Constipation Remedies: ಮಲಬದ್ಧತೆಯಿಂದ ಬಳಲುತ್ತಿದ್ದೀರಾ?; ಮನೆಯಲ್ಲೇ ಈ 5 ಪಾನೀಯ ಕುಡಿದು ನೋಡಿ

|

Updated on: Oct 12, 2023 | 6:36 PM

ಕೆಲವರಿಗೆ ದೇಹದ ಉಷ್ಣಾಂಶ ಹೆಚ್ಚಾದಾಗಲೂ ಮಲಬದ್ಧತೆ ಉಂಟಾಗುತ್ತದೆ. ನಮ್ಮ ದೇಹದಲ್ಲಿ ನಾರಿನಂಶ ಕಡಿಮೆಯಾದಾಗ ಈ ಸಮಸ್ಯೆ ಹೆಚ್ಚಾಗುತ್ತದೆ. ಮಲಬದ್ಧತೆ ಒಂದು ಜೀರ್ಣಕಾರಿ ಸಮಸ್ಯೆಯಾಗಿದ್ದು, ನಿಮಗೆ ಮಲಬದ್ಧತೆ ಉಂಟಾದರೆ ಮನೆಯಲ್ಲೇ ತಯಾರಿಸಿದ ಈ 5 ಪಾನೀಯಗಳನ್ನು ಸೇವಿಸಬಹುದು.

1 / 8
ನಮ್ಮ ಆಹಾರಪದ್ಧತಿಯಲ್ಲಿನ ಬದಲಾವಣೆ, ಜೀವನಶೈಲಿಯಲ್ಲಿ ಬದಲಾವಣೆಯಿಂದ ಮಲಬದ್ಧತೆ ಉಂಟಾಗುತ್ತದೆ. ಕೆಲವರಿಗೆ ದೇಹದ ಉಷ್ಣಾಂಶ ಹೆಚ್ಚಾದಾಗಲೂ ಮಲಬದ್ಧತೆ ಉಂಟಾಗುತ್ತದೆ. ನಮ್ಮ ದೇಹದಲ್ಲಿ ನಾರಿನಂಶ ಕಡಿಮೆಯಾದಾಗ ಈ ಸಮಸ್ಯೆ ಹೆಚ್ಚಾಗುತ್ತದೆ. ಮಲಬದ್ಧತೆ ಒಂದು ಜೀರ್ಣಕಾರಿ ಸಮಸ್ಯೆಯಾಗಿದ್ದು, ನಿಮಗೆ ಮಲಬದ್ಧತೆ ಉಂಟಾದರೆ ಮನೆಯಲ್ಲೇ ತಯಾರಿಸಿದ ಈ 5 ಪಾನೀಯಗಳನ್ನು ಸೇವಿಸುವ ಮೂಲಕ ಮಲಬದ್ಧತೆಯಿಂದ ಕೊಂಚ ಮಟ್ಟಿಗೆ ಆರಾಮ ಪಡೆಯಬಹುದು.

2 / 8
ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ಪಡೆಯಲು ಸಹಾಯ ಮಾಡುವ ಹಲವಾರು ಮನೆಮದ್ದುಗಳಿವೆ. ಅರಿಶಿನ, ಬಾಳೆಹಣ್ಣು, ಸೌತೆಕಾಯಿ, ನಾರಿನಂಶವಿರುವ ಸೊಪ್ಪುಗಳು, ಹಣ್ಣುಗಳು, ತರಕಾರಿಗಳನ್ನು ಸೇವಿಸಿದರೆ ಮಲಬದ್ಧತೆ ಕಡಿಮೆಯಾಗುತ್ತದೆ. ಮಲಬದ್ಧತೆ ಬಾರದಂತೆ ತಡೆಯಲು ಸುಲಭ ಉಪಾಯವೆಂದರೆ ಹೆಚ್ಚು ದ್ರವ ಪದಾರ್ಥವನ್ನು ಸೇವಿಸುವುದು. ಇದು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.

3 / 8
ಈ 5 ಪಾನೀಯಗಳು ನಿಮ್ಮ ದೇಹದ ಎಲ್ಲಾ ಅಸಹ್ಯ ಜೀವಾಣುಗಳನ್ನು ಹೊರಹಾಕಲು ಮತ್ತು ಒಟ್ಟಾರೆ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4 / 8
1. ಬೆರಿ ಬ್ಲಾಸ್ಟ್ ಸ್ಮೂಥಿ: ಹೆಚ್ಚಿನ ಫೈಬರ್ ಅಂಶದಿಂದ ಮಾಡಿದ ಸ್ಮೂಥಿಗಳು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಹಣ್ಣುಗಳು ನಾರಿನಿಂದ ಕೂಡಿರುತ್ತದೆ. ಮೊಸರು, ಚಿಯಾ ಬೀಜಗಳು ಅಥವಾ ಅಗಸೆ ಬೀಜಗಳು ಮತ್ತು ಬೆರಿಗಳನ್ನು ಒಟ್ಟಿಗೆ ಬೆರೆಸುವುದರ ಮೂಲಕ ಸ್ಮೂಥಿ ತಯಾರಿಸಬಹುದು.

5 / 8
2. ಲಿಂಬೆ ಜ್ಯೂಸ್: ಲಿಂಬೆ ಜ್ಯೂಸ್ ಮಲಬದ್ಧತೆ ಸಮಸ್ಯೆಗಳಿಗೆ ಮನೆಯಲ್ಲಿ ತಯಾರಿಸಬಹುದಾದ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಪಾನೀಯವಾಗಿದೆ. ನಿಂಬೆಯಲ್ಲಿ ವಿಟಮಿನ್ ಸಿ ಅಥವಾ ಸಿಟ್ರಿಕ್ ಆಮ್ಲವಿದೆ. ಇದು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ.

6 / 8
3. ಅಲೋವೆರಾ ಜ್ಯೂಸ್: ಮಲಬದ್ಧತೆಗೆ ಚಿಕಿತ್ಸೆ ನೀಡಲು ಅಲೋವೆರಾ ಜ್ಯೂಸ್ ಅತ್ಯಂತ ಪರಿಣಾಮಕಾರಿಯಾದ ಪಾನೀಯವಾಗಿದೆ. ಅಲೋವೆರಾ ಜ್ಯೂಸ್ ಕರುಳಿನ ಚಲನೆಗೆ ಸಹಾಯ ಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ. 1 ಗ್ಲಾಸ್ ಅಲೋವೆರಾ ಜ್ಯೂಸ್ ಕುಡಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

7 / 8
4. ಪುದೀನ ಮತ್ತು ಶುಂಠಿ ಟೀ: ಶುಂಠಿ ಮತ್ತು ಪುದೀನಾ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಈ ಗಿಡಮೂಲಿಕೆ ಚಹಾಗಳು ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳು, ಅಮೈನೋ ಆಮ್ಲಗಳು, ಕೆಫೀನ್, ಫ್ಲೇವನಾಯ್ಡ್‌ಗಳನ್ನು ಹೊಂದಿದ್ದು, ಇದು ಇತರ ಆರೋಗ್ಯ ಪ್ರಯೋಜನಗಳ ಜೊತೆಗೆ ಮಲಬದ್ಧತೆಗೆ ಚಿಕಿತ್ಸೆ ನೀಡಲು ಆರೋಗ್ಯಕರ ಆಯ್ಕೆಯಾಗಿದೆ.

8 / 8
5. ಕಾಫಿ: ಮಲಬದ್ಧತೆ ನಿವಾರಣೆಗೆ ಒಂದು ಕಪ್ ಕಾಫಿ ಸಾಕು. ಕೆಫೀನ್ ಅಂಶವು ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಅನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಗೆ ಚಿಕಿತ್ಸೆ ನೀಡಲು ದೇಹಕ್ಕೆ ಸಹಾಯ ಮಾಡುತ್ತದೆ.