ದತ್ತ ಜಯಂತಿ ಸಂಭ್ರಮ, ಕಾಫಿನಾಡು ಕೇಸರಿಮಯ: ಮಹಿಳೆಯರಿಂದ ಬೃಹತ್ ಸಂಕೀರ್ತನಾ ಯಾತ್ರೆ ಫೋಟೋಸ್ ಇಲ್ಲಿವೆ
TV9 Web | Updated By: ಆಯೇಷಾ ಬಾನು
Updated on:
Dec 06, 2022 | 12:38 PM
Datta Jayanti: ಚಿಕ್ಕಮಗಳೂರಿನಲ್ಲಿ ಇಂದಿನಿಂದ 3 ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ. ಇಂದಿನ ಅನಸೂಯ ಜಯಂತಿಯಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಬೃಹತ್ ಮೆರವಣಿಗೆ ನಡೆಯುತ್ತಿದೆ.
1 / 6
ಚಿಕ್ಕಮಗಳೂರಿನಲ್ಲಿ ಇಂದಿನಿಂದ 3 ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ. ಇಂದಿನ ಅನಸೂಯ ಜಯಂತಿಯಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಬೃಹತ್ ಮೆರವಣಿಗೆ ನಡೆಯುತ್ತಿದೆ.
2 / 6
ನಗರದ ಬೋಳರಾಮೇಶ್ವರ ದೇವಸ್ಥಾನದಿಂದ 5 ಸಾವಿರಕ್ಕೂ ಅಧಿಕ ಮಹಿಳೆಯರು ಬೃಹತ್ ಸಂಕೀರ್ತನಾ ಯಾತ್ರೆ ಆರಂಭಿಸಿದ್ದಾರೆ. ಸಿ.ಟಿ ರವಿ ಸೇರಿದಂತೆ ಪ್ರಮುಖ ಮುಖಂಡರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಐ.ಜಿ.ರಸ್ತೆ ಮೂಲಕ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಮೆರವಣಿಗೆ ನಡೆದಿದೆ.
3 / 6
ಮೆರವಣಿಗೆ ನಡೆದ ಬಳಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಲಿದ್ದಾರೆ. ಕೇಸರಿ ಸೀರೆಯುಟ್ಟ ಮಹಿಳೆಯರು ದತ್ತಪೀಠದಲ್ಲಿ ಹೋಮ-ಹವನ ನಡೆಸಲಿದ್ದಾರೆ. ನಾಳೆ ಶೋಭಾಯಾತ್ರೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾಗುವ ಸಾಧ್ಯತೆ ಇದ್ದು ನಾಡಿದ್ದು ದತ್ತಪೀಠಕ್ಕೆ ಸಾವಿರಾರು ದತ್ತ ಮಾಲಾಧಾರಿಗಳು ತೆರಳಲಿದ್ದಾರೆ.
4 / 6
ದತ್ತಪೀಠದಲ್ಲಿ ಮಾಲೆ ವಿಸರ್ಜನೆ ಮಾಡಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ದತ್ತಪೀಠದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಅರ್ಚಕರು ಪೂಜೆ ಸಲ್ಲಿಸಲಿದ್ದು 4,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
5 / 6
ಇನ್ನು ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ ನಡೆದಿದೆ. ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಕಿಡಿಗೇಡಿಗಳು ರಸ್ತೆ ಉದ್ದಕ್ಕೂ ಮೊಳೆಗಳನ್ನು ಹಾಕಿದ್ದಾರೆ. ವಾಹನಗಳು ಅಪಘಾತವಾಗುವ ರೀತಿಯಲ್ಲಿ ಸಂಚುರೂಪಿಸಲಾಗಿದೆ.
6 / 6
ಕೈಮರ ಚೆಕ್ ಪೋಸ್ಟ್ ನಿಂದ ದತ್ತಪೀಠದ ರಸ್ತೆಯ ಉದ್ದಕ್ಕೂ ಮೊಳೆಗಳನ್ನು ಹಾಕಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 12:35 pm, Tue, 6 December 22