BBK 9 Contestant List: ಈ ಸೀಸನ್​ಗೆ ಎಂಟ್ರಿ ಕೊಟ್ಟಿದ್ದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ-ವಿವರ

Edited By:

Updated on: Dec 30, 2022 | 9:23 PM

ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ಫಿನಾಲೆ ವೀಕ್​ನಲ್ಲಿದ್ದಾರೆ.

1 / 18
ಐಶ್ವರ್ಯಾ ಪಿಸ್ಸೆ ವೃತ್ತಿಯಲ್ಲಿ ಬೈಕ್ ರೇಸರ್. ಆದರೆ, ಎರಡನೇ ವಾರಕ್ಕೆ ಔಟ್ ಆದರು.

ಐಶ್ವರ್ಯಾ ಪಿಸ್ಸೆ ವೃತ್ತಿಯಲ್ಲಿ ಬೈಕ್ ರೇಸರ್. ಆದರೆ, ಎರಡನೇ ವಾರಕ್ಕೆ ಔಟ್ ಆದರು.

2 / 18

ಅಮೂಲ್ಯ ಗೌಡ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ಫಿನಾಲೆಗೂ ಕೆಲವೇ ವಾರ ಇರುವಾಗ ಔಟ್ ಆದರು.

3 / 18

ಅನುಪಮಾ ಗೌಡ ಅವರು ಎರಡನೇ ಬಾರಿ ಬಿಗ್ ಬಾಸ್​ಗೆ ಬಂದಿದ್ದರು. ಹಲವು ವಾರ ಅವರು ದೊಡ್ಮನೆಯಲ್ಲಿದ್ದರು.

4 / 18

ಅರುಣ್ ಸಾಗರ್ ಮೊದಲ ಸೀಸನ್​​ಗೆ ಎಂಟ್ರಿ ಕೊಟ್ಟಿದ್ದರು. ಇದು ಅವರಿಗೆ ಎರಡನೇ ಬಾರಿ. ಕಳೆದ ವಾರ ಇವರು ಔಟ್ ಆದರು.

5 / 18

ಆರ್ಯವರ್ಧನ್​ ಗುರೂಜಿ ಒಟಿಟಿ ಟಾಪ್​ ನಾಲ್ಕರಲ್ಲಿ ಇದ್ದರು. ಈ ವಾರದ ಮಿಡ್​ ವೀಕ್​ನಲ್ಲಿ ಅವರು ಔಟ್ ಆದರು.

6 / 18

ಕಿರುತೆರೆ ನಟ ದರ್ಶ್​ ದೊಡ್ಮನೆಯಲ್ಲಿ ಹೆಚ್ಚು ಗಮನ ಸೆಳೆಯಲಿಲ್ಲ.

7 / 18

ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ಫಿನಾಲೆ ವೀಕ್​ನಲ್ಲಿದ್ದಾರೆ.

8 / 18

ದಿವ್ಯಾ ಉರುಡುಗ ಅವರು ಸೀಸನ್ 8ರಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್​ ಫಿನಾಲೆ ವೀಕ್​ನಲ್ಲಿದ್ದಾರೆ.

9 / 18

ಕಾವ್ಯಶ್ರೀ ಗೌಡ ‘ಮಂಗಳ ಗೌರಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇವರು ಹಲವು ವಾರ ದೊಡ್ಮನೆಯಲ್ಲಿದ್ದರು.

10 / 18

ನಟಿ ಮಯೂರಿ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಒಂದೂವರೆ ವರ್ಷದ ಮಗುನ ಮನೆಯಲ್ಲಿ ಬಿಟ್ಟು ದೊಡ್ಮನೆಗೆ ಬಂದಿದ್ದರು.

11 / 18

ಭಿನ್ನ ರೀತಿಯಲ್ಲಿ ಸಿನಿಮಾ ವಿಮರ್ಶೆ ಮಾಡಿ ನವಾಜ್ ಗಮನ ಸೆಳೆದಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚು ದಿನ ಇವರ ಆಟ ನಡೆಯಲಿಲ್ಲ.

12 / 18

ಗೊಂಬೆ ಎಂದೇ ಫೇಮಸ್ ಆದ ನೇಹಾ ಗೌಡ ಅವರು ಈ ಬಾರಿ ಸ್ಪರ್ಧಿ ಆಗಿದ್ದರು.

13 / 18

ಸೀಸನ್ 8ರಲ್ಲಿ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ರೀ ಎಂಟ್ರಿ ಆಗಿತ್ತು. ಅವರು ಹಲವು ವಾರ ದೊಡ್ಮನೆಯಲ್ಲಿದ್ದರು.

14 / 18

ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ರಾಕೇಶ್ ಅಡಿಗ ಅವರು ಟಿವಿ ಸೀಸನ್​ಗೆ ಬಂದಿದ್ದಾರೆ. ಫಿನಾಲೆ ರೇಸ್​ನಲ್ಲಿ ಅವರು ಇದ್ದಾರೆ.

15 / 18

ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್​ಗೆ ಬಂದಿದ್ದಾರೆ. ಫಿನಾಲೆ ರೇಸ್​ನಲ್ಲಿ ಅವರು ಇದ್ದಾರೆ.

16 / 18

ರೂಪೇಶ್ ರಾಜಣ್ಣ ಕನ್ನಡ ಹೋರಾಟಗಾರ ಆಗಿದ್ದಾರೆ. ಅವರು ಕೂಡ ಫಿನಾಲೆಯಲ್ಲಿದ್ದಾರೆ.

17 / 18

ಸಾನ್ಯಾ ಅಯ್ಯರ್ ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದರು. ಟಿವಿ ಸೀಸನ್​ಗೆ ಬಂದು ಹಲವು ವಾರ ದೊಡ್ಮನೆಯಲ್ಲಿದ್ದರು.

18 / 18

ವಿನೋದ್ ಗೊಬ್ಬರಗಾಲ ದೊಡ್ಮನೆಯಲ್ಲಿ ಹಲವು ವಾರ ಕಳೆದು ಹೋಗಿದ್ದಾರೆ.

Loading...
Unable to load recommendations.
Follow Us