
ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಆಯೋಜನೆಗೊಂಡಿದ್ದ ಪ್ರದರ್ಶನ ಪಂದ್ಯಕ್ಕೆ ಮುಖ್ಯ ಅತಿಥಿಯಾಗಿ ತೆರಳಿದ್ದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಫುಟ್ಬಾಲ್ ದೈತ್ಯಗಳಾದ ಲಿಯೋನೆಲ್ ಮೆಸ್ಸಿ, ರೊನಾಲ್ಡೊ ಹಾಗೂ ಕೈಲಿಯನ್ ಎಂಬಪ್ಪೆ ಅವರೊಂದಿಗೆ ಹಸ್ತಲಾಘವ ಮಾಡಿ ಪಂದ್ಯಕ್ಕೆ ಶುಭಹಾರೈಸಿದ್ದಾರೆ.

ಈ ಪ್ರದರ್ಶನ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಮತ್ತು ರಿಯಾದ್ ಇಲೆವೆನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ, ಲಿಯೋನೆಲ್ ಮೆಸ್ಸಿ ಪಿಎಸ್‌ಜಿ ಪರ ಕಣಕ್ಕಿಳಿದರೆ, ರೊನಾಲ್ಡೊ ರಿಯಾದ್ ಸೀಸನ್ ತಂಡದ ಪರ ಕಣಕ್ಕಿಳಿದಿದ್ದರು.

ಅಮಿತಾಬ್ ಬಚ್ಚನ್ ಫುಟ್ಬಾಲ್ ದಂತಕಥೆಗಳಾದ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಕೈಲಿಯನ್ ಎಂಬಪ್ಪೆ ಅವರೊಂದಿಗೆ ಹಸ್ತಲಾಘವ ಮಾಡುತ್ತಿರುವ ವೀಡಿಯೊಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಬಿಗ್ ಬಿ ಕೂಡ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಈ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಈ ಪ್ರದರ್ಶನ ಪಂದ್ಯದಲ್ಲಿ ಕೈಲಿಯನ್ ಎಂಬಪ್ಪೆ, ಸೆರ್ಗಿಯೊ ರಾಮೋಸ್, ನೇಮಾರ್, ರೊನಾಲ್ಡೊ, ಮೆಸ್ಸಿ ಸೇರಿದಂತೆ ಹಲವು ಸ್ಟಾರ್ ಆಟಗಾರರು ಪಂದ್ಯದ ಭಾಗವಾಗಿದ್ದರು.
Published On - 4:24 pm, Fri, 20 January 23