ಆರಂಭದಲ್ಲಿ ಬಿಗ್ ಬಾಸ್ ಮನೆ ಯಾವಾಗಲೂ ಶಾಂತವಾಗಿ ಇರುತ್ತದೆ. ಬೇರೆ ಬೇರೆ ಕ್ಷೇತ್ರಗಳಿಂದ ಬಂದ ವ್ಯಕ್ತಿಗಳನ್ನು ಪರಸ್ಪರ ಅರ್ಥ ಮಾಡಿಕೊಳ್ಳಲು ಮೊದಲ ವಾರ ತುಂಬ ಮುಖ್ಯವಾಗುತ್ತದೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸ್ಪರ್ಧಿಗಳಿಗೆ ಮೊದಲ ವಾರವೇ ಒಂದಷ್ಟು ಟಾಸ್ಕ್ಗಳನ್ನು ನೀಡಲಾಗಿದೆ. ಇದನ್ನು ಎಲ್ಲರೂ ತುಂಬ ಖುಷಿಖುಷಿಯಾಗಿ ನಿಭಾಯಿಸುತ್ತಿದ್ದಾರೆ. ಸದ್ಯಕ್ಕಂತೂ ಮನೆ ಕೂಲ್ ಆಗಿದೆ.
ದಿನ ಕಳೆದಂತೆ ದೊಡ್ಮನೆಯ ಪರಿಸ್ಥಿತಿ ಬದಲಾಗುತ್ತದೆ. ಆಟದ ಕಾವು ಹೆಚ್ಚುತ್ತದೆ. ಸ್ಪರ್ಧೆ ಕಠಿಣ ಆಗುತ್ತಿದ್ದಂತೆಯೇ ಸ್ಪರ್ಧಿಗಳ ಮನಸ್ಥಿತಿ ಕೂಡ ಬದಲಾಗುತ್ತದೆ. ಜಗಳಗಳು ಬಿಗ್ ಬಾಸ್ ಮನೆಯಲ್ಲಿ ತುಂಬ ಕಾಮನ್.
ಸಿನಿಮಾ, ಕಿರುತೆರೆ, ಸೋಶಿಯಲ್ ಮೀಡಿಯಾದಿಂದ ಒಟ್ಟು 18 ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಮೊದಲ ವಾರ 12 ಮಂದಿ ನಾಮಿನೇಟ್ ಆಗಿದ್ದಾರೆ. ಎಲಿಮಿನೇಷನ್ನಿಂದ ಬಚಾವ್ ಆಗಲು ಎಲ್ಲರೂ ಕಷ್ಟಪಟ್ಟು ಆಡುತ್ತಿದ್ದಾರೆ.
ವೀಕೆಂಡ್ನಲ್ಲಿ ವಾರದ ಪಂಚಾಯಿತಿ ನಡೆಯಲಿದೆ. ಪ್ರತಿ ದಿನ ಸ್ಪರ್ಧಿಗಳು ಮಾಡಿದ ಸರಿ-ತಪ್ಪುಗಳನ್ನು ಇಟ್ಟುಕೊಂಡು ಕಿಚ್ಚ ಸುದೀಪ್ ಅವರು ಎಲ್ಲರ ಜತೆ ಮಾತುಕಥೆ ನಡೆಸುತ್ತಾರೆ. ಮೊದಲ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೂತೂಹಲ ಹೆಚ್ಚಿದೆ.
Published On - 3:38 pm, Tue, 27 September 22