
ಹಲವು ಕಾರಣಗಳಿಂದಾಗಿ ವೀಕ್ಷಕರಿಗೆ ರಾಕೇಶ್ ಅಡಿಗ ಅವರು ಫೇವರಿಟ್ ಆಗಿದ್ದರು. ಅವರೇ ವಿನ್ನರ್ ಆಗುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ. ಕೊನೇ ಕ್ಷಣದಲ್ಲಿ ಟ್ರೋಫಿ ಮಿಸ್ ಆಯಿತು.

100 ದಿನಗಳ ಕಾಲ ನಡೆದ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋಗೆ ತೆರೆ ಬಿದ್ದಿದೆ. ಫಿನಾಲೆಯ ಅಂತಿಮ ಘಟ್ಟದಲ್ಲಿ ರಾಕೇಶ್ ಅಡಿಗ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದರು.

ರನ್ನರ್ ಅಪ್ ಆದ ರಾಕೇಶ್ ಅಡಿಗ ಅವರು ‘ಬೆಸ್ಟ್ ಕ್ಯಾಪ್ಟನ್ ಆಫ್ ದ ಸೀಸನ್’ ಅವಾರ್ಡ್ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಪ್ರಯೋಜಕರ ಕಡೆಯಿಂದ ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತು.

ಫಸ್ಟ್ ರನ್ನರ್ ಅಪ್ ಆದವರಿಗೆ ಮತ್ತೋರ್ವ ಪ್ರಯೋಜಕರಿಂದ 7 ಲಕ್ಷ ರೂಪಾಯಿ ನಗದು ಬಹುಮಾನ ನಿಗದಿ ಆಗಿತ್ತು. ಅದು ಕೂಡ ರಾಕೇಶ್ ಅಡಿಗ ಅವರ ಪಾಲಾಗಿದೆ. ಇದನ್ನು ಸಹ ಅವರು ಫಿನಾಲೆಯ ವೇದಿಕೆಯಲ್ಲಿ ಸ್ವೀಕರಿಸಿದರು.

ಈ ಎರಡು ನಗದು ಬಹುಮಾನ ಸೇರಿಸಿದರೆ ರಾಕೇಶ್ ಅಡಿಗ ಅವರಿಗೆ ಒಟ್ಟು 12 ಲಕ್ಷ ರೂಪಾಯಿ ಸಿಕ್ಕಂತೆ ಆಯಿತು. ಅಲ್ಲದೇ 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಅವರಿಗೆ ಒಂದಷ್ಟು ಸಂಭಾವನೆ ಸಿಗಲಿದೆ. ಎಲ್ಲ ಸೇರಿ ಅವರು 12 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತವನ್ನು ಪಡೆಯಲಿದ್ದಾರೆ.