ಟೀಮ್ ಇಂಡಿಯಾ ಜಯಭೇರಿ… ಹಲವು ದಾಖಲೆಗಳು ನಿರ್ಮಾಣ

Australia vs India, 1st Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 150 ರನ್​ಗಳಿಸಿದರೆ, ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 104 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ನೀಡಿದ 534 ರನ್​ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 238 ರನ್​ಗಳಿಗೆ ಆಲೌಟ್ ಆಗಿದೆ.

ಝಾಹಿರ್ ಯೂಸುಫ್
|

Updated on: Nov 25, 2024 | 1:56 PM

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಪರ್ತ್​ನ ಒಪ್ಟಸ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 295 ರನ್​ಗಳಿಂದ ಬಗ್ಗು ಬಡಿದು ಭಾರತ ತಂಡವು ಹಲವು ದಾಖಲೆಗಳನ್ನು ನಿರ್ಮಿಸಿದೆ. ಈ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

1 / 5
ಪರ್ತ್​ನಲ್ಲಿ ಪಲ್ಟಿ: ಆಸ್ಟ್ರೇಲಿಯಾ ತಂಡವನ್ನು ಪರ್ತ್​​ನಲ್ಲಿ ಸೋಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆ ಟೀಮ್ ಇಂಡಿಯಾ ಪಾಲಾಗಿದೆ. ಪರ್ತ್​ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಒಮ್ಮೆಯೂ ಆಸೀಸ್ ಪಡೆ ಸೋತಿರಲಿಲ್ಲ. ಇದೀಗ ಕಮಿನ್ಸ್ ಪಡೆಯನ್ನು ಮಕಾಡೆ ಮಲಗಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.

2 / 5
ಐತಿಹಾಸಿಕ ಜಯ: ಆಸ್ಟ್ರೇಲಿಯಾದಲ್ಲಿ ಇದು ಟೀಮ್ ಇಂಡಿಯಾದ ಅತಿ ದೊಡ್ಡ ಟೆಸ್ಟ್​ ಗೆಲುವು. 1977 ರಲ್ಲಿ ಮೆಲ್ಬೋರ್ನ್​ ಟೆಸ್ಟ್​​ನಲ್ಲಿ ಭಾರತ ತಂಡವು 222 ರನ್​ಗಳ ಜಯ ಸಾಧಿಸಿತ್ತು. ಇದೀಗ 47 ವರ್ಷಗಳ ಬಳಿಕ ಟೀಮ್ ಇಂಡಿಯಾ 295 ರನ್​ಗಳ ಅಮೋಘ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

3 / 5
ಅಮೋಘ ಜಯ: ಏಷ್ಯಾದ ಹೊರಗೆ ಇದು ಭಾರತ ತಂಡದ 2ನೇ ಅಮೋಘ ಜಯ ಎಂಬುದು ವಿಶೇಷ. 2019 ರಲ್ಲಿ ವೆಸ್ಟ್ ಇಂಡೀಸ್​ ವಿರುದ್ಧದ ಟೆಸ್ಟ್​ನಲ್ಲಿ 318 ರನ್​ಗಳ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ ಇದೀಗ 295 ರನ್​ಗಳಿಂದ ಜಯಭೇರಿ ಬಾರಿಸಿದೆ.

4 / 5
ಐತಿಹಾಸಿಕ ಸಾಧನೆ: 2000ರ ಬಳಿಕ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು. ಇದೀಗ 7ನೇ ಗೆಲುವಿನೊಂದಿಗೆ ಭಾರತ ತಂಡವು ಈ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

5 / 5
Follow us