ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನಶಿಪ್​ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

| Updated By: ಪೃಥ್ವಿಶಂಕರ

Updated on: Oct 15, 2022 | 2:10 PM

ಈ61 ನೇ ಒಪನ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನಶಿಪ್​ನಲ್ಲಿ ಕರ್ನಾಟಕ , ತಮಿಳುನಾಡು, ರೈಲ್ವೇಸ್ ಸೇರಿ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿದ್ದಾರೆ.

1 / 4
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 61ನೇ ಓಪನ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದ್ಧೂರಿ ಚಾಲನೆ ನೀಡಿದ್ದಾರೆ. ಕ್ರೀಡಾಪಟುಗಳಿಂದ ಪಥ ಸಂಚಲನ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ.

2 / 4
ಕ್ರೀಡಾಕೂಟದ ಉದ್ಘಾಟನೆಯ ಬಳಿಕ ಮಾತನಾಡಿದ ಬೊಮ್ಮಾಯಿ, ಕ್ರೀಡೆಗೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಸರ್ಕಾರವೇ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಿದ್ದು ಇದರಿಂದ ಅನೇಕ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುತ್ತಿದೆ ಎಂದರು.

3 / 4
ಮುಂದುವರೆದು ಮಾತನಾಡಿದ ಸಿಎಂ, ಜೀವನದಲ್ಲಿ ಶಿಸ್ತು ಮುಖ್ಯ. ಶಿಸ್ತಿನ ಜೊತೆ ಹಾರ್ಡ್ ವರ್ಕ್ ಇರಬೇಕು. ಯಾವುದೇ ಗುರಿ ಸಾಧನೆ ಆಗಬೇಕಾದ್ರೆ ನಿರಂತರ ಪ್ರಯತ್ನ ಆಗಬೇಕು. ಹೀಗಾಗಿ ಕರ್ನಾಟಕ ಸರ್ಕಾರ ಕ್ರೀಡೆಗೆ ಎಲ್ಲಾ ಸಹಕಾರ ನೀಡುತ್ತಿದೆ. ಜೊತೆಗೆ ಗ್ರಾಮೀಣ ಕ್ರೀಡಿಗೆ ಪ್ರೊತ್ಸಾಹ ನೀಡುತ್ತಿದ್ದು, ಸರ್ಕಾರವೇ ಗ್ರಾಮೀಣ ಕ್ರೀಡೋತ್ಸವ ಆಯೋಜನೆ ಮಾಡಿದೆ. ಹಾಗೆಯೇ ಕ್ರೀಡೆಗೆ ನಮ್ಮ ಸರ್ಕಾರ ಎಲ್ಲಾ ರೀತಿ ಸಹಕಾರ ನೀಡಲಿದೆ ಎಂದರು.

4 / 4
ಈ61 ನೇ ಒಪನ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನಶಿಪ್​ನಲ್ಲಿ ಕರ್ನಾಟಕ , ತಮಿಳುನಾಡು, ರೈಲ್ವೇಸ್ ಸೇರಿ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಮಾರಂಭದ ಉದ್ಘಾಟನೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Published On - 2:10 pm, Sat, 15 October 22