ಚಾಂಪಿಯನ್ಸ್ ಟ್ರೋಫಿಯಿಂದ 3 ತಂಡಗಳು ಔಟ್

|

Updated on: Feb 27, 2025 | 9:30 AM

CHAMPIONS TROPHY 2025: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿದಿವೆ. ಈ ಎಂಟು ತಂಡಗಳಲ್ಲಿ ಎರಡು ತಂಡಗಳು ಈಗಾಗಲೇ ನಾಕೌಟ್ ಹಂತಕ್ಕೇರಿದೆ. ಇನ್ನೆರಡು ಸ್ಥಾನಗಳಿಗಾಗಿ ಮೂರು ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಹೀಗಾಗಿ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಹಂತದ ಪಂದ್ಯಗಳು ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ.

1 / 5
ಚಾಂಪಿಯನ್ಸ್ ಟ್ರೋಫಿ (Champions Trophy 2025) ಟೂರ್ನಿಯು ನಿರ್ಣಾಯಕಕ್ಕೆ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಎರಡು ತಂಡಗಳು ಸೆಮಿಫೈನಲ್​ಗೇರಿದರೆ, ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಇನ್ನುಳಿದ ಮೂರು ಟೀಮ್​ಗಳಲ್ಲಿ ಮತ್ತೊಂದು ತಂಡ ಹೊರಬೀಳಬೇಕಿದೆ.

2 / 5
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಿಂದ ಮೊದಲು ಹೊರಬಿದ್ದ ತಂಡವೆಂದರೆ ಆತಿಥೇಯ ಪಾಕಿಸ್ತಾನ್. ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 60 ರನ್​ಗಳಿಂದ ಸೋಲನುಭವಿಸಿದ್ದ ಪಾಕ್ ಪಡೆ, ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್​ಗಳಿಂದ ಪರಾಜಯಗೊಂಡಿತು. ಈ ಸೋಲುಗಳೊಂದಿಗೆ ಪಾಕಿಸ್ತಾನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

3 / 5
ಇನ್ನು ಭಾರತದ ವಿರುದ್ಧ ಮೊದಲ ಪಂದ್ಯದಲ್ಲಿ 6 ವಿಕೆಟ್​ಗಳ ಸೋಲನುಭವಿಸಿದ್ದ ಬಾಂಗ್ಲಾದೇಶ್ ತಂಡವು ದ್ವಿತೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 5 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲುಗಳೊಂದಿಗೆ ಬಾಂಗ್ಲಾ ಪಡೆ ಕೂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಂತಾಗಿದೆ.

4 / 5
ಹಾಗೆಯೇ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಠ ಪಡೆಯೊಂದಿಗೆ ಆಗಮಿಸಿದ್ದ ಇಂಗ್ಲೆಂಡ್ ತಂಡವು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್​​ಗಳ ಸೋಲನುಭವಿಸಿತ್ತು. ಇನ್ನು ಅಫ್ಘಾನಿಸ್ತಾನ್ ವಿರುದ್ಧ 8 ರನ್​ಗಳಿಂದ ಸೋಲೊಪ್ಪಿಕೊಳ್ಳುವ ಮೂಲಕ ಆಂಗ್ಲರು ಕೂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ನಡೆದಿದ್ದಾರೆ.

5 / 5
ಇದೀಗ ಗ್ರೂಪ್-ಎ ಯಿಂದ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಗ್ರೂಪ್-ಬಿ ನಲ್ಲಿ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಈ ಮೂರು ತಂಡಗಳಲ್ಲಿ ಒಂದು ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ.