ್ ಮಾಡಿದ ಫ್ರಾಂಚೈಸಿಗೆ ಇನ್ನೊಮ್ಮೆ ಬಿಡ್ ಮಾಡಲು ಅವಕಾಶ ನೀಡಲಾಗುತ್ತದೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್​ಗೆ ಅಂತಿಮ ಬಿಡ್​ಗೆ ಅವಕಾಶ ನೀಡಲಾಗಿದೆ.

5 / 7
ಅದಾಗಲೇ ಆರ್​ಟಿಎಂ ಮೂಲಕ ರಿಷಭ್ ಪಂತ್ ಅವರನ್ನು ಉಳಿಸಿಕೊಳ್ಳಲು ಬಯಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ತಂತ್ರ ಅರಿತಿದ್ದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಏಕಾಏಕಿ 7 ಕೋಟಿ ರೂ. ಹೆಚ್ಚಿಸಿ ತಂತ್ರಕ್ಕೆ ಪ್ರತಿತಂತ್ರ ಹೆಣೆದರು.

6 / 7
ಅತ್ತ ಅಷ್ಟೊಂದು ದುಬಾರಿ ಮೊತ್ತ ನೀಡುವ ಪರಿಸ್ಥಿತಿಯಲ್ಲಿರದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ಕೈ ಬಿಟ್ಟಿದೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ದಾಖಲೆಯ ಮೊತ್ತಕ್ಕೆ ರಿಷಭ್ ಪಂತ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

7 / 7
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ