
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳೊಡನೆ ಸಖತ್ ಆಗಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಯಶ್ ಹಾಗೂ ಮಕ್ಕಳು ಗಾಳಿಪಟ ಸಹ ಹಾರಿಸಿದ್ದಾರೆ.

ನಟಿ ಸಮಂತಾ ಸಹ ಖುಷಿಯಿಂದ ಸಂಕ್ರಾಂತಿ ಆಚರಿಸಿದ್ದು, ತಾರಸಿ ಮೇಲೆ ಗಾಳಿಪಟ ಹಾರಿಸಿ ಸಂಭ್ರಮಿಸಿದ್ದಾರೆ. ಮನೆ ಮುಂದೆ ಹಾಕಿರುವ ರಂಗೋಲಿ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸಹ ತಮ್ಮ ತಂದೆ ಹಾಗೂ ಮಗನೊಟ್ಟಿಗೆ ಸಾಂಪ್ರದಾಯಿಕವಾಗಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ.

ನಟಿ, ಸಂಸದೆ ಸುಮಲತಾ ಸಹ ಮನೆಯಲ್ಲಿ ಸರಳವಾಗಿ, ಸಂಪ್ರದಾಯಬದ್ಧವಾಗಿ ಸಂಕ್ರಾಂತಿ ಆಚರಿಸಿದ್ದಾರೆ. ಹಲವು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಕಾಟೇರ ಸಿನಿಮಾದ ನಾಯಕಿ ಆರಾಧನ ಸಹ ಕುಟುಂಬದೊಟ್ಟಿಗೆ ಸಂಕ್ರಾಂತಿ ಆಚರಿಸಿ, ಕುಟುಂಬದ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ತಮಿಳಿನ ನಟ ಧನುಶ್ ತಮ್ಮ ಕುಟುಂಬದೊಟ್ಟಿಗೆ ಸಂಕ್ರಾಂತಿ ಆಚರಿಸಿದ್ದಾರೆ. ಮಕ್ಕಳು ಹಾಗೂ ತಂದೆ ತಾಯಿಯೊಟ್ಟಿಗಿನ ಚಿತ್ರ ಹಂಚಿಕೊಂಡಿದ್ದಾರೆ.

ತೆಲುಗು ನಟ ವಿಜಯ್ ದೇವರಕೊಂಡ ತಮ್ಮ ಕುಟುಂಬ ಸದಸ್ಯರೊಟ್ಟಿಗೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ವಿನಯ್ ಸಹೋದರ ಆನಂದ್ ಸಹ ಚಿತ್ರದಲ್ಲಿದ್ದಾರೆ.