
ಸ್ನೇಹಿತೆಯ ಅಥವಾ ಹತ್ತಿರದ ಸಂಬಂಧಿಯ ಮದುವೆ ಎಂದಕೂಡಲೇ ಯಾವ ರೀತಿಯ ಬಟ್ಟೆ ಧರಿಸುವುದು ಎಂಬ ಯೋಚನೆಯಲ್ಲಿ ನೀವಿದ್ದೀರಾ? ಹಾಗಿದ್ದರೆ ನಿಮ್ಮಗೆ ಮದುಮಗಳೊಂದಿಗೆ ಗ್ರ್ಯಾಂಡ್ ಲುಕ್ ನೀಡುವ ಹೊಸ ಹೊಸ ವಿನ್ಯಾಸಗಳ ಬಟ್ಟೆ ಕಲೆಕ್ಷನ್ ಇಲ್ಲಿದೆ.

ಶರರಾದೊಂದಿಗೆ ಕ್ರಾಪ್ಡ್ ಬ್ಲೌಸ್: ಕಡು ಬಣ್ಣದದೊಂದಿಗೆ ಬೆಳ್ಳಿ ಅಥವಾ ಚಿನ್ನದ ಬಣ್ಣದ ಝರಿಗಳನ್ನು ಹೊಂದಿರುವ ಶರರಾ ಕ್ರಾಪ್ಡ್ ಬ್ಲೌಸ್ ಆಯ್ಕೆ ಮಾಡಿ. ಇದು ನಿಮ್ಮನ್ನು ಸಾವಿರ ಜನರ ಮಧ್ಯೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಇದು ನಿಮ್ಮ ಸ್ನೇಹಿತೆಯ ಅಥವಾ ಹತ್ತಿರದ ಸಂಬಂಧಿಯ ಮದುವೆಗೆ ಒಂದು ಉತ್ತಮ ಆಯ್ಕೆಯಾಗಿದೆ.

ಗುಲಾಬಿ ಬಣ್ಣದ ಪ್ರಿಂಟೆಡ್ ಲೆಹಾಂಗ: ಮಹಿಳೆಯರಲ್ಲಿ ಹೆಚ್ಚಿನವರಿಗೆ ಗುಲಾಬಿ ಬಣ್ಣವು ಅಚ್ಚು ಮೆಚ್ಚು. ಆದ್ದರಿಂದ ಗುಲಾಬಿ ಬಣ್ಣದ ಈ ಚಿತ್ರದಲ್ಲಿ ತೋರಿಸಿರುವಂತಹ ಬಟ್ಟೆಯನ್ನು ಖರೀದಿಸಿ. ಇದು ಸಂಪ್ರದಾಯ ಲುಕ್ ಜೊತೆಗೆ ಈಗಿನ ಫ್ಯಾಶನ್ ಕೂಡ ಆಗಿದೆ.

ಗ್ರ್ಯಾಂಡ್ ಗೌನುಗಳು: ನಿಮ್ಮ ಸ್ನೇಹಿತೆ ಹಾಗೂ ಹತ್ತಿರದ ಸಂಬಂಧಿಯ ಮದುವೆಯ ಸಮಯದಲ್ಲಿ ಸಂಭ್ರಮಗಳಲ್ಲಿ ಸಾಕಷ್ಟು ಒಡಾಡುವುದರಿಂದ ನೀವು ಧರಿಸುವ ಬಟ್ಟೆಯು ಎಲ್ಲರ ಗಮನ ಸೆಳೆಯಬೇಕಿದೆ. ಅದ್ದಕ್ಕಾಗಿ ಗ್ರ್ಯಾಂಡ್ ಅಂದರೆ ಸಾಕಷ್ಟು ಮಿನುಗುಗಳನ್ನು ಹೊಂದಿರುವ ಗೌನುಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಹೊಳೆಯುವ ಕಲ್ಲು ಮತ್ತು ಮಣಿಗಳಿಂದ ವಿನ್ಯಾಸಗೊಳಿಸಿದ ಬಟ್ಟೆಯನ್ನು ಆಯ್ಕೆ ಮಾಡಿ.

ಫ್ಯಾನ್ಸಿ ಸೀರೆಗಳು: ಮದುವೆ ಹಿಂದಿನ ಸಂಜೆಯ ಔಪಚಾರಿಕ ಕೂಟಕ್ಕೆ ಮಿನುಗುವ ಫ್ಯಾನ್ಸಿ ಸೀರೆಗಳು ಒಂದು ಉತ್ತಮ ಆಯ್ಕೆಯಾಗಿದೆ. ಇದು ಸಂಜೆಯ ಬೆಳಕಿನ ಅಲಂಕಾರದಲ್ಲಿ ಮಿನುಗುವಂತೆ ಮಾಡುತ್ತದೆ.

ಇಂಡೋ-ವೆಸ್ಟರ್ನ್ ಔಟ್‌ಫಿಟ್: ಇತ್ತೀಚಿನ ಮದುವೆ ಸಂಭ್ರಮಗಳಲ್ಲಿ ಇಂಡೋ-ವೆಸ್ಟರ್ನ್ ಔಟ್ಫಿಟ್ಗಳು ಹೆಚ್ಚಾಗಿ ಕಂಡುಬರುತ್ತದೆ. ಇದು ನಿಮಗೆ ಭಾರತೀಯ ಸಂಪ್ರದಾಯಿಕ ಬಟ್ಟೆಯಾಗಿಯೂ ಕಾಣುವುದರ ಜೊತೆಗೆ ಮಾಡರ್ನ್ ಲುಕ್ ನೀಡುತ್ತದೆ.