ಈ ಅಭ್ಯಾಸಗಳು ದಾಂಪತ್ಯ ಜೀವನವನ್ನು ಹಾಳುಮಾಡುತ್ತವೆ, ತಕ್ಷಣವೇ ಬಿಟ್ಟುಬಿಡಿ

| Updated By: ಸಾಧು ಶ್ರೀನಾಥ್​

Updated on: Jul 19, 2022 | 6:06 AM

ಆಚಾರ್ಯ ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾರೆ.

1 / 5
ನೀತಿಶಾಸ್ತ್ರದಲ್ಲಿ ವೈವಾಹಿಕ ಜೀವನ: ಆಚಾರ್ಯ ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾರೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ನೀತಿಶಾಸ್ತ್ರದಲ್ಲಿಯೂ ಹೇಳಲಾಗಿದೆ. ಈ ವಿಷಯಗಳನ್ನು ಅನುಸರಿಸಿದರೆ, ನೀವು ವೈವಾಹಿಕ ಜೀವನವನ್ನು ಸಂತೋಷದಿಂದ ಮಾಡಬಹುದು. ಈ ಸಂಗತಿಗಳು ಯಾವುವು ಎಂಬುದನ್ನು ಕಂಡುಕೊಳ್ಳೋಣ.

2 / 5
ಕೋಪ: ವೈವಾಹಿಕ ಜೀವನದಲ್ಲಿ ಯಾವುದೋ ಕೋಪ ಗಳಿಗೆಯಲ್ಲಿ ಪರಸ್ಪರ ನಿಂದನೆ ಮಾಡುವುದು ಸರಿಯಲ್ಲ. ಇದು ವೈವಾಹಿಕ ಜೀವನಕ್ಕೆ ತುಂಬಾ ಕೆಟ್ಟದ್ದು. ಇದು ವೈವಾಹಿಕ ಜೀವನದ ಅಡಿಪಾಯವನ್ನು ಅಲ್ಲಾಡಿಸಿಬಿಡುತ್ತದೆ. ಯಾವುದೋ ವಿಷಯಕ್ಕೆ ಜಗಳ ಮಾಡಿಕೊಳ್ಳುವುದು ಮತ್ತು ಕೋಪದಲ್ಲಿ ಪರಸ್ಪರ ನಿಂದನೆ ಮಾಡುವುದು ಬೇರೆ. ಆದರೆ ಅದೇ ಸಂತೋಷದ ದಾಂಪತ್ಯ ಜೀವನದಲ್ಲಿ ಹೀಗೆ ಮಾಡುವುದನ್ನು ತಪ್ಪಿಸಿ.

3 / 5
ವೈಯಕ್ತಿಕ ವಿಷಯಗಳು: ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ವೈಯಕ್ತಿಕ ವಿಷಯಗಳನ್ನು ಬೇರೆ ಯಾವುದೇ ವ್ಯಕ್ತಿಗೆ ಹೇಳಬಾರದು. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಖಾಸಗಿ ವಿಷಯಗಳನ್ನು ಹೇಳಿಕೊಂಡರೆ ಅವಮಾನ ಎದುರಿಸಬೇಕಾಗುತ್ತದೆ. ಇದು ಸಂತೋಷದ ವೈವಾಹಿಕ ಜೀವನಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಇದನ್ನು ಮಾಡುವುದನ್ನು ತಪ್ಪಿಸಿ.

4 / 5
ಸುಳ್ಳು: ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ನಂಬಿಕೆಯ ಮೇಲೆ ಆಧಾರಿತವಾಗಿದೆ. ಆದರೆ ಒಬ್ಬರಿಗೊಬ್ಬರು ಸುಳ್ಳು ಹೇಳುವುದು ಮತ್ತು ಮೋಸ ಮಾಡುವುದು ದಾಂಪತ್ಯ ಜೀವನಕ್ಕೆ ಅಪಾಯಕಾರಿ. ಈ ಕಾರಣದಿಂದಾಗಿ ಅನೇಕ ಬಾರಿ ಸಂಬಂಧವು ಮುರಿದು ಬೀಳುವ ಹಂತಕ್ಕೆ ತಲುಪುತ್ತದೆ. ಆದ್ದರಿಂದ, ವೈವಾಹಿಕ ಜೀವನವನ್ನು ಸಂತೋಷವಾಗಿಟ್ಟುಕೊಳ್ಳಲು, ಪರಸ್ಪರ ಸುಳ್ಳು ಹೇಳುವುದನ್ನು ತಪ್ಪಿಸಿ.

5 / 5
ದುಂದು ವೆಚ್ಚ ತಪ್ಪಿಸಿ: ಸಮಂಜಸ ಸೌಕರ್ಯಗಳಿಗಾಗಿ ಮತ್ತು ಕೆಲವು ಪ್ರಮುಖ ವಿಷಯಗಳಿಗಾಗಿ ದುಬಾರಿಯಾದರೂ ಕೆಲವು ವೆಚ್ಚಗಳನ್ನು ಮಾಡುವುದು ಒಳ್ಳೆಯದು. ಆದರೆ ವ್ಯರ್ಥ ಖರ್ಚು ಮಾಡಿದರೆ ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪತಿ-ಪತ್ನಿಯರ ನಡುವೆ ಜಗಳಕ್ಕೂ ಇದು ಕಾರಣವಾಗುತ್ತದೆ. ಆದ್ದರಿಂದ ದುಂದು ವೆಚ್ಚ ಮಾಡುವುದನ್ನು ತಪ್ಪಿಸಿ.