
ಟೀಮ್ ಇಂಡಿಯಾದ ಏಕದಿನ ಹಾಗೂ ಟಿ20 ನಾಯಕತ್ವದಿಂದ ಕೆಳಕ್ಕಿಳಿದ ಬಳಿಕ ವಿರಾಟ್ ಕೊಹ್ಲಿ ಎದುರಾಳಿಗರಿಗೆ ಮತ್ತಷ್ಟು ಅಪಾಯಕಾರಿ ಬ್ಯಾಟರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಫೈವ್ಸ್ಟಾರ್ ಹೊಟೇಲ್ ಒಂದರಲ್ಲಿ ಇವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಚಾರ್ಟರ್ ವಿಮಾನವೊಂದರಲ್ಲಿ ಭಾರತ ತಂಡ ಜೊಹಾನ್ಸ್ಬರ್ಗ್ಗೆ ತೆರಳಲಿದೆ.

ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ವೇಗಿ ಸಿರಾಜ್ ಈಗ ತಂಡದ ಖಾಯಂ ಸದಸ್ಯರಾಗಿರಬಹುದು. ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸಿರಾಜ್ ಆಡಿರುವುದು ಏಕೈಕ ಏಕದಿನ ಪಂದ್ಯ ಮಾತ್ರ. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಓವಲ್‌ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಸಿರಾಜ್ ಏಕೈಕ ಏಕದಿನ ಪಂದ್ಯವಾಡಿದ್ದರು.

ಶಿವಂ ದುಬೆ: ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ ಆಗಿ ಶಿವಂ ದುಬೆ ಅನೇಕ ಪಂದ್ಯಗಳನ್ನಾಡಿದ್ದಾರೆ. ಇದಾಗ್ಯೂ ಅವರು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಒಂದೇ ಒಂದು ಏಕದಿನ ಪಂದ್ಯವಾಡಿರುವುದು ವಿಶೇಷ. ಕೊಹ್ಲಿ ನಾಯಕತ್ವದಲ್ಲಿ ಡಿಸೆಂಬರ್ 15, 2019 ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶಿವಂ ದುಬೆ ಏಕೈಕ ಪಂದ್ಯವಾಡಿದ್ದರು.

ಶುಭ್ಮನ್ ಗಿಲ್: ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿರುವ ಶುಭ್ಗಿಲ್ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನು ಮಾಡಿದರು. ಇದುವರೆಗೆ ಮೂರು ಏಕದಿನ ಪಂದ್ಯಗಳನ್ನು ಆಡಿರುವ ಗಿಲ್, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಏಕೈಕ ಏಕದಿನ ಪಂದ್ಯವಾಡಿರುವುದು ವಿಶೇಷ.
Published On - 10:04 pm, Sat, 11 December 21