AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: ವೀರಭದ್ರೇಶ್ವರ ದೇವರ ಜಾತ್ರೆಯಲ್ಲಿ ಜಗಜಟ್ಟಿಗಳ ಸೆಣಸಾಟ, ಮುಗಿಲು ಮುಟ್ಟಿದ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ

Bidar: ವೀರಭದ್ರೇಶ್ವರ ಜಾತ್ರೆಯಲ್ಲಿ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಜಗಜಟ್ಟಿಗಳ ಸೆಣಸಾಟ ಗಮನ ಸೆಳೆಯಿತು. ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಪಾರ ಜನರು ಕುಸ್ತಿ ಅಖಾಡದತ್ತ ಆಗಮಿಸಿ ಪಂದ್ಯಾವಳಿ ವೀಕ್ಷಿಸಿದರು.

TV9 Web
| Updated By: Rakesh Nayak Manchi|

Updated on:Nov 11, 2022 | 3:43 PM

Share
ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಚಾಂಗಲೇರಾ ವೀರಭದ್ರೇಶ್ವರ ದೇವರ ಜಾತ್ರೆಯ ಪ್ರಯುಕ್ತ ಪುರುಷ ಕುಸ್ತಿ ಪಂದ್ಯಾವಳಿ ನಡೆಯಿತು. ಜನಸ್ತೋಮದ ಮಧ್ಯ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಜಗಜಟ್ಟಿಗಳ ಸೆಣಸಾಟ ಗಮನ ಸೆಳೆಯಿತು.

Bidar Veerabhadreswara Fair Men's Wrestling Tournament People flock ed to watch rural sports Bidar news in kannada

1 / 7
ಈ ಕುಸ್ತಿಯಲ್ಲಿ ದೂರದ ಊರುಗಳಿಂದ ಹಾಗೂ ಹೊರ ರಾಜ್ಯದಿಂದ ಬಂದಿದ್ದವರಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ಕೊಡಲಾಯಿತು. ಇದ್ದಕ್ಕೂ ಮೊದಲು ಹಲಗೆ, ತಬಲ ವಾದ್ಯಗಳನ್ನು ಬಾರಿಸಿ ಕುಸ್ತಿ ಪಟುಗಳನ್ನು ಜನರಿಗೆ ಪರಿಚಯಿಸಲಾಯಿತು. ಘಟಾನುಘಟಿ ಸ್ಪರ್ಧಿಗಳು ಪರಸ್ಪರ ಕೈ ಮಿಲಾಯಿಸುವ ಮೂಲಕ ಜಂಗಿ ಕುಸ್ತಿಗೆ ಚಾಲನೆ ನೀಡಲಾಯಿತು. ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಇಲ್ಲಿ ಭಾಗವಹಿಸಿದ್ದರು.

Bidar Veerabhadreswara Fair Men's Wrestling Tournament People flock ed to watch rural sports Bidar news in kannada

2 / 7
Bidar Veerabhadreswara Fair Men's Wrestling Tournament People flock ed to watch rural sports Bidar news in kannada

ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಪಾರ ಜನರು ಕುಸ್ತಿ ಅಖಾಡದತ್ತ ಆಗಮಿಸಿ ಪಂದ್ಯಾವಳಿ ವೀಕ್ಷಿಸಿದರು. ಕಣ್ಣು ಹಾಯಿಸಿದಷ್ಟು ದೂರಕ್ಕೆ ಜನರು ನೆರೆದಿದ್ದರು. ಇನ್ನೂ ಈ ಕುಸ್ತಿ ಪಂದ್ಯಾವಳಿಯಲ್ಲಿ 100 ರೂ.ನಿಂದ 10 ಸಾವಿರ ರೂಪಾಯಿವರೆಗೆ ಬಹುಮಾನವನ್ನ ಇಟ್ಟಿದ್ದರು.

3 / 7
Bidar Veerabhadreswara Fair Men's Wrestling Tournament People flock ed to watch rural sports Bidar news in kannada

ನಾವೇನು ಕಮ್ಮಿ ಇಲ್ಲ ಎಂದು ಹೇಳುತ್ತಾ ಸಣ್ಣ ಮಕ್ಕಳು ಕೂಡ ಅಂಕಣಕ್ಕೆ ಇಳಿದು ಕುಸ್ತಿ ಆಡಿದರು. ಆರಂಭಿಕ ಪಂದ್ಯದಲ್ಲಿ ಭಾರಿ ಸೆಣೆಸಾಟ ನಡೆಸಿದ ಕುಸ್ತಿ ಕುಸ್ತಿಪಟುಗಳನ್ನ ನೋಡಿದ ಪ್ರೇಕ್ಷಕರು ಕುಸ್ತಿಪ್ರೇಮಿಗಳು ಕೇಕೆ, ಶಿಳ್ಳೆ ಹಾಕಿ ಹುರಿದುಂಬಿಸಿದರು. ಹಲವು ಕುಸ್ತಿ ಪಟುಗಳು ಅನಿರೀಕ್ಷಿತ ಫಲಿತಾಂಶ ನೀಡುವ ಮೂಲಕ ನೆರದಿದ್ದವರನ್ನು ಚಕಿತಗೊಳಿಸಿದರು.

4 / 7
Bidar Veerabhadreswara Fair Men's Wrestling Tournament People flock ed to watch rural sports Bidar news in kannada

ಈ ಕುಸ್ತಿ ಪಂದ್ಯಾವಳಿಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು 40ವರ್ಷ ವಯಸ್ಸಿನವರೆಗಿನ ಕುಸ್ತಿ ಪಟುಗಳು ಭಾಗವಹಿ ತಮ್ಮ ಸಾಮರ್ಥ್ಯವನ್ನ ಪ್ರದರ್ಶಿಸಿದರು. ಬೆಳಗಾವಿ, ಕೊಲ್ಲಾಪುರ, ಸಾಂಗ್ಲಿ, ಹರಪನಹಳ್ಳಿ, ದಾವಣಗೆರೆ, ಹೊಸಪೇಟೆ, ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು.

5 / 7
Bidar Veerabhadreswara Fair Men's Wrestling Tournament People flock ed to watch rural sports Bidar news in kannada

ಪ್ರತಿ ವರ್ಷದಂತೆ ಈ ವರ್ಷ ಕೂಡ ಇಲ್ಲಿ ನೂರಾರು ಪಟುಗಳು ಬಂದಿದ್ದು ಅದರಲ್ಲಿ ಮಹರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಕುಸ್ತಿ ಆಡಲು ಪಟುಗಳು ಬಂದು ತಕ್ಕ ಸಾಮರ್ಥ್ಯ ಪಟುವನ್ನ ಆಯ್ಕೆ ಮಾಡಿಕೊಂಡು ಕುಸ್ತಿಗೆ ಇಳಿಯುತ್ತಾರೆ. ಇಲ್ಲಿ ಹಣ ನೀಡುತ್ತಾರೆ ಎಂಬುದಕ್ಕಿಂತ ಕುಸ್ತಿ ಆಡಿ ತಮ್ಮ ಸಾಮರ್ಥ್ಯ ತೊರಿಸುತ್ತಾರೆ ಅಂತಾ ಆಯೋಜಕರು ಹೇಳುತ್ತಿದ್ದಾರೆ.

6 / 7
Bidar Veerabhadreswara Fair Men's Wrestling Tournament People flock ed to watch rural sports Bidar news in kannada

ಈ ಭಾರಿ ಕುಸ್ತಿಯಲ್ಲಿ ಈ ಬಾರಿ ವಿಶೇಷ ಆಕರ್ಷಣೆ ಎಂದರೆ ಬೆಳ್ಳಿಯ ಕಡ್ಗವನ್ನ ಬಹುಮಾನವಾಗಿ ಇಟ್ಟಿದ್ದರು. ಹೀಗಾಗಿ ಘಟಾನುಘಟಿ ಕುಸ್ತಿಯ ಪಟುಗಳು ಆಗಮಿಸಿದ್ದರಿಂದ ಜನರು ಕಣ್ಣು ಪೀಳುಕಿಸದೆ ಕುಸ್ತಿಯನ್ನ ನೋಡಿದರು. ಅದರಂತೆ ಪಂದ್ಯದಲ್ಲಿ ಎದುರಾಳಿಯನ್ನು ಮಣಿಸಿದ ಕುಸ್ತಿಪಟು ಪವನ್ ಬೆಳ್ಳಿ ಖಡ್ಗ ಗೆದ್ದುಕೊಂಡರು. (ವರದಿ: ಸುರೇಶ್ ನಾಯಕ್, ಟಿವಿ9 ಬೀದರ್)

7 / 7

Published On - 3:41 pm, Fri, 11 November 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?