
ಭಾವನಾ ರಾಮಣ್ಣ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಭಾವನಾ ಅವರು ನಟಿಯಾಗಿರುವ ಜೊತೆಗೆ ರಾಜಕಾರಣಿಯೂ ಹೌದು. ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ.

ಭಾವನಾ ರಾಮಣ್ಣ ಮದುವೆ ಆಗಿಲ್ಲ. ಆದರೆ ತಾಯಿಯಾಗುವ ಬಯಕೆ ಅವರಲ್ಲಿ ಅದಮ್ಯವಾಗಿತ್ತು. ಹಾಗಾಗಿ ಅವರು ಕೃತಕ ಗರ್ಭಧಾರಣೆ ಮೂಲಕ ತಾಯಿ ಆಗುವ ಕನಸು ಕಂಡಿದ್ದರು.

ಐವಿಎಫ್ ತಂತ್ರಜ್ಞಾನದ ಮೂಲಕ ನಟಿ ಭಾವನಾ ರಾಮಣ್ಣ ಗರ್ಭ ಧರಿಸಿದ್ದರು. ಅವರು ಅವಳಿ ಮಕ್ಕಳಿಗೆ ತಾಯಿ ಆಗುವವರಿದ್ದರು. ಈ ವಿಷಯವನ್ನು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ತಮ್ಮ ನಿರ್ಧಾರಕ್ಕೆ ಬಂದ ಟೀಕೆಗಳನ್ನು ವಿರೋಧಿಸಿದ್ದರು.

ಭಾವನಾ ರಾಮಣ್ಣ ಅವರು ಇತ್ತೀಚೆಗಷ್ಟೆ ಸೀಮಂತ ಸಹ ಮಾಡಿಕೊಂಡಿದ್ದರು. ಅವರ ಆಪ್ತರು, ಕುಟುಂಬದವರು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗೆ ಹರಿಸಿದ್ದರು.

ಆದರೆ ಭಾವನಾ ರಾಮಣ್ಣ ಅವರಿಗೆ ಅವರ ಪ್ರಸವದ ಏಳನೇ ತಿಂಗಳಲ್ಲಿ ಆಘಾತ ಎದುರಾಯ್ತು, ಸ್ಕ್ಯಾನಿಂಗ್ನಲ್ಲಿ ಗರ್ಭದಲ್ಲಿದ್ದ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಸಮಸ್ಯೆ ಎದುರಾಗಿತ್ತು.

ಹೀಗಾಗಿ ವೈದ್ಯರ ಸಲಹೆಯಂತೆ ಎಂಟನೇ ತಿಂಗಳಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿ, ಅವಳಿ ಮಕ್ಕಳಲ್ಲಿ ಒಂದು ಮಗು ನಿಧನ ಹೊಂದಿದ್ದು ಇನ್ನೊಂದು ಮಗು ಆರೋಗ್ಯವಾಗಿದೆ. ಭಾವನಾ ಸಹ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಭಾವನಾ ಅವರಿಗೆ ಹೆಣ್ಣು ಮಗುವಿನ ಜನನವಾಗಿದೆ. ಜೋಡಿ ಮಕ್ಕಳ ತಾಯಿಯಾಗುವ ನಿರೀಕ್ಷೆಯಲ್ಲಿದ್ದ ಭಾವನಾ ಅವರು ಈಗ ಒಂದು ಮಗುವನ್ನು ಕಳೆದುಕೊಂಡಿದ್ದಾರೆ.
Published On - 9:42 pm, Sat, 6 September 25