
ಈ ಫೋಟೋದಲ್ಲಿ ಇರೋದು ತ್ರಿವಿಕ್ರಂ. ಅವರು ಬಾಲ್ಯದಲ್ಲಿ ತಂದೆಯ ಜೊತೆ ಇರೋ ಫೋಟೋ ಇದಾಗಿದೆ. ಈ ಫೋಟೋನ ಗೆಸ್ ಮಾಡೋಕೆ ಬಿಗ್ ಬಾಸ್ನಲ್ಲಿ ಕೆಲವರಿಗೆ ಸಾಧ್ಯವಾಗಿಲ್ಲ.

ಇದು ಬೇರಾರೂ ಅಲ್ಲ ‘ಸತ್ಯ’ ಖ್ಯಾತಿಯ ಗೌತಮಿ ಜಾಧವ್. ಪ್ರತಿ ಶನಿವಾರ ಅವರ ಸಮುದಾಯದಲ್ಲಿ ನಾಮ ಇಡಲಾಗುತ್ತದೆಯಂತೆ. ಅದೇ ರೀತಿ ಯಾವುದೋ ಒಂದು ಶನಿವಾರ ತೆಗೆದ ಫೋಟೋ ಇದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದು ಚೈತ್ರಾ ಕುಂದಾಪುರ. ಇದನ್ನು ಮನೆಯ ಎಲ್ಲರೂ ಏಕಕಾಲದಲ್ಲಿ ಗುರುತಿಸಿದ್ದಾರೆ. ಅವರ ಮುಖ ಈಗಲೂ ಹಾಗೆಯೇ ಇದೆ. ಈಗ ಹೆಚ್ಚಿನ ಬದಲಾವಣೆ ಆಗಿಲ್ಲ.

ಇದು ಮಹಿಳಾ ಸ್ಪರ್ಧಿ ಎಂದುಕೊಳ್ಳಬೇಡಿ. ಈ ಫೋಟೋದಲ್ಲಿ ಇರೋದು ಶಿಶಿರ್. ಅವರ ತಂದೆ-ತಾಯಿಗೆ ಹೆಣ್ಣು ಮಗು ಜನಿಸಬೇಕು ಎಂದಿತ್ತಂತೆ. ಈ ಕಾರಣದಿಂದಲೇ ಶಿಶಿರ್ಗೆ ಹೆಣ್ಣು ವೇಷ ಹಾಕಲಾಗಿತ್ತು.

ಇದು ಧರ್ಮ ಕೀರ್ತಿರಾಜ್. ಅವರ ಬಾಲ್ಯದ ಫೋಟೋನ ಡಿಸ್ಪ್ಲೇ ಮಾಡಲಾಯಿತು. ಕೆಲವರು ಸರಿಯಾಗಿ ಊಹಿಸಿದ್ದಾರೆ. ಧರ್ಮ ಅವರು ನಟ ಕೀರ್ತಿರಾಜ್ ಅವರ ಪುತ್ರ.

ಇದು ಧನರಾಜ್ ಅವರ ಫೋಟೋ. ಅವರು ಇದ್ದಿದ್ದು ಕೂಡು ಕುಟುಂಬದಲ್ಲಿ. ಸಾಕಷ್ಟು ದೊಡ್ಡ ಕುಟುಂಬ ಇವರದ್ದಾಗಿತ್ತು. ಅವರು ತಮ್ಮ ಬಾಲ್ಯದ ಅನುಭವವನ್ನು ಎಲ್ಲರ ಎದುರು ಹಂಚಿಕೊಂಡರು.

ಇದರಲ್ಲಿ ಮಧ್ಯದಲ್ಲಿ ಇರೋದು ಉಗ್ರಂ ಮಂಜು. ಅವರ ಫೋಟೋ ಗಮನ ಸೆಳೆದಿದೆ. ಮಂಜು ಅವರು ಈಗ ನಟನಾಗಿ ಗುರುತಿಸಿಕೊಂಡಿದ್ದಾರೆ.

ಇದು ಮೋಕ್ಷಿತಾ ಪೈ. ಅವರ ಫೋಟೋನ ಡಿಸ್ಫ್ಲೇ ಮಾಡಲಾಯಿತು. ಈ ಫೋಟೋ ಸಾಕಷ್ಟು ಗಮನ ಸೆಳೆದಿದೆ. ಇವರನ್ನು ಬಹುತೇಕರು ಸರಿಯಾಗಿ ಗುರುತಿಸಿದರು.

ಇವರು ಭವ್ಯಾ ಎಂದು ಎಲ್ಲರೂ ಸುಲಭದಲ್ಲಿ ಊಹಿಸಿ ಬಿಡುತ್ತಾರೆ. ಇದಕ್ಕೆ ಕಾರಣ ಅವರ ಗ್ಲಾಮರ್. ಚಿಕ್ಕ ವಯಸ್ಸಲ್ಲಿ ಅವರು ನಗು ಮುಖದಲ್ಲೇ ಇದ್ದರು.

ಹನುಮಂತ ಹಾಗೂ ಸುರೇಶ್ ಅವರ ಬಾಲ್ಯದ ಫೋಟೋ ಡಿಸ್ಪ್ಲೇ ಮಾಡಿಲ್ಲ. ಹನುಮಂತ ಅವರು ಬಾಲ್ಯದ ಅನುಭವ ಹಂಚಿಕೊಂಡರು.
Published On - 7:33 am, Fri, 15 November 24