
ನಮ್ರತಾ ಗೌಡ ಅವರು ಕಿರುತೆರೆಯಲ್ಲಿ ಸಖಥ್ ಫೇಮಸ್ ಆದವರು. ‘ನಾಗಿಣಿ 2’ ಧಾರಾವಾಹಿ ಮೂಲಕ ನಮ್ರತಾ ಸಖತ್ ಮೆಚ್ಚುಗೆ ಪಡೆದರು. ನಂತರ ‘ಬಿಗ್ ಬಾಸ್ ಕನ್ನಡ ಸೀಸನ್ 10’ಗೆ ತೆರಳಿ ಸಾಕಷ್ಟು ಖ್ಯಾತಿ ಗಳಿಸಿದರು.

ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ಆಗಿ ಆಗಮಿಸಿದ್ದರು. ಆರಂಭದಲ್ಲಿ ಟೀಕೆಗೆ ಒಳಗಾದ ಅವರು ನಂತರ ಬದಲಾದರು. ಅವರು ಬಿಗ್ ಬಾಸ್ನಲ್ಲಿ ಸಖತ್ ಶೈನಾ ಆಗಿದ್ದಾರೆ. ಅವರ ಫೋಟೋ ಗಮನ ಸೆಳೆದಿದೆ.

ನಮ್ರತಾ ಗೌಡ ಅವರಿಗೆ ಸೀರೆಗಳ ಮೇಲೆ ವಿಶೇಷ ಪ್ರೀತಿ ಇದೆ. ಅವರು ಆಗಾಗ ಸೀರೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.

ನಮ್ರತಾ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ವಿಶೇಷ ಸಂದರ್ಭಗಳಲ್ಲಿ ಸೀರೆ ಧರಿಸಿ ಗಮನ ಸೆಳೆದಿದ್ದು ಇದೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಅವರು ಸ್ಯಾರಿಯಲ್ಲಿ ಪೋಸ್ ಕೊಡುತ್ತಿದ್ದಾರೆ.

ನಮ್ರತಾ ಅವರು ಹಲವು ಬ್ರ್ಯಾಂಡ್ಗಳ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಅವರ ಸೀರೆ ಪ್ರೀತಿ ನೋಡಿ ಅನೇಕ ಸೀರೆ ಅಂಗಡಿಗಳು ಅವರ ಜೊತೆ ಕೊಲ್ಯಾಬರೇಷನ್ ಮಾಡಿಕೊಳ್ಳುತ್ತಿವೆ.