ಮಾತು ಕಡಿಮೆ, ಕೆಲಸ ಜಾಸ್ತಿ; ಸ್ವಿಚ್ ಆಫ್ ಆಗೋದು ಕಡಿಮೆ ಆದ್ರೆ ಕಪ್ ಇವರದ್ದೇ

|

Updated on: Jan 21, 2025 | 11:43 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದವರು ಹನುಮಂತ. ಅವರು ಬಿಗ್ ಬಾಸ್ ಆರಂಭ ಆದ ಕೆಲವೇ ವಾರಗಳಲ್ಲಿ ದೊಡ್ಮನೆಗೆ ಎಂಟ್ರಿ ಪಡೆದರು. ಅವರ ಪ್ಲಸ್ ಹಾಗೂ ಮೈನಸ್ ಬಗ್ಗೆ ಈ ಸ್ಟೋರಿಯಲ್ಲಿ ವಿವರ ಇದೆ.

1 / 5
ಬಿಗ್ ಬಾಸ್​ನಲ್ಲಿ ಹಾಡಿನ ಮೂಲಕ, ಆಟದ ಮೂಲಕ ಎಲ್ಲರ ಗಮನ ಸೆಳೆದವರು ಹನುಮಂತ. ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಕಪ್ ಗೆಲ್ಲಬೇಕು ಎನ್ನುವ ಆಸೆ ಇದೆ. ಅವರು ಹಲವು ಪ್ಲಸ್ ಹಾಗೂ ಮೈನಸ್​ಗಳನ್ನು ಹೊಂದಿದ್ದಾರೆ.

2 / 5
ಹನುಮಂತ ಅವರಲ್ಲಿ ಇಷ್ಟ ಆಗುವ ಗುಣ ಎಂದರೆ ಮಾತು ಕಡಿಮೆ, ಕೆಲಸ ಹೆಚ್ಚು. ಅವರ ಜೊತೆ ಯಾರಾದರೂ ವಾದಕ್ಕೆ ಇಳಿದರೂ ಅಷ್ಟಾಗಿ ಮಾತನಾಡುವುದಿಲ್ಲ. ಬದಲಿಗೆ ಸೈಲೆಂಟ್ ಆಗಿ ಇರುತ್ತಾರೆ. ಅವರದ್ದು ಕೆಲಸ ಹೆಚ್ಚು. ಟಾಸ್ಕ್ ಮೂಲಕ ತಮ್ಮ ತಾಕತ್ತನ್ನು ತೋರಿಸಿದ್ದಾರೆ.

3 / 5
ಬಿಗ್ ಬಾಸ್​ನಲ್ಲಿ ಟಾಸ್ಕ್​ಗಳನ್ನು ಹನುಮಂತ ಅವರು ಉತ್ತಮವಾಗಿ ಆಡಿದ್ದಾರೆ. ಇದು ಅವರಿಗೆ ಪ್ಲಸ್ ಕೂಡ ಹೌದು. ಇನ್ನು, ಮನರಂಜನೆ ನೀಡುವುದರಲ್ಲಿ ಅವರು ಹಿಂದೆ ಬಿದ್ದಿಲ್ಲ. ಅವರ ಆಟ, ಬುದ್ಧಿವಂತಿಕೆ ಕಿಚ್ಚ ಸುದೀಪ್ ಅವರಿಗೂ ಇಷ್ಟ ಆಗಿದೆ.

4 / 5
ಹನುಮಂತ ಅವರು ಧನರಾಜ್ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು. ಈಗ ಧನರಾಜ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಹನುಮಂತ ಅವರು ಎಲ್ಲಿ ಸ್ವಿಚ್​ ಆಫ್ ಆಗಿ ಬಿಡುತ್ತಾರೋ ಎನ್ನುವ ಭಯ ಅಭಿಮಾನಿಗಳಿಗೆ ಇದೆ.

5 / 5
ಸ್ವಿಚ್ ಆಫ್ ಆಗೋದು ಕಡಿಮೆ ಮಾಡಿದರೆ ಅವರಿಗೆ ಸಹಕಾರಿ ಆಗಲಿದೆ. ಅವರು ಮುಂಬರುವ ಅಷ್ಟೂ ದಿನ ಆ್ಯಕ್ಟೀವ್ ಆಗಿ ಇರಬೇಕಿದೆ. ಹಾಗಿದ್ದರೆ ಮಾತ್ರ ಹನುಮಂತ ಅವರಿಗೆ ಕಪ್ ಗೆಲ್ಲಲು ಸಾಧ್ಯವಾಗಲಿದೆ. ಕಪ್ ಗೆದ್ದರೆ ಅವರಿಗೆ 50 ಲಕ್ಷ ರೂಪಾಯಿ ಸಿಗಲಿದೆ.

Published On - 11:42 am, Tue, 21 January 25