ಬಹುಭಾಷಾ ನಟಿ ಭಾವನಾ ಮೆನನ್ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು.
‘ಜಾಕಿ’ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡ ಕೇರಳ ಮೂಲದ ನಟಿಯಾಗಿದ್ದಾರೆ.
2002ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಭಾವನಾ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ ಮೊದಲಾದ ಖ್ಯಾತ ತಾರೆಯರೊಂದಿಗೆ ಬಣ್ಣಹಚ್ಚಿದ್ದಾರೆ.
ವಿಶೇಷವೆಂದರೆ ಭಾವನಾ ಮೊದಮೊದಲಿಗೆ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಿದ್ದರೂ ಕೂಡ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲೇ ಸಕ್ರಿಯರಾಗಿದ್ದಾರೆ. 2021ರಲ್ಲಿ ಭಾವನಾ ನಟನೆಯ 4 ಕನ್ನಡ ಚಿತ್ರಗಳು ತೆರೆಕಂಡಿದ್ದವು.
ಪ್ರಸ್ತುತ ಮಲಯಾಳಂ ಚಿತ್ರವೊಂದನ್ನು ಒಪ್ಪಿಕೊಂಡಿರುವ ಭಾವನಾ ಅದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿರುವ ಭಾವನಾ, ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚುತ್ತಿರುವ ನಟಿಯ ಫೋಟೋಗಳು ವೈರಲ್ ಆಗಿವೆ.
ಭಾವನಾ ಮೆನನ್
ಭಾವನಾ ಮೆನನ್