Rare Pics: ಇವರು ಯಾರು ಬಲ್ಲಿರೇನು? ಟಾಟಾನಾ, ಬಿರ್ಲಾನಾ, ಅದಾನಿಯಾ, ಅಂಬಾನಿಯಾ? ಹೀಗೊಂದು ಅಪರೂಪದ ಚಿತ್ರಪಟ

Successful Businessmen's Childhood Stories: ಗೌತಮ್ ಅದಾನಿ, ಮುಕೇಶ್ ಅಂಬಾನಿ, ಎನ್ ಆರ್ ನಾರಾಯಣಮೂರ್ತಿ ಮೊದಲಾದ ಭಾರತದ ಕೆಲ ಪ್ರಮುಖ ಉದ್ಯಮಿಗಳ ಬಾಲ್ಯದ ಅಪರೂಪದ ಚಿತ್ರಗಳ ಗ್ಯಾಲರಿ ಇಲ್ಲಿದೆ.

|

Updated on:Mar 08, 2023 | 4:14 PM

ಬಾಲ್ಯದ ನೆನಪುಗಳು ಯಾವತ್ತಿಗೂ ವಿಶೇಷ. ನಮ್ಮ ಬಾಲ್ಯದ ಚಿತ್ರಗಳನ್ನು ನೋಡಿದಾಗೆಲ್ಲಾ ಸಾಮಾನ್ಯವಾಗಿ ಮಧುರವಾದ ಭಾವನೆ ಬರುತ್ತದೆ. ಹಾಗೆಯೇ, ಹಲವು ಸೆಲಬ್ರಿಟಿಗಳ ಬಾಲ್ಯದ ಚಿತ್ರಗಳು ನಮಗೆ ಕುತೂಹಲ ಮೂಡಿಸುತ್ತವೆ. ಇಲ್ಲಿ ಯಶಸ್ವಿ ಉದ್ಯಮಿಗಳಾದ ಗೌತಮ್ ಅದಾನಿ, ಆನಂದ್ ಮಹೀಂದ್ರ, ರತನ್ ಟಾಟಾ, ಅಜೀಮ್ ಪ್ರೇಮ್​ಜಿ, ಮುಕೇಶ್ ಅಂಬಾನಿ ಮೊದಲಾದ ಕೆಲವರ ಬಾಲ್ಯದ ಚಿತ್ರಗಳ ಸಂಗ್ರಹವನ್ನು ಮುಂದೆ ಕಾಣಬಹುದು.

1 / 9
ಆನಂದ್ ಮಹೀಂದ್ರ: ಮುಂಬೈನಲ್ಲಿ 1955 ಮೇ 1ರಂದು ಜನಿಸಿದ ಆನಂದ್ ಮಹೀಂದ್ರ ಹಾರ್ವರ್ಸ್ ಬಿಸಿನೆಸ್ ಸ್ಕೂಲ್​ನಲ್ಲಿ ಓದಿದವರು. ಖ್ಯಾತ ಉದ್ಯಮಕುಟುಂಬಕ್ಕೆ ಸೇರಿದವರು.

2 / 9
ಅಜೀಮ್ ಪ್ರೇಮ್​ಜಿ: ವಿಪ್ರೋ ಕಂಪನಿಯ ಸ್ಥಾಪಕ ಅಜೀಮ್ ಪ್ರೇಮ್​ಜಿ ಮುಸ್ಲಿಮ್ ಕುಟುಂಬಕ್ಕೆ ಸೇರಿದವರು. ಸಮಾಜಸೇವೆಗೆ ಉದಾರವಾಗಿ ದಾನ ಮಾಡುವುದಕ್ಕೆ ಹೆಸರಾದವರು.

3 / 9
ಗೌತಮ್ ಅದಾನಿ: ಗುಜರಾತ್​ನ ಅಹ್ಮದಾಬಾದ್​ನಲ್ಲಿ 1962 ಜೂನ್ 24ರಂದು ಜನಿಸಿದವರು. ಬಹಳ ವರ್ಷಗಳಿಂದ ಉದ್ಯಮವಲಯದಲ್ಲಿದ್ದರೂ ಇತ್ತೀಚಿನ ಕೆಲ ವರ್ಷಗಳಿಂದ ಅಸಾಮಾನ್ಯ ವೇಗದಲ್ಲಿ ಬೆಳೆದು ತಮ್ಮ ವ್ಯಾವಹಾರಿಕ ಸಾಮ್ರಾಜ್ಯದ ವಿಸ್ತಾರ ಮಾಡಿದ್ದಾರೆ. ಈ ಫೋಟೋದಲ್ಲಿ ಎಡಗಡೆಯಲ್ಲಿರುವ ಬಾಲಕ ಗೌತಮ್ ಅದಾನಿ

4 / 9
ಕಿರಣ್ ಮಜುಮ್ದಾರ್ ಶಾ: ಕರ್ನಾಟಕದ ಇವರು ಹುಟ್ಟಿದ್ದು 1953 ಮಾರ್ಚ್ 23ರಂದು. ಬೆಂಗಳೂರಿನಲ್ಲಿ ಬಯೋಕಾನ್ ಕಂಪನಿ ಸ್ಥಾಪಿಸಿ ವಿಶ್ವದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದಾರೆ.

5 / 9
ಕುಮಾರಮಂಗಲಂ ಬಿರ್ಲಾ: ಪ್ರಸಿದ್ಧ ಬಿರ್ಲಾ ಮನೆತನಕ್ಕೆ ಸೇರಿದ ಕುಮಾರಮಂಗಲಂ 1967 ಜೂನ್ 14ರಂದು ಕೋಲ್ಕತಾದಲ್ಲಿ ಹುಟ್ಟಿದರು. ಚಾರ್ಟರ್ಡ್ ಅಕೌಂಟೆಂಟ್ ಕೂಡ ಆಗಿರುವ ಅವರು ಆದಿತ್ಯ ಬಿರ್ಲಾ ಗ್ರೂಪ್​ನ ಛೇರ್ಮನ್ ಆಗಿದ್ದಾರೆ. ಈ ಫೋಟೋದಲ್ಲಿರುವ ಬಾಲಕ ಕುಮಾರಮಂಗಲಂ ಬಿರ್ಲಾ.

6 / 9
ಮುಕೇಶ್ ಅಂಬಾನಿ: ರಿಲಾಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಹುಟ್ಟು ಶ್ರೀಮಂತರಾದರೂ ತಮ್ಮದೇ ಹೊಸ ವ್ಯವಹಾರ ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಹುಟ್ಟಿದ್ದು ಯೆಮೆನ್ ದೇಶದಲ್ಲಿ 1957 ಏಪ್ರಿಲ್ 19ರಂದು. ಇಲ್ಲಿರುವ ಫೋಟೋದಲ್ಲಿ ಅವರು ಮತ್ತು ಸೋದರ ಅನಿಲ್ ಅಂಬಾನಿ ಇದ್ದಾರೆ. ಎಡಗಡೆ ಇರುವವರು ಮುಕೇಶ್ ಅಂಬಾನಿ. ಈಗ ಇವರು ಭಾರತದ ಅತೀ ಶ್ರೀಮಂತ ವ್ಯಕ್ತಿ.

7 / 9
ಎನ್.ಆರ್. ನಾರಾಯಣಮೂರ್ತಿ: ಕರ್ನಾಟಕದ ಇವರು ಎಂಬತ್ತರ ದಶಕದಲ್ಲಿ ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿ ಭಾರತದ ಪ್ರಮುಖ ಐಟಿ ಸರ್ವಿಸ್ ಕಂಪನಿಯಾಗಿ ಬೆಳೆಸಿದ್ದಾರೆ. ಯಾವುದೇ ಉದ್ಯಮ ವ್ಯವಹಾರದ ಕುಟುಂಬದ ಹಿನ್ನೆಲೆ ಇಲ್ಲದೆಯೇ ಇವರು ಒಂದು ಯಶಸ್ವಿ ಉದ್ದಿಮೆ ಕಟ್ಟಿದ್ದು ನಿಜಕ್ಕೂ ಪ್ರಶಂಸನೀಯ.

8 / 9
ರತನ್ ಟಾಟಾ: 1937 ಡಿಸೆಂಬರ್ 28ರಂದು ಜನಿಸಿದ ರತನ್ ಟಾಟಾ ಈ ಫೋಟೋದಲ್ಲಿ ಎಡಕೊನೆಯಲ್ಲಿದ್ದಾರೆ. ಜೆಆರ್​ಡಿ ಟಾಟಾ ಅವರ ಮಗ.

9 / 9

Published On - 4:14 pm, Wed, 8 March 23

Follow us
ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಮಾತಾಡಲ್ಲ, ತನಿಖೆ ನಡೆಯಲಿ: ಬಸನಗೌಡ ಯತ್ನಾಳ್

ಬೆಂಗಳೂರಿಗೆ ಬಂದ ಕುಮಾರಸ್ವಾಮಿ, ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಸಿಡುಕಿದರು

ಜೆಡಿಎಸ್ ಕಾರ್ಯಕರ್ತನ ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರೀಡೆಗೆ ಬಳಸಿಕೊಂಡರೇ?

ಸೂರಜ್​​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಗೃಹಸಚಿವರು ಹೇಳಿದ್ದೇನು?

ಚಲ್ಲಕುಮಾರ್, ಮೋಹನ್ ಕೊಂಡಜ್ಜಿಗೆ ಗೃಹಸಚಿವರನ್ನು ಭೇಟಿಯಾಗುವ ಅವಕಾಶವಿಲ!

ರೇಣುಕಾಸ್ವಾಮಿ ಕೊಲೆ ಪ್ರಕರಣ; ನಂದೀಶ್ ಕುಟುಂಬದ ಏಕೈಕ ಆಧಾರಸ್ತಂಭ: ಸಹೋದರಿ

ದರ್ಶನ್​ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ಜನವರಿಯಲ್ಲೇ ಹೇಳಿದ್ದೆ; ವೈದ್ಯೆ

ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ

Daily Horoscope: ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು

ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ