
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿ ಎರಡು ವರ್ಷ ಸಂದಿದೆ. ಇಂದು (ಜೂ.7) ಕುಟುಂಬಸ್ಥರು ಎರಡನೇ ವರ್ಷದ ಪುಣ್ಯತಿಥಿಯನ್ನು ಮಾಡಲಿದ್ದಾರೆ. ನೆಲಗುಳಿಯ ಚಿರು ಸಮಾಧಿಗೆ ತೆರಳಿ ಸರ್ಜಾ ಕುಟುಂಬ ಪೂಜೆ ಸಲ್ಲಿಸಲಿದೆ. ಧ್ರುವ ಸರ್ಜಾ ಈ ವಿಶೇಷ ಫೋಟೋದ ಮೂಲಕ ಸಹೋದರನಿಗೆ ನಮನ ಸಲ್ಲಿಸಿದ್ದಾರೆ. (ಕೃಪೆ: ಧೃವ ಸರ್ಜಾ/ ಟ್ವಿಟರ್)

ಮೇಘನಾ ರಾಜ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು ಚಿರುವನ್ನು ಸ್ಮರಿಸಿದ್ದಾರೆ. ‘ನೀವು ಮತ್ತು ನಾನು.. ನಿಮ್ಮಂಥವರು ಯಾರೂ ಇರಲಿಲ್ಲ. ನಿಮ್ಮಂತೆ ಯಾರೂ ಇಲ್ಲ. ನೀವೊಬ್ಬರೇ.. ಒಬ್ಬರು ಮಾತ್ರ.. ಲವ್ ಯೂ’ ಎಂದು ಮೇಘನಾ ಬರೆದುಕೊಂಡಿದ್ದಾರೆ. (ಚಿತ್ರ ಕೃಪೆ: ಮೇಘನಾ ರಾಜ್)

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಎಲ್ಲರ ಅಚ್ಚುಮೆಚ್ಚಿನ ತಾರಾ ಜೋಡಿಯಾಗಿದ್ದವರು. ಹಲವು ವರ್ಷಗಳ ಕಾಲ ಪ್ರೇಮಿಗಳಾಗಿ ಸುತ್ತಾಡಿದ ನಂತರ ಈ ಜೋಡಿ 2018ರ ಮೇ 2ರಂದು ವಿವಾಹವಾಗಿದ್ದರು.

ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾಗುವಾಗ ಈ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದರು. 2022ರ ಅಕ್ಟೋಬರ್ 22ರಂದು ರಾಯನ್ಗೆ ನಟಿ ಜನ್ಮನೀಡಿದರು.

ನಂತರದಲ್ಲಿ ಮೇಘನಾ ರಾಜ್ ಪುತ್ರನ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

ಇದೀಗ ರಾಯನ್ ತನ್ನ ಆಟದಿಂದ ಎಲ್ಲರ ಮನಗೆಲ್ಲುತ್ತಿದ್ದಾನೆ. ಮೇಘನಾ ರಾಜ್ ಮತ್ತೆ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ತೆರೆ ಕಂಡು ಮೆಚ್ಚುಗೆ ಗಳಿಸಿತ್ತು.

ಮತ್ತೂ ಕೆಲವು ಚಿತ್ರಗಳನ್ನು ಒಪ್ಪಿಕೊಂಡಿರುವ ಮೇಘನಾ ಅವುಗಳಲ್ಲಿ ಸಕ್ರಿಯರಾಗಿದ್ದಾರೆ. ಹಾಗೆಯೇ ಚಿರಂಜೀವಿ ಸರ್ಜಾ ನಟಿಸಿರುವ ಕೊನೆಯ ಚಿತ್ರ ‘ರಾಜಮಾರ್ತಾಂಡ’ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಆ ಚಿತ್ರದ ಮೂಲಕ ಮತ್ತೆ ಚಿರುವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.
Published On - 12:12 pm, Tue, 7 June 22