Breakfast Recipes: ನಿಮ್ಮ ಮುಂಜಾನೆಯನ್ನು ಆರಂಭಿಸಲು 5 ಪೌಷ್ಟಿಕಾಂಶಭರಿತ ಉಪಾಹಾರಗಳು ಇಲ್ಲಿವೆ
ದಕ್ಷಿಣ ಭಾರತದ ಜನಪ್ರಿಯ ದೋಸೆ, ಉಪ್ಪಿಟ್ಟು, ಉತ್ತಪ್ಪಮ್ ಮತ್ತು ಇಡ್ಲಿಯಿಂದ ಉತ್ತರ ಭಾರತದ ಪ್ರಸಿದ್ಧ ಪೋಹಾ, ಪರೋಟ ಮತ್ತು ಚಿಲ್ಲಾಗಳವರೆಗೆ ನಿಮ್ಮ ಬೆಳಗ್ಗಿನ ತಿಂಡಿಯನ್ನು ನಿಮ್ಮಿಷ್ಟದಂತೆ ತಯಾರಿಸಬಹುದು.
1 / 6
ಬೆಳಗ್ಗಿನ ತಿಂಡಿ ಆರೋಗ್ಯಕರವಾಗಿ, ಪೌಷ್ಟಿಕಾಂಶಭರಿತವಾಗಿದ್ದರೆ ಆ ದಿನದ ಆರಂಭ ಚೆನ್ನಾಗಿರುತ್ತದೆ. ಇದು ದಿನವಿಡೀ ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಭಾರತೀಯ ಬ್ರೇಕ್ಫಾಸ್ಟ್ ಪಾಶ್ಚಾತ್ಯ ಉಪಾಹಾರಕ್ಕಿಂತ ಹೆಚ್ಚು ಪೌಷ್ಟಿಕಾಂಶಭರಿತ ಮತ್ತು ರುಚಿಕರವಾದುದಾಗಿದೆ. ದಕ್ಷಿಣ ಭಾರತದ ಜನಪ್ರಿಯ ದೋಸೆ, ಉಪ್ಪಿಟ್ಟು, ಉತ್ತಪ್ಪಮ್ ಮತ್ತು ಇಡ್ಲಿಯಿಂದ ಉತ್ತರ ಭಾರತದ ಪ್ರಸಿದ್ಧ ಪೋಹಾ, ಪರೋಟ ಮತ್ತು ಚಿಲ್ಲಾಗಳವರೆಗೆ ನಿಮ್ಮ ಬೆಳಗ್ಗಿನ ತಿಂಡಿಯನ್ನು ನಿಮಗೆ ಬೇಕಾದಂತೆ, ನಿಮ್ಮಿಷ್ಟದಂತೆ ತಯಾರಿಸಬಹುದು. ನಿಮಗೆ ಸಮಯದ ಕೊರತೆಯಿದ್ದರೂ ಕೆಲವೇ ನಿಮಿಷಗಳಲ್ಲಿ ನೀವು ಬೆಳಿಗ್ಗೆ ಸುಲಭವಾಗಿ ಟೇಸ್ಟಿ ಉಪಾಹಾರವನ್ನು ತಯಾರಿಸಬಹುದು.
2 / 6
1. ಪೋಹಾ:
ಪ್ರತಿಯೊಬ್ಬರ ನೆಚ್ಚಿನ ಪೋಹಾ/ ಅವಲಕ್ಕಿ ತಿನ್ನಲು ಹಗುರ ಮತ್ತು ಮಾಡಲು ಸುಲಭ. ಪೋಹಾ ಜನಪ್ರಿಯ ಉಪಹಾರವಾಗಿದ್ದು, ಇದನ್ನು ದೇಶದ ಎಲ್ಲೆಡೆಯೂ ಸೇವಿಸಲಾಗುತ್ತದೆ. ಇದರ ಉತ್ತಮ ವಿಷಯವೆಂದರೆ ಇದನ್ನು ಹಲವು ವಿಧಗಳಲ್ಲಿ ತಯಾರಿಸಬಹುದು. ಕಂಡ ಪೋಹಾ, ಸೋಯಾ ಪೋಹಾ, ಇಂದೋರಿ ಪೋಹಾ ಮತ್ತು ನಾಗ್ಪುರ ತೆಹ್ರಿ ಪೋಹಾ ಕೆಲವು ಉದಾಹರಣೆಗಳು.
3 / 6
2. ಉಪ್ಪಿಟ್ಟು:
ಉಪ್ಮಾ ಅಥವಾ ಉಪ್ಪಿಟ್ಟು ಇದು ದಕ್ಷಿಣ ಭಾರತದ ಪ್ರಸಿದ್ಧ ಉಪಹಾರ. ತರಕಾರಿಗಳನ್ನು ಹಾಕಿ ತಯಾರಿಸಿದ ರವೆ ಉಪ್ಪಿಟ್ಟು ಬಹಳ ಆರೋಗ್ಯಯುತವಾಗಿರುತ್ತದೆ. ಮೊಸರಿನ ಜೊತೆಗೆ ಇದನ್ನು ಸೇವಿಸಬಹುದು. ಈ ಪಾಕವಿಧಾನವು ಬೆಳಗಿನ ಉಪಾಹಾರಕ್ಕೆ ಸೂಕ್ತವಾಗಿದೆ. ಮೇಲೆ ತುರಿದ ತೆಂಗಿನಕಾಯಿಯನ್ನು ಹಾಕಿಕೊಂಡು ತಿಂದರೆ ರುಚಿಯಾಗಿರುತ್ತದೆ.
4 / 6
3. ಇಡ್ಲಿ:
ಇಡ್ಲಿ ಹಗುರವಾದ, ಪೌಷ್ಟಿಕ ಉಪಾಹಾರವಾಗಿದೆ. ಆದ್ದರಿಂದ ನಿಮ್ಮ ದಿನವನ್ನು ಪ್ರಾರಂಭಿಸಲು ಇದು ಜನಪ್ರಿಯ ಉಪಹಾರ ಆಹಾರವಾಗಿದೆ. ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಇಡ್ಲಿಗಳನ್ನು ಸೇವಿಸಬಹುದು. ಸಮಯವನ್ನು ಉಳಿಸಲು, ಬೆಳಗಿನ ಉಪಾಹಾರಕ್ಕೆ ಒಂದು ದಿನ ಮೊದಲು ನೀವು ಇಡ್ಲಿ ಹಿಟ್ಟು ಮತ್ತು ಸಾಂಬಾರ್ ಅನ್ನು ಸಹ ಮಾಡಿಟ್ಟುಕೊಳ್ಳಬಹುದು.
5 / 6
4. ವೆಜ್ ಪರೋಟ:
ಈ ತರಕಾರಿ ಪರೋಟ ರೆಸಿಪಿ ನಿಮಗೆ ಪೌಷ್ಟಿಕಾಂಶ ಮತ್ತು ರುಚಿಯ ಸಮತೋಲನವನ್ನು ನೀಡುತ್ತದೆ. ಇದನ್ನು ಮೊಸರು, ಚಟ್ನಿ ಅಥವಾ ಉಪ್ಪಿನಕಾಯಿಯೊಂದಿಗೆ ತಿನ್ನಬಹುದು. ಇದು ಕೂಡ ಬಹಳ ಪೌಷ್ಟಿಕಾಂಶದ ಉಪಹಾರವಾಗಿದೆ.
6 / 6
5. ಉತ್ತಪ್ಪಮ್:
ಅಕ್ಕಿ, ಉದ್ದಿನ ಬೇಳೆ ಮತ್ತು ಮಸಾಲೆಗಳನ್ನು ಒಟ್ಟಿಗೆ ಸೇರಿಸಿ ತಯಾರಿಸುವ ಉತ್ತಪ್ಪಮ್ ಒಂದು ದೋಸೆ ತರಹದ ತಿಂಡಿಯಾಗಿದೆ. ಇದು ಹೊಟ್ಟೆಗೆ ಹಗುರವಾಗಿರುತ್ತದೆ ಮತ್ತು ಬೆಳಗಿನ ಉಪಾಹಾರ, ಬ್ರಂಚ್ ಅಥವಾ ಸಂಜೆಯ ತಿಂಡಿಗಳಿಗೆ ಕೂಡ ಬಡಿಸಬಹುದು.