ಹದಿನೇಳೂ ಅಲ್ಲ, ಹದಿನೆಂಟೂ ಅಲ್ಲ; ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್​ಗೆ ಎಂಟ್ರಿ

Updated on: Sep 28, 2025 | 3:01 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ಬಾಕಿ ಇರೋದು ಇನ್ನು ಕೆಲವೇ ಗಂಟೆಗಳು ಮಾತ್ರ. ಈ ಕ್ಷಣಕ್ಕಾಗಿ ಅನೇಕರು ಕಾದು ಕುಳಿತಿದ್ದಾರೆ. ಹೀಗಿರುವಾಗಲೇ ದೊಡ್ಮನೆಗೆ ಬರುವ ಸ್ಪರ್ಧಿಗಳ ಸಂಖ್ಯೆ ಬಗ್ಗೆ ಕುತೂಹಲ ಮೂಡಿದೆ. ಊಹಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಬಿಗ್ ಬಾಸ್​ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

1 / 5
ಬಿಗ್ ಬಾಸ್​ನಲ್ಲಿ ಪ್ರತಿ ಬಾರಿ 17 ಅಥವಾ 18 ಸ್ಪರ್ಧಿಗಳು ಬರೋದು ವಾಡಿಕೆ. ಆದರೆ, ಈ ಬಾರಿ ಸ್ಪರ್ಧಿಗಳ ಸಂಖ್ಯೆ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಆಗಿರೋದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರೋ ಪೋಸ್ಟರ್.

2 / 5
‘ಮೂವರ ಹೆಸರು ರಿವೀಲ್ ಮಿಕ್ಕಿದವರು ಯಾರು’ ಎಂದು ಪ್ರಶ್ನೆ ಮಾಡುವ ಪೋಸ್ಟರ್​ನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪೋಸ್ಟರ್​ನಲ್ಲಿ ಈಗಾಗಲೇ ರಿವೀಲ್ ಆದ ಮಂಜು ಭಾಷಿಣಿ, ಮಾತಿನ ಮಲ್ಲಿ ಮಲ್ಲಮ್ಮ ಹಾಗೂ ಕಾಕ್ರೋಚ್ ಸುಧಿ ಹೆಸರು ಇದೆ.

3 / 5
ಇಷ್ಟೇ ಆಗಿದ್ದರೆ ವೀಕ್ಷಕರು ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಈ ಪೋಸ್ಟರ್​​ನಲ್ಲಿ ಉಳಿದ ಸ್ಥಾನಗಳಿಗೆ ಬರಬೇಕಿರುವ ಸ್ಪರ್ಧಿಗಳ ಪೋಸ್ಟರ್​ನ ಜಾಗವನ್ನು ಖಾಲಿ ಬಿಡಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಒಟ್ಟೂ ಸಂಖ್ಯೆ 19 ಆಗುತ್ತದೆ.

4 / 5
ಹೀಗಾಗಿ, ಈ ಬಾರಿ ಬಿಗ್ ಬಾಸ್ ಮನೆಗೆ 19 ಸ್ಪರ್ಧಿಗಳು ಬರುತ್ತಿರಬಹುದು ಎಂದು ಊಹಿಸಲಾಗುತ್ತಿದೆ. ಇದರಲ್ಲಿ ನಾನಾ ಕ್ಷೇತ್ರದವರು ಇರಲಿದ್ದಾರೆ. ಇದರಿಂದ ಸ್ಪರ್ಧೆ ಕೂಡ ಜೋರಾಗುವ ನಿರೀಕ್ಷೆ ಇದೆ.

5 / 5
ಸದ್ಯ ಬಿಗ್ ಬಾಸ್ ಮನೆ ಪ್ರವೇಶಿಸಿರುವ ಮೂವರ ಹೆಸರು ರಿವೀಲ್ ಆಗಿದೆ. ಮಂಜು ಅವರು ಕಿರುತೆರೆಯವರು. ಸುಧಿ ಹಿರಿತೆರೆ ಹಾಗೂ ಮಲ್ಲಮ್ಮ ಅವರು ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದವರಾಗಿದ್ದಾರೆ.