
ಆ್ಯಂಕರ್, ‘ಬಿಗ್ ಬಾಸ್ ಕನ್ನಡ ಸೀಸನ್ 7’ರ ಸ್ಪರ್ಧಿ ಚೈತ್ರಾ ವಾಸುದೇವನ್ ಅವರು ಫ್ಯಾನ್ಸ್ಗೆ ಹೊಸ ಅಪ್ಡೇಟ್ ನೀಡಿದ್ದಾರೆ. ಅವರು ತಮ್ಮ ಡ್ರೀಮ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಚೈತ್ರಾ ಅವರು ರೇಂಜ್ ರೋವರ್ ಕಂಪೆನಿಯ Evoque ಮಾಡೆಲ್ ಎಸ್ಯುವಿ ಅನ್ನು ಖರೀದಿ ಮಾಡಿದ್ದಾರೆ. ಇದರ ಎಕ್ಸ್ ಶೋರೂಂ ಬೆಲೆ 72 ಲಕ್ಷ ರೂಪಾಯಿಯಿಂದ ಆರಂಭ ಆಗಲಿದ್ದು, ಆನ್ ರೋಡ್ ಬೆಲೆ 89 ಲಕ್ಷ ರೂಪಾಯಿ ಇದೆ.

1997 ಸಿಸಿ ಇಂಜಿನ್ಅನ್ನು ಈ ಎಸ್ಯುವಿ ಹೊಂದಿದೆ. ಇದರ ಟಾಪ್ ಸ್ಪೀಡ್ 213-221 ಕಿ.ಮೀ ಆಗಿದೆ. ಈ ಕಾರಿನ ಫೋಟೋಗಳನ್ನು ಚೈತ್ರಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಚೈತ್ರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ದಿನಚರಿಯ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡುತ್ತಾರೆ.

ಚೈತ್ರಾ ಅವರು ಹಲವು ಶೋಗಳಿಗೆ ಆ್ಯಂಕರ್ ಆಗಿ ಗಮನ ಸೆಳೆದಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ 7’ರ ಸ್ಪರ್ಧಿ ಆಗಿದ್ದರು. ಸಿನಿಮಾ ಆಫರ್ ಬಂದರೂ ಅವರು ಒಪ್ಪಿಕೊಳ್ಳುತ್ತಿಲ್ಲ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಅವರು ನಡೆಸುತ್ತಿದ್ದಾರೆ.