AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharat Jodo Yatra: ಭಾರತ್ ಜೋಡೋ ಯಾತ್ರೆ ಹಿಂದಿ ಬ್ಯಾನರ್​ಗೆ ಮಸಿ ಬಳಿದ ಕನ್ನಡಿಗರು

ಕರ್ನಾಟಕದಲ್ಲಿ ಹಿಂದಿಯಲ್ಲಿ ಭಾರತ್ ಜೋಡೋ ಯಾತ್ರೆಯ ಬ್ಯಾನರ್ ಹಾಕಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಪ್ಪು ಬಣ್ಣ ಬಳಿದು ಬ್ಯಾನರ್​ನಲ್ಲಿ ಕನ್ನಡ ಬಳಸಿ ಎಂದು ಬರೆದಿದ್ದಾರೆ.

TV9 Web
| Updated By: Rakesh Nayak Manchi|

Updated on:Sep 29, 2022 | 5:24 PM

Share
ಕರ್ನಾಟಕ ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಸೆ.30ಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 9 ಗಂಟೆಗೆ ರಾಹುಲ್ ಗಾಂಧಿ ಅವರು ಗುಂಡ್ಲುಪೇಟೆಗೆ ಆಗಮಿಸಲಿದ್ದಾರೆ. ಇಂದು ತಮಿಳುನಾಡಿನ ಗುಡ್ಲೂರಿನಲ್ಲಿ ಯಾತ್ರೆ ನಡೆಸುತ್ತಿರುವ ಅವರು ನಾಳೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.

painted black on the Hindi banner of Bharat Jodo Yatra by Kannadigas says use Kannada

1 / 5
ಯಾತ್ರೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ನಾಳೆ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಕಾರ್ಯಕರ್ತರು ಹಾಗೂ ನಾಯಕರು ಅವರನ್ನು ಸ್ವಾಗತಿಸಲು ಹುಮ್ಮಸ್ಸಿನಿಂದ ಕಾಯುತ್ತಿದ್ದಾರೆ. ಅದರಂತೆ ಅಲ್ಲಲ್ಲಿ ಸ್ವಾಗತ ಬ್ಯಾನರ್​ಗಳು ಸೇರಿದಂತೆ ಯಾತ್ರೆಗೆ ಸಂಬಂಧಿಸಿದ ಬ್ಯಾನರ್​ಗಳನ್ನು ಹಾಕಲಾಗಿದೆ.

painted black on the Hindi banner of Bharat Jodo Yatra by Kannadigas says use Kannada

2 / 5
painted black on the Hindi banner of Bharat Jodo Yatra by Kannadigas says use Kannada

ಮೈಸೂರಿನಲ್ಲಿ ಹಿಂದಿ ಅಕ್ಷರಳಿಂದ ಕೂಡಿದ ಬ್ಯಾನರ್​ನಗಳನ್ನು ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ​ ಕನ್ನಡಿಗರು ಕಪ್ಪು ಬಣ್ಣ ಬಳಿದಿದ್ದಾರೆ. ಮೈಸೂರು-ಗುಂಡ್ಲುಪೇಟೆ ರಸ್ತೆ ಹಾಗೂ ನಂಜನಗೂಡು ಬಳಿ ಮಸಿ ಬಳಿಯಲಾಗಿದ್ದು, ಹಿಂದಿ ಅಕ್ಷರಗಳಿಗೆ ಮಸಿ ಬಳಿದು ಕನ್ನಡ ಬಳಸಿ ಎಂದು ಬ್ಯಾನರ್​ನಲ್ಲಿ ಬರೆದು ಹಾಕಿದ್ದಾರೆ.

3 / 5
painted black on the Hindi banner of Bharat Jodo Yatra by Kannadigas says use Kannada

ಹೀಗೆ ಹಾಕಲಾದ ಬ್ಯಾನರ್​ಗಳ ಪೈಕಿ ಕೆಲವೊಂದು ಬ್ಯಾನರ್​ಗಳು ಕನ್ನಡ ಅಭಿಮಾನಿಗಳ ಕಣ್ಣುಗಳನ್ನು ಕೆಂಪಗಾಗಿಸಿದೆ. ಏಕೆಂದರೆ ಕನ್ನಡದ ಒಂದಕ್ಷರವನ್ನೂ ಬರೆಯದೆ ಹಿಂದಿಯಲ್ಲಿ ಬರೆದು ಬ್ಯಾನರ್​ಗಳನ್ನು ಹಾಕಲಾಗಿದೆ.

4 / 5
painted black on the Hindi banner of Bharat Jodo Yatra by Kannadigas says use Kannada

ಗುಂಡ್ಲುಪೇಟೆಯಿಂದ ವೀರನ ಪುರ ಗೇಟ್​ವರೆಗೆ ಪಾದಯಾತ್ರೆ ನಡೆಯಲಿದ್ದು, ಮಧ್ಯಾಹ್ನದ ಊಟದ ಬಳಿಕ ರಾಹುಲ್ ಗಾಂಧಿ ಬುಡಕಟ್ಟು ಜನರು, ಚಾಮರಾಜನಗರ ಅಕ್ಸಿಜನ್ ದುರಂತದಲ್ಲಿ ಸಾವನಪ್ಪಿದ ಕುಟುಂಬಸ್ಥರ ಜೊತೆ ಸಂವಾದ ನಡೆಸಲಿದ್ದಾರೆ. ಬಳಿಕ ಸಂಜೆ ವೇಳೆಗೆ ಪಾದಯಾತ್ರೆ ಮುಂದುವರಿಯಲಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ವಾಸ್ಥವ್ಯ ಹೂಡಲಿರುವ ರಾಹುಲ್ ಗಾಂಧಿ, ಅ.1ರಂದು ಬೇಗೂರಿನಿಂದ ಬೆಳಿಗ್ಗೆ 6.30 ಕ್ಕೆ ಯಾತ್ರೆ ಆರಂಭಿಸಲಿದ್ದಾರೆ. ಹೀಗೆ ಆರಂಭವಾಗುವ ಯಾತ್ರೆ ನಂತರ ಮೈಸೂರು ಜಿಲ್ಲೆ ಪ್ರವೇಶಿಸಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ 21 ಕಿ.ಮೀ ಯಾತ್ರೆ ನಡೆಯಲಿದೆ.

5 / 5

Published On - 5:24 pm, Thu, 29 September 22

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?