ಇವು ವಿಶ್ವದ ಅತಿ ದುಬಾರಿ ನೀರಿನ ಬಾಟಲಿಗಳು! ಒಂದು ಬಾಟಲಿ ನೀರಿಗೆ ಇಷ್ಟೊಂದು ಬೆಲೆ ಯಾಕೆ?
TV9 Web | Updated By: ganapathi bhat
Updated on:
Oct 05, 2021 | 10:13 PM
ನೀರಿಗೂ 50, 100 ರೂಪಾಯಿ ಖರ್ಚು ಮಾಡಬೇಕಲ್ಲಾ ಎಂದು ನಿಮಗೆ ಅನಿಸಬಹುದು. ಆದರೆ ನಿಮಗೆ ಕುತೂಹಲಕಾರಿ ವಿಚಾರ ಗೊತ್ತೇ? ಅದೇನೆಂದರೆ ಕೆಲವು ನೀರು ಕುಡಿಯಬೇಕು ಎಂದರೆ ನೀವು 50, 100 ಅಲ್ಲ, 40 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿಯೂ ಬರುತ್ತದೆ!
1 / 5
ನೀವು ಹೊರಗಡೆ ಪ್ರಯಾಣ ಮಾಡುವಾಗ ಅಥವಾ ಎಲ್ಲಿಗೋ ಪ್ರವಾಸಕ್ಕೆ ಹೋದಾಗ ನೀರಿಗಾಗಿ ಖರ್ಚು ಮಾಡಬಹುದು. ಅದು ಸಾಮಾನ್ಯವಾಗಿ 20, 50 ಅಥವಾ 100 ರೂಪಾಯಿ ಅಷ್ಟೇ ಆಗಿರುತ್ತದೆ. ಅದೇ ಕೆಲವೊಮ್ಮೆ ಹೆಚ್ಚು ಅನಿಸಬಹುದು. ನೀರಿಗೂ 50, 100 ರೂಪಾಯಿ ಖರ್ಚು ಮಾಡಬೇಕಲ್ಲಾ ಎಂದು ನಿಮಗೆ ಅನಿಸಬಹುದು. ಆದರೆ ನಿಮಗೆ ಕುತೂಹಲಕಾರಿ ವಿಚಾರ ಗೊತ್ತೇ? ಅದೇನೆಂದರೆ ಕೆಲವು ನೀರು ಕುಡಿಯಬೇಕು ಎಂದರೆ ನೀವು 50, 100 ಅಲ್ಲ, 40 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿಯೂ ಬರುತ್ತದೆ! ಇದು ವಿಶ್ವದ ಅತಿ ಹೆಚ್ಚು ಬೆಲೆಬಾಳುವ ನೀರಿನ ಬಾಟಲಿಗಳು. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
2 / 5
750 ಎಂಎಲ್ನ ಅಕ್ವಾ ಡಿ ಕ್ರಿಸ್ಟಲ್ಲೋ ಟ್ರಿಬುಟೊ ಮೊಡಿಗ್ಲಿಯನಿ ಎಂಬ ನೀರಿನ ಬಾಟಲಿ 60,000 ಡಾಲರ್ (4.3 ಮಿಲಿಯನ್) ಬೆಲೆಬಾಳುತ್ತದೆ. ಇದು ಅತಿ ದುಬಾರಿ ನೀರಿನ ಬಾಟಲಿ ಆಗಿದೆ. ಈ ನೀರು ನೈಸರ್ಗಿಕವಾಗಿ, ಫ್ರಾನ್ಸ್ ಹಾಗೂ ಫಿಜಿ ಎಂಬಲ್ಲಿನ ನೀರಿನ ಚಿಲುಮೆಯಿಂದ ಲಭಿಸುತ್ತದೆ. ಈ ನೀರಿನ ಬಾಟಲಿಯನ್ನು 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿರುತ್ತದೆ. ಈ ನೀರಿನ ಬಾಟಲಿಯ ಪ್ಯಾಕಿಂಗ್ ಕ್ರಯವೇ ಹೆಚ್ಚಾಗಿದೆ. ಈ ನೀರು ಕೂಡ ವಿಶೇಷ ರುಚಿಯನ್ನು ಎಂದು ಹೇಳಲಾಗಿದೆ.
3 / 5
ಹವಾಯ್ನ ಕೊನ ನಗರಿ ವಾಟರ್ ಕೂಡ ಬಹಳ ಬೆಲೆಬಾಳುವ ನೀರಾಗಿದೆ. ಇದನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಮಾರಾಟ ಮಾಡುತ್ತಾರೆ. ಈ ನೀರಿನ ಕ್ರಯ 750 ಎಂಎಲ್ಗೆ 29,306 ರೂಪಾಯಿ. ಈ ನೀರು ಕುಡಿಯುವುದರಿಂದ ತೂಕ ಇಳಿಕೆ ಆಗುವುದು ಅಲ್ಲದೆ, ಶಕ್ತಿವರ್ಧನೆ, ಚರ್ಮದ ಹೊಳಪು ಕೂಡ ಸಾಧ್ಯ ಎಂದು ಹೇಳಲಾಗಿದೆ. ಈ ನೀರು ಹವಾಯಿಯನ್ ಐಲ್ಯಾಂಡ್ನಿಂದ ಬರುತ್ತದೆ.
4 / 5
ಫಿಲಿಕೊ ಜುವೆಲ್ ವಾಟರ್- ಈ ಜಪಾನೀಸ್ ನೀರನ್ನು ಸ್ವಾರೊವ್ಸ್ಕಿ ಕ್ರಿಸ್ಟಲ್ನೊಂದಿಗೆ ಅಲಂಕರಿಸಲಾಗಿರುತ್ತದೆ. ಈ ನೀರು ನಿಯಮಿತ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಲಭಿಸುತ್ತದೆ. ಈ ಬಾಟಲಿ ಕೂಡ ಚಿನ್ನದ ಲೇಪನದಿಂದ ಅಲಂಕೃತವಾಗಿರುತ್ತದೆ. ಇದರಲ್ಲಿನ ನೀರು ಒಸಾಕಾದ ರೊಕ್ಕೋ ಪರ್ವತದಿಂದ ಬಂದದ್ದಾಗಿರುತ್ತದೆ. ಈ ನೀರು ಗ್ರಾನೈಟ್ನಿಂದ ಫಿಲ್ಟರ್ ಆಗಿರುತ್ತದೆ. ಇದರ ಬೆಲೆ 750 ಎಂಎಲ್ಗೆ 15,965 ರೂಪಾಯಿ.
5 / 5
ಬ್ಲಿಂಗ್ ಹೆಚ್ಟುಒ- ಈ ನೀರು ಯುನೈಟೆಡ್ ಸ್ಟೇಟ್ಸ್ನಿಂದ ಬರುತ್ತದೆ. ಈ ನೀರಿನ ಶುದ್ಧೀಕರಣ 9 ಹಂತಗಳಲ್ಲಿ ನಡೆಯುತ್ತದೆ. ಈ ನೀರನ್ನು ಸುಂದರವಾದ, ವಿಶೇಷ ಆಕಾರದ ಬಾಟಲಿಗಳಲ್ಲಿ ತುಂಬಿರಲಾಗುತ್ತದೆ. ಇದರ ಬೆಲೆ 750 ಎಂಎಲ್ಗೆ 2,916 ರೂಪಾಯಿ.