ಉದ್ಘಾಟನೆಗೆ ಸಿದ್ಧಗೊಂಡ ಬೆಂಗಳೂರಿನ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣ: ವರ್ಣರಂಜಿತ ದೀಪಗಳಿಂದ ಕಂಗೊಳಿಸಿದ್ದು ಹೀಗೆ

|

Updated on: Mar 23, 2023 | 5:15 PM

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದು, ಅದಕ್ಕೂ ಮುಂಚೆ ವರ್ಣರಂಜಿತ ದೀಪಗಳಿಂದ ಕಂಗೊಳಿಸುತ್ತಿದೆ.

1 / 5
ಬೆಂಗಳೂರಿನಲ್ಲಿ ಹೊಸ ಮೆಟ್ರೋ ಮಾರ್ಗದ ಉದ್ಘಾಟನೆಗೆ ಮುಂಚಿತವಾಗಿ, ವೈಟ್‌ಫೀಲ್ಡ್ 
ಮೆಟ್ರೋ ನಿಲ್ದಾಣವು ವರ್ಣರಂಜಿತ ದೀಪಗಳಿಂದ ಕಂಗೊಳಿಸುತ್ತಿದೆ. 
(image credit
Bangalore Metro Updates)

ಬೆಂಗಳೂರಿನಲ್ಲಿ ಹೊಸ ಮೆಟ್ರೋ ಮಾರ್ಗದ ಉದ್ಘಾಟನೆಗೆ ಮುಂಚಿತವಾಗಿ, ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣವು ವರ್ಣರಂಜಿತ ದೀಪಗಳಿಂದ ಕಂಗೊಳಿಸುತ್ತಿದೆ. (image credit Bangalore Metro Updates)

2 / 5
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಆ ವೇಳೆ 
ಕೆಆರ್​ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
(image credit
Bangalore Metro Updates)

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಆ ವೇಳೆ ಕೆಆರ್​ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. (image credit Bangalore Metro Updates)

3 / 5
ಬಹಳ ದಿನಗಳ ನಂತರ ಬೆಂಗಳೂರಿನ ಐಟಿ ಹಬ್ ಎಂದು ಪರಿಗಣಿಸಲ್ಪಡುವ ವೈಟ್‌ಫೀಲ್ಡ್​​ಗೆ ಮೆಟ್ರೋ ಸಂಪರ್ಕ ಕಲ್ಪಿಸಲಾಗಿದೆ. 
ಆದರೆ ಇದು ಸದ್ಯಕ್ಕೆ ಕೆಆರ್ ಪುರಂಗೆ ಮಾತ್ರ ಸೀಮಿತವಾಗಿದೆ. ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗುವ ನೇರಳೆ ಮಾರ್ಗವು ನಂತರ ಕೆಆರ್ ಪುರಂ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ.
(image credit
Bangalore Metro Updates)

ಬಹಳ ದಿನಗಳ ನಂತರ ಬೆಂಗಳೂರಿನ ಐಟಿ ಹಬ್ ಎಂದು ಪರಿಗಣಿಸಲ್ಪಡುವ ವೈಟ್‌ಫೀಲ್ಡ್​​ಗೆ ಮೆಟ್ರೋ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಇದು ಸದ್ಯಕ್ಕೆ ಕೆಆರ್ ಪುರಂಗೆ ಮಾತ್ರ ಸೀಮಿತವಾಗಿದೆ. ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗುವ ನೇರಳೆ ಮಾರ್ಗವು ನಂತರ ಕೆಆರ್ ಪುರಂ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. (image credit Bangalore Metro Updates)

4 / 5
ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಲೈನ್ 10-12 ನಿಮಿಷಗಳ ಅಂತರದಲ್ಲಿ 
ಏಳು ರೈಲುಗಳು ಓಡಾಡಲಿವೆ. ಈ ಹೊಸ ಮೆಟ್ರೋ ಮಾರ್ಗವು ಕೆಆರ್ ಪುರಂ ಮತ್ತು 
ವೈಟ್‌ಫೀಲ್ಡ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ.

ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಲೈನ್ 10-12 ನಿಮಿಷಗಳ ಅಂತರದಲ್ಲಿ ಏಳು ರೈಲುಗಳು ಓಡಾಡಲಿವೆ. ಈ ಹೊಸ ಮೆಟ್ರೋ ಮಾರ್ಗವು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ.

5 / 5
ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಲೈನ್ 13.2 ಕಿಲೋಮೀಟರ್​ ಇದ್ದು, 
12 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.

ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಲೈನ್ 13.2 ಕಿಲೋಮೀಟರ್​ ಇದ್ದು, 12 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.

Published On - 5:15 pm, Thu, 23 March 23