painted black on the Hindi banner of Bharat Jodo Yatra by Kannadigas says use Kannada
painted black on the Hindi banner of Bharat Jodo Yatra by Kannadigas says use Kannada
ಮೈಸೂರಿನಲ್ಲಿ ಹಿಂದಿ ಅಕ್ಷರಳಿಂದ ಕೂಡಿದ ಬ್ಯಾನರ್ನಗಳನ್ನು ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕನ್ನಡಿಗರು ಕಪ್ಪು ಬಣ್ಣ ಬಳಿದಿದ್ದಾರೆ. ಮೈಸೂರು-ಗುಂಡ್ಲುಪೇಟೆ ರಸ್ತೆ ಹಾಗೂ ನಂಜನಗೂಡು ಬಳಿ ಮಸಿ ಬಳಿಯಲಾಗಿದ್ದು, ಹಿಂದಿ ಅಕ್ಷರಗಳಿಗೆ ಮಸಿ ಬಳಿದು ಕನ್ನಡ ಬಳಸಿ ಎಂದು ಬ್ಯಾನರ್ನಲ್ಲಿ ಬರೆದು ಹಾಕಿದ್ದಾರೆ.
ಹೀಗೆ ಹಾಕಲಾದ ಬ್ಯಾನರ್ಗಳ ಪೈಕಿ ಕೆಲವೊಂದು ಬ್ಯಾನರ್ಗಳು ಕನ್ನಡ ಅಭಿಮಾನಿಗಳ ಕಣ್ಣುಗಳನ್ನು ಕೆಂಪಗಾಗಿಸಿದೆ. ಏಕೆಂದರೆ ಕನ್ನಡದ ಒಂದಕ್ಷರವನ್ನೂ ಬರೆಯದೆ ಹಿಂದಿಯಲ್ಲಿ ಬರೆದು ಬ್ಯಾನರ್ಗಳನ್ನು ಹಾಕಲಾಗಿದೆ.
ಗುಂಡ್ಲುಪೇಟೆಯಿಂದ ವೀರನ ಪುರ ಗೇಟ್ವರೆಗೆ ಪಾದಯಾತ್ರೆ ನಡೆಯಲಿದ್ದು, ಮಧ್ಯಾಹ್ನದ ಊಟದ ಬಳಿಕ ರಾಹುಲ್ ಗಾಂಧಿ ಬುಡಕಟ್ಟು ಜನರು, ಚಾಮರಾಜನಗರ ಅಕ್ಸಿಜನ್ ದುರಂತದಲ್ಲಿ ಸಾವನಪ್ಪಿದ ಕುಟುಂಬಸ್ಥರ ಜೊತೆ ಸಂವಾದ ನಡೆಸಲಿದ್ದಾರೆ. ಬಳಿಕ ಸಂಜೆ ವೇಳೆಗೆ ಪಾದಯಾತ್ರೆ ಮುಂದುವರಿಯಲಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ವಾಸ್ಥವ್ಯ ಹೂಡಲಿರುವ ರಾಹುಲ್ ಗಾಂಧಿ, ಅ.1ರಂದು ಬೇಗೂರಿನಿಂದ ಬೆಳಿಗ್ಗೆ 6.30 ಕ್ಕೆ ಯಾತ್ರೆ ಆರಂಭಿಸಲಿದ್ದಾರೆ. ಹೀಗೆ ಆರಂಭವಾಗುವ ಯಾತ್ರೆ ನಂತರ ಮೈಸೂರು ಜಿಲ್ಲೆ ಪ್ರವೇಶಿಸಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ 21 ಕಿ.ಮೀ ಯಾತ್ರೆ ನಡೆಯಲಿದೆ.
Published On - 5:24 pm, Thu, 29 September 22