ಪಾಕಿಸ್ತಾನ್ ಪರ ಕಣಕ್ಕಿಳಿದ ಇಬ್ಬರು ಹಿಂದೂ ಕ್ರಿಕೆಟಿಗರು ಯಾರು ಗೊತ್ತಾ?

|

Updated on: Dec 16, 2024 | 12:11 PM

Pakistan: ಇಸ್ಲಾಮಿಕ್ ಗಣರಾಜ್ಯ ಎನಿಸಿಕೊಂಡಿರುವ ಪಾಕಿಸ್ತಾನದಲ್ಲಿ 96.46% ಮುಸ್ಲಿಮರಿದ್ದಾರೆ. ಇನ್ನುಳಿದ 3.54 ಪರ್ಸೆಂಟ್​ನಲ್ಲಿ 2.17% ಹಿಂದೂ ಸಮುದಾಯವರಿದ್ದಾರೆ. ಇವರಲ್ಲಿ ಇಬ್ಬರು ಹಿಂದೂ ಕ್ರಿಕೆಟಿಗರು ಪಾಕಿಸ್ತಾನ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂದರೆ 624 ಆಟಗಾರರಲ್ಲಿ ಇಬ್ಬರು ಹಿಂದೂ ಕ್ರಿಕೆಟಿಗರು ಪಾಕ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆ ಆಟಗಾರರ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ...

1 / 5
ಪಾಕಿಸ್ತಾನ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ 257 ಆಟಗಾರರು ಕಣಕ್ಕಿಳಿದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 249 ಆಟಗಾರರು ಕಾಣಿಸಿಕೊಂಡಿದ್ದಾರೆ. ಇನ್ನು ಟಿ20 ಕ್ರಿಕೆಟ್​ನಲ್ಲಿ ಪಾಕ್ ತಂಡವನ್ನು ಈವರೆಗೆ 118 ಆಟಗಾರರು ಪ್ರತಿನಿಧಿಸಿದ್ದಾರೆ. ಹೀಗೆ ಕಳೆದ 78 ವರ್ಷಗಳಲ್ಲಿ ಪಾಕ್ ಪರ ಬರೋಬ್ಬರಿ 624 ಆಟಗಾರರು ಕಣಕ್ಕಿಳಿದಿದ್ದಾರೆ. ಇವರಲ್ಲಿ ಇಬ್ಬರು ಹಿಂದೂ ಕ್ರಿಕೆಟಿಗರು ಕೂಡ ಇರುವುದು ವಿಶೇಷ.

2 / 5
ಅಂದರೆ ಹಿಂದೂ ಧರ್ಮೀಯರಾಗಿರುವ ಇಬ್ಬರು ಆಟಗಾರರು ಪಾಕಿಸ್ತಾನ್ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 1984 ರಲ್ಲಿ ಮೊದಲ ಬಾರಿಗೆ ಹಿಂದೂ ಆಟಗಾರನೊಬ್ಬ ಪಾಕ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಮತ್ತೊಬ್ಬ ಆಟಗಾರನ ಎಂಟ್ರಿಗೆ 16 ವರ್ಷಗಳವರೆಗೆ ಕಾಯಬೇಕಾಯಿತು. ಹಾಗಿದ್ರೆ ಪಾಕ್ ಪರ ಕಣಕ್ಕಿಳಿದ ಇಬ್ಬರು ಹಿಂದೂ ಕ್ರಿಕೆಟಿಗರು ಯಾರೆಂದು ನೋಡೋಣ...

3 / 5
ಅನಿಲ್ ದಲ್ಪತ್: ಪಾಕಿಸ್ತಾನ್ ತಂಡವನ್ನು ಪ್ರತಿನಿಧಿಸಿದ ಮೊದಲ ಹಿಂದೂ ಕ್ರಿಕೆಟಿಗ ಅನಿಲ್ ದಲ್ಪತ್. ಸಿಂಧ್ ಪ್ರಾಂತ್ಯದ ಅನಿಲ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದರು. 1984-86ರ ನಡುವೆ ಪಾಕ್ ಪರ 9 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳನ್ನಾಡಿರುವ ಅನಿಲ್ ದಲ್ಪತ್ 1 ಅರ್ಧಶತಕದೊಂದಿಗೆ ಒಟ್ಟು 204 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

4 / 5
ದಾನಿಶ್ ಕನೇರಿಯಾ: ಪಾಕ್ ತಂಡವನ್ನು ಪ್ರತಿನಿಧಿಸಿದ 2ನೇ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ. ಇವರು ಅನಿಲ್ ದಲ್ಪತ್ ಅವರ ಸಹೋದರ ಸಂಬಂಧಿ ಎಂಬುದು ವಿಶೇಷ. 2000 ರಲ್ಲಿ ಪಾಕ್ ತಂಡದಲ್ಲಿ ಸ್ಪಿನ್ನರ್​ ಆಗಿ ಸ್ಥಾನ ಪಡೆದ ದಾನಿಶ್ 61 ಟೆಸ್ಟ್ ಪಂದ್ಯಗಳಿಂದ ಒಟ್ಟು 261 ವಿಕೆಟ್ ಕಬಳಿಸಿದ್ದರು. ಹಾಗೆಯೇ 18 ಏಕದಿನ ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ.

5 / 5
2010 ರವರೆಗೆ ಪಾಕಿಸ್ತಾನ್ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದ ದಾನಿಶ್ ಕನೇರಿಯಾ ಅವರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಕಾರಣ ನಿಷೇಧಕ್ಕೊಳಗಾದರು. ಇದಾದ ಬಳಿಕ ಅವರು ಮತ್ತೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದೀಗ ಪಾಕ್​ನಲ್ಲೇ ನೆಲೆಸಿರುವ ಕನೇರಿಯಾ ಇಂದು (ಡಿ.16) 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Published On - 12:08 pm, Mon, 16 December 24