Kannada News Photo gallery BSNL great offers on recharge plan of 365 days validity, compare rate with Jio and Airtel, news in Kannada
ಬಿಎಸ್ಸೆನ್ನೆಲ್ 365 ದಿನ ವ್ಯಾಲಿಡಿಟಿ ಪ್ಲಾನ್ 321 ರೂನಿಂದ ಶುರು; ಇಲ್ಲಿದೆ ಜಿಯೊ, ಏರ್ಟೆಲ್, ಬಿಎಸ್ಎನ್ಎಲ್ ಮಧ್ಯೆ ಹೋಲಿಕೆ
BSNL vs Airtel vs Jio recharge plans: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಬಹಳ ಅಗ್ಗದ ದರದಲ್ಲಿ ರೀಚಾರ್ಜ್ ಪ್ಲಾನ್ಗಳನ್ನು ಆಫರ್ ಮಾಡುತ್ತಿದೆ. ಒಂದು ವರ್ಷ ವ್ಯಾಲಿಡಿಟಿ ಇರುವ 10 ಪ್ಲಾನ್ಗಳಿದ್ದು, 321 ರೂನಿಂದ ಆರಂಭವಾಗುತ್ತದೆ. 365 ದಿನಗಳ ವ್ಯಾಲಿಡಿಟಿ ಇರುವ ಜಿಯೋ ಮತ್ತು ಏರ್ಟೆಲ್ ಹಾಗೂ ಬಿಎಸ್ಎನ್ಎಲ್ನ ವಿವಿಧ ರೀಚಾರ್ಜ್ ಪ್ಲಾನ್ಗಳ ಮಧ್ಯೆ ಒಂದು ಹೋಲಿಕೆ ಇಲ್ಲಿದೆ...
1 / 9
ಜಿಯೋದಿಂದ 365 ದಿನಗಳ ವ್ಯಾಲಿಡಿಟಿ ಇರುವ ಎರಡು ರೀಚಾರ್ಜ್ ಪ್ಲಾನ್ಗಳಿವೆ. 3,599 ರೂ ಪ್ಲಾನ್ನಲ್ಲಿ ಗ್ರಾಹಕರು ದಿನಕ್ಕೆ 2.5 ಜಿಬಿ ಡಾಟಾ ಬಳಕೆ ಮಾಡಬಹುದು. ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ಗೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಕೂಡ ಸಿಗುತ್ತದೆ.
2 / 9
ರಿಲಾಯನ್ಸ್ ಜಿಯೋದಿಂದ 365 ದಿನಗಳ ವ್ಯಾಲಿಡಿಟಿ ಇರುವ 3,999 ರೂ ಪ್ಲಾನ್ ಕೂಡ ಇದೆ. 3,599 ರೂ ಪ್ಲಾನ್ನಂತೆ ಇದೂ ಕೂಡ ದಿನಕ್ಕೆ 2.5 ಜಿಬಿ ಡಾಟಾ ಬಳಕೆಗೆ ಅನುವು ಮಾಡಿಕೊಡುತ್ತದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಜೊತೆಗೆ ಫ್ಯಾನ್ ಕೋಡ್ಗೂ ಇದು ಉಚಿತವಾಗಿ ಸಬ್ಸ್ಕ್ರಿಪ್ಷನ್ ಕೊಡುತ್ತದೆ.
3 / 9
ಏರ್ಟೆಲ್ನಲ್ಲಿ ಒಂದು ವರ್ಷದ ವ್ಯಾಲಿಡಿಟಿ ಇರುವ ಮೂರು ಪ್ಲಾನ್ಗಳಿವೆ. 1,999 ರೂ ಪ್ಲಾನ್ನಲ್ಲಿ ಒಟ್ಟಾರೆ 24 ಜಿಬಿ ಡಾಟಾ ಸಿಗುತ್ತದೆ. ದಿನದ ಲೆಕ್ಕದಲ್ಲಿ ಡಾಟಾ ಇರುವುದಿಲ್ಲ. ಮೂರು ತಿಂಗಳು ಅಪೋಲೋ ಸಬ್ಸ್ಕ್ರಿಪ್ಷನ್ ಸಿಗುತ್ತದೆ. ವಿಂಕ್ನಲ್ಲಿ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಸಬ್ಸ್ಕ್ರಿಪ್ಷನ್ ಕೂಡ ಸಿಗುತ್ತದೆ.
4 / 9
ಏರ್ಟೆಲ್ನ 3,599 ರೂ ಪ್ಲಾನ್ನಲ್ಲಿ ದಿನಕ್ಕೆ ಎರಡು ಜಿಬಿ ಡಾಟಾ ಸಿಗುತ್ತದೆ. ಅನ್ಲಿಮಿಟೆಡ್ 5ಜಿ ಡಾಟಾ, ಅಪೋಲೋ, ವಿಂಕ್ ಹಲೋ ಟ್ಯೂನ್, ವಿಂಕ್ ಮ್ಯೂಸಿಕ್ ಸಬ್ಸ್ಕ್ರಿಪ್ಷನ್ ಸಿಗುತ್ತದೆ.
5 / 9
ಏರ್ಟೆಲ್ನ 3,999 ರೂ ಪ್ಲಾನ್ ಕೂಡ 365 ದಿನದ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 2.5 ಜಿಬಿ ಡಾಟಾ ಇದು ಒದಗಿಸುತ್ತದೆ. ಡಿಸ್ನಿ ಹಾಟ್ಸ್ಟಾರ್, ಅನ್ಲಿಮಿಟೆಡ್ ಡಾಟಾ, ಅಪೋಲೋ, ವಿಂಕ್ ಟ್ಯೂನ್, ವಿಂಕ್ ಮ್ಯೂಸಿಕ್ ಸೇವೆ ಕೂಡ ಲಭ್ಯ ಇರುತ್ತದೆ.
6 / 9
ಬಿಎಸ್ಎನ್ಎಲ್ನಲ್ಲಿ 365 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ಗಳ ಸಂಖ್ಯೆ ಬರೋಬ್ಬರಿ 10 ಇವೆ. ಕೇವಲ 321 ರೂನಿಂದ ಆರಂಭವಾಗಿ 2,999 ರೂವರೆಗೆ ಬಹಳ ವಿಭಿನ್ನ ಪ್ಲಾನ್ಗಳಿವೆ. ಡಾಟಾ ಬಳಕೆ ತಕ್ಕಂತೆ ಪ್ಲಾನ್ ವೈವಿಧ್ಯತೆ ಇದೆ.
7 / 9
321 ರೂ ಪ್ಲಾನ್ನಲ್ಲಿ 15ಜಿಬಿ ಡಾಟಾ ಸಿಗುತ್ತದೆ. 1,198 ರೂ ಪ್ಲಾನ್ನಲ್ಲಿ 3ಜಿಬಿ ಡಾಟಾ ಸಿಗುತ್ತದೆ. 1,999 ರೂ ಪ್ಲಾನ್ನಲ್ಲಿ 600 ಜಿಬಿಯಷ್ಟು ಡಾಟಾ ಕೊಡುತ್ತದೆ. 1,498 ರೂ ಪ್ಲಾನ್ಲ್ಲಿ 120 ಜಿಬಿ ಡಾಟಾ ಸಿಗುತ್ತದೆ. 2,999 ರೂ ಪ್ಲಾನ್ ಕೂಡ ಸಾಕಷ್ಟು ಡಾಟಾ ಬಳಕೆಗೆ ಅವಕಾಶ ಕೊಡುತ್ತದೆ.
8 / 9
ಇನ್ನು, ದಿನದ ಲೆಕ್ಕದಲ್ಲಿ ಡಾಟಾ ಕೊಡುವ ವರ್ಷದ ವ್ಯಾಲಿಡಿಟಿಯ ಪ್ಯಾಕ್ಗಳನ್ನು ಬಿಎಸ್ಎನ್ಎಲ್ ಹೊಂದಿದೆ. 1,515 ರೂನಲ್ಲಿ ದಿನಕ್ಕೆ 2 ಜಿಬಿ ಡಾಟಾ ಸಿಗುತ್ತದೆ. 2,999 ರೂ ಪ್ಲಾನ್ನಲ್ಲಿ ದಿನಕ್ಕೆ 3 ಜಿಬಿ ಡಾಟಾ ಸಿಗುತ್ತದೆ. 1,551 ರೂ ಪ್ಲಾನ್ಲ್ಲಿ ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. 1,859 ರೂ ಪ್ಲಾನ್ನಲ್ಲಿ ದಿನಕ್ಕೆ 2 ಜಿಬಿ ಡಾಟಾ ಲಭಿಸುತ್ತದೆ.
9 / 9
ಏರ್ಟೆಲ್ ಮತ್ತು ಜಿಯೋ ಸಂಸ್ಥೆಗಳು 5ಜಿ ನೆಟ್ವರ್ಕ್ ಹೊಂದಿದೆ. ಬಳಕೆದಾರರು ಬಹಳ ಉನ್ನತ ಸ್ಪೀಡ್ನ ಡಾಟಾ ಪಡೆಯಬಹುದು. ಬಿಎಸ್ಎನ್ಎಲ್ ಇನ್ನೂ ಕೂಡ 5ಜಿಗೆ ಅಪ್ಗ್ರೇಡ್ ಆಗಿಲ್ಲ. 3ಜಿ ಮತ್ತು 4ಜಿ ಡಾಟಾ ಸ್ಪೀಡ್ ಮಾತ್ರ ಬಿಎಸ್ಎನ್ಎಲ್ ಪ್ಲಾನ್ಗಳಲ್ಲಿ ಲಭ್ಯ ಇರುತ್ತದೆ. ಬಹಳ ಹೈಸ್ಪೀಡ್ ಡಾಟಾದ ಅಗತ್ಯ ಇಲ್ಲ ಎನ್ನುವವರು ಬಿಎಸ್ಎನ್ಎಲ್ ಪ್ಲಾನ್ ಪಡೆಯಲು ಅಡ್ಡಿ ಇಲ್ಲ.