78ನೇ ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ; ತ್ರಿವರ್ಣ ಧ್ವಜಕ್ಕೆ ಫುಲ್ ಡಿಮ್ಯಾಂಡ್
78 ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ರಾಜಧಾನಿಯಲ್ಲಿ ತ್ರಿವರ್ಣ ಧ್ವಜಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಈ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.
1 / 6
ಸ್ವಾತಂತ್ರ್ಯ ದಿನಾಚರಣೆ ಬಂದರೆ ಸಾಕು ರಾಜಾಧಾನಿಯಲ್ಲಿ ಸಂಭ್ರಮ ಮನೆ ಮಾಡುತ್ತೆ. ಈ ವರ್ಷವು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ದೂರಿಯಾಗಿ ಮಾಡಲು ಸಿಲಿಕಾನ್ ಜನರು ಸಜ್ಜಾಗುತ್ತಿದ್ದು, ತ್ರಿವರ್ಣ ಧ್ವಜಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ.
2 / 6
ಹೌದು, ಕಳೆದ ವರ್ಷ 77 ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆ ಭಾವುಟ ಮಾರಾಟಗಾರರು ಸಾಕಷ್ಟು ಲಾಭ ನೋಡಿದ್ದರು. ಈ ವರ್ಷವು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತವಾಗಿ ಬಾವುಟದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದ್ದು, ಫ್ಲಾಗ್, ಟೀ ಶರ್ಟ್, ಭಾವುಟಗಳಿಗೆ ಫುಲ್ ಡಿಮ್ಯಾಂಡ್ ಬರ್ತಿದೆ.
3 / 6
ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಸಂಧರ್ಭದಲ್ಲಿ ಬಾವುಟಗಳಿಗೆ ಹೆಚ್ಚು ಡಿಮ್ಯಾಂಡ್ ಇದ್ದಂತಹ ಹಿನ್ನಲೆ ಬೆಲೆ ಹೆಚ್ಚಳವಾಗಿತ್ತು. ಈ ವರ್ಷವೂ ಬಾವುಟಗಳಿಗೆ ಡಿಮ್ಯಾಂಡ್ ಶುರುವಾಗಿದ್ದು, ಬಾವುಟಗಳ ಬೆಲೆ ಕೊಂಚ ಏರಿಯಾಗಿದೆ.
4 / 6
ಸಧ್ಯ ಬಾವುಟಗಳ ಬೆಲೆ 25 ರಿಂದ 40 ರೂಪಾಯಿ ಇದ್ದು, ಶಾಲೆಗಳಿಂದ ಸಾಕಷ್ಟು ಟೀಚರ್ಸ್ಗಳು ಬಂದು ತ್ರಿವರ್ಣ ಧ್ವಜಕ್ಕೆ 50% ರಷ್ಡು ಬೇಡಿಕೆ ಇಟ್ಟಿದ್ದಾರಂತೆ. ಇನ್ನು ಈ ವರ್ಷ ಸಣ್ಣ ಬಾವುಟಗಳಿಗೆ 15 ರೂ, ದೊಡ್ಡ ಬಾವುಟಗಳಿಗೆ 20 ರಿಂದ 30 ರೂ ನಿಗಧಿ ಮಾಡಿದ್ದು, ಮಕ್ಕಳಿಗೆ ಆಕರ್ಷಕವಾಗಿ ಕಾಣುವ ಫ್ಲಾಗ್ಗಳನ್ನ ತರಿಸಲಾಗಿದೆ.
5 / 6
ಈ ವರ್ಷವು ಬಟ್ಟೆಯ ಫ್ಲಾಗ್ಗಳಿಗಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಬಾಂಬೆ, ಸೂರತ್ಗಳಿಂದ ಬಟ್ಟೆಯನ್ನ ತರಿಸಿಕೊಳ್ಳಲಾಗಿದ್ದು, ಭಾವುಟಗಳನ್ನು ಮಾರುವ ಅಂಗಡಿಗಳ ಮುಂದೆ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ. ಈ ಕುರಿತು ಮಾತನಾಡಿದ ಗ್ರಾಹಕರೊಬ್ಬರು ‘ಸ್ವತಂತ್ರ ದಿನಾಚರಣೆ ಅಂದರೆ ಹೆಮ್ಮೆ. ಈ ದಿನವನ್ನ ಪ್ರತಿಯೊಬ್ಬ ಪ್ರಜೆಯು ಹೆಮ್ಮೆಯಿಂದ ಆಚಾರಿಸಬೇಕು. ಅದಕ್ಕೋಸ್ಕರ ಫ್ಲಾಗ್ಗಳನ್ನ ತೆಗೆದುಕೊಳ್ಳುವುದಕ್ಕೆ ಬಂದಿದ್ದೀವಿ. ಈ ವರ್ಷ ಫ್ಲಾಗ್ಗಳ ಬೆಲೆ ಕೊಂಚ ಕಡಿಮೆ ಇದೆ ಎಂದು ಹೇಳಿದರು.
6 / 6
ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ರಾಜಧಾನಿಯಲ್ಲಿ ಈಗಾಗಲೇ ಈ ಸಂಭ್ರಮದ ವಾತಾವರಣ ಮನೆಮಾಡಿದೆ. ಹಲವು ಶಾಪ್ಗಳ ಮುಂದೆ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದು, ನೋಡುಗರನ್ನ ಬೆರಗುಗೊಳಿಸುತ್ತಿದೆ.