
Holi Festival1

ಕೆಲ ದಿನದ ಹಿಂದಷ್ಟೆ ಕರಾವಳಿ ಕರ್ನಾಟಕದ ದೇವಾಲಯಗಳನ್ನು ಸುತ್ತಿ ಪೂಜೆ ಮಾಡಿಸಿದ್ದ ನಟಿ ಕತ್ರಿನಾ ಕೈಫ್ ಇಂದು ಮುಂಬೈನಲ್ಲಿ ಪತಿ ವಿಕ್ಕಿ ಕೌಶಲ್ ಮತ್ತು ಕುಟುಂಬದೊಡನೆ ಹೋಳಿ ಹಬ್ಬ ಆಚರಿಸಿದ್ದಾರೆ.

ನಟಿ ಜೆನಿಲಿಯಾ ಮತ್ತು ರಿತೇಶ್ ದೇಶ್ಮುಖ್ ಅವರು ಯಾವುದೇ ಹಬ್ಬವನ್ನಾದರೂ ಒಟ್ಟಿಗೆ ಆಚರಿಸುತ್ತಾರೆ. ಇದೀಗ ಹೋಲಿ ಹಬ್ಬವನ್ನು ಪ್ರತಿ ಬಾರಿಯಂತೆ ಖುಷಿಯಿಂದ ಆಚರಣೆ ಮಾಡಿ, ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಮಾಜಿ ಗೆಳತಿ, ಟಿವಿ ಲೋಕದ ಜನಪ್ರಿಯ ನಟಿ ಅಂಕಿತಾ ಲೋಕಂಡೆ ತಮ್ಮ ಪತಿ ಮತ್ತು ಗೆಳತಿಯರೊಟ್ಟಿಗೆ ಹೋಲಿ ಪಾರ್ಟಿ ಮಾಡಿದ್ದಾರೆ. ಹೋಲಿ ಆಡಿ, ಡಿಜೆ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

ನಟ ಕಾರ್ತಿಕ್ ಆರ್ಯನ್ ಸಹ ಹೋಲಿ ಹಬ್ಬ ಆಚರಣೆ ಮಾಡಿದ್ದಾರೆ. ಕಾರ್ತಿಕ್ ಆರ್ಯನ್, ಆಶಿಖಿ 3 ಸಿನಿಮಾಕ್ಕಾಗಿ ಗಡ್ಡ ಬಿಟ್ಟಿದ್ದು ಅದೇ ಗೆಟಪ್ನಲ್ಲಿ ಕುಟುಂಬದವರೊಡನೆ ಹಬ್ಬ ಆಚರಿಸಿದ್ದಾರೆ. ಶ್ರೀಲೀಲಾ ಸಹ ಇದ್ದರಾ? ಗೊತ್ತಿಲ್ಲ.
Published On - 8:22 pm, Fri, 14 March 25