
ತೆಂಗಿನ ಎಣ್ಣೆಯು ನೈಸರ್ಗಿಕ ಎಣ್ಣೆಯಾಗಿದ್ದು ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಎಣ್ಣೆಯಲ್ಲಿ ಕಬ್ಬಿಣ, ಪ್ರೋಟೀನ್, ವಿಟಮಿನ್ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಇದು ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲದೆ ಆರೋಗ್ಯಕರ ಕೂದಲು ಹಾಗೂ ಚರ್ಮಕ್ಕೂ ಪ್ರಯೋಜನಕಾರಿ ಆಗಿದೆ.

ತೆಂಗಿನ ಎಣ್ಣೆಯನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದನ್ನು ಮುಖ ಮತ್ತು ದೇಹಕ್ಕೆ ಮಾಯಿಶ್ಚರೈಸರ್ ಆಗಿ ಬಳಸಲಾಗುತ್ತದೆ. ಇದು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ, ಇದು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.

ತೆಂಗಿನೆಣ್ಣೆಯಲ್ಲಿರುವ ಲಿನೋಲೆನಿಕ್ ಆಮ್ಲ ಚರ್ಮಕ್ಕೆ ಒಳ್ಳೆಯದು. ಹಾಗಾಗಿ ರಾತ್ರಿ ಹೊತ್ತಲ್ಲಿ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ತ್ವಚೆಯ ಸಮಸ್ಯೆಗಳನ್ನು ಕಡಿಮೆ ಮಾಡುವುದಲ್ಲದೆ. ತ್ವಚೆ ಒಣಗುವುದನ್ನು ತಡೆಯುತ್ತದೆ.

ಒಣ ತ್ವಚೆಯನ್ನು ನಿರಂತರವಾಗಿ ತೇವವಾಗಿರಿಸಲು ತೆಂಗಿನ ಎಣ್ಣೆ ಉಪಯುಕ್ತವಾಗಿದೆ. ಒರಟಾದ ಚರ್ಮ ಹೊಂದಿರುವವರು ರಾತ್ರಿ ಮಲಗುವ ಮೊದಲು ತೆಂಗಿನ ಎಣ್ಣೆಯನ್ನು ಬಳಸಬಸಬಹುದು. ಪ್ರತಿದಿನ ಹೀಗೆ ಮಾಡುವುದರಿಂದ ಫಲಿತಾಂಶ ಸಿಗುತ್ತದೆ.

ರಾತ್ರಿ ಸಮಯದಲ್ಲಿ ತೆಂಗಿನೆಣ್ಣೆಯನ್ನು ಹಚ್ಚುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಆದ್ದರಿಂದ ಇದು ಮೊಡವೆ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.