- Kannada News Photo gallery BJP MLA sharanu salagar Stand on God rama idol During ram navami In basavakalyan Photos goes Viral
ರಾಮನ ಮೂರ್ತಿ ಮೇಲೆ ನಿಂತು ಪೋಸ್ ಕೊಟ್ಟ ಬಿಜೆಪಿ ಶಾಸಕ: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್
ರಾಮನವಮಿಯಂದೇ ಬಸವ ಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗಾರ ಅವರು ರಾಮನಿಗೆ ಅವಮಾನ ಮಾಡಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ. ಅವರು ಬಸವಕಲ್ಯಾಣದಲ್ಲಿ ರಾಮನ ಪ್ರತಿಕೃತಿ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕಿದ್ದಾರೆ. ಅಲ್ಲದೇ ಕೈ ಮುಗಿದು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಇದೀಗ ಎಲ್ಲಾ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.
Updated on:Mar 31, 2023 | 2:53 PM

ನಿನ್ನೆ ಎಲ್ಲೆಡೆ ರಾಮನವಮಿಯ ಸಂಭ್ರಮದಲ್ಲಿ ಮುಳುಗಿತ್ತು. ಅದಂತೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲೂ ಸಹ ಸಂಭ್ರಮ ಮನೆ ಮಾಡಿತ್ತು.

ಬಸವಕಲ್ಯಾಣದಲ್ಲಿ ಮರ್ಯಾದಾ ಪುರುಷೋತ್ತಮನ ಪ್ರಾರ್ಥನೆ ಮೊಗಳಗಿತ್ತು ಈವೇಳೆ ಬಿಜೆಪಿ ಶಾಸಕ ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಇದೇ ರಾಮನವಮಿಯ ದಿನದಂದೇ ಬಿಜೆಪಿ ಶಾಸಕರೊಬ್ಬರು ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

ರಾಮನವಮಿಯಂದೇ ಬಸವ ಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗಾರ ಅವರು ರಾಮನಿಗೆ ಅವಮಾನ ಮಾಡಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ.

ಬಸವಕಲ್ಯಾಣದಲ್ಲಿ ರಾಮನ ಪ್ರತಿಕೃತಿ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕಿದ್ದಾರೆ.

ಅಲ್ಲದೇ ಕೈ ಮುಗಿದು ಫೋಟೋಗೆ ಫೋಸ್ ಕೊಟ್ಟಿದ್ದು, ಅವರ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ರಾಮನವಮಿ ಹಿನ್ನೆಲೆಯಲ್ಲಿ ಬಸವಕಲ್ಯಾಣದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಬಿಜೆಪಿ ಶಾಸಕ ಶರಣು ಸಲಗರ ಮೈಮರೆತು, ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ರಾಮ ಮೂರ್ತಿಯ ಮೇಲೆಯೇ ಕಾಲಿಟ್ಟ ಬಿಜೆಪಿ ಶಾಸಕ ಶರಣು ಸಲಗರ ಅವರ ರಾಮಭಕ್ತಿ ಹೀಗಿದೆ! ಬಿಜೆಪಿಗೆ 'ರಾಮ' ಎಂದರೆ ಚುನಾವಣಾ ರಾಜಕೀಯದ ಸರಕು ಹೊರತು ನೈಜ ಭಕ್ತಿಯಲ್ಲ. ಬಿಜೆಪಿಯ ಭಯಂಕರ ಧರ್ಮರಕ್ಷಕರಾದ ಸಿಟಿ ರವಿ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ನಳಿನ್ ಕುಮಾರ್ ಕಟೀಲ್ ಅವರುಗಳು ರಾಮನಿಗಾದ ಈ ಅಪಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Published On - 2:51 pm, Fri, 31 March 23




