IPL 2022: ಖಂಡಿತವಾಗಿಯೂ ಈ ಬಾರಿ ನೀವು ಈ 7 ಆಟಗಾರರನ್ನು ಮಿಸ್ ಮಾಡಿಕೊಳ್ತೀರಿ
TV9 Web | Updated By: ಝಾಹಿರ್ ಯೂಸುಫ್
Updated on:
Mar 26, 2022 | 4:06 PM
IPL 2022: ಐಪಿಎಲ್ನ ದಾಖಲೆಗಳ ಸರದಾರ, ಸ್ಪೋಟಕ ಬ್ಯಾಟ್ಸ್ಮನ್ಗಳು ಎನಿಸಿಕೊಂಡ ಆಟಗಾರರೇ ಈ ಬಾರಿ ಇಲ್ಲ. ಹಾಗಿದ್ರೆ ಈ ಬಾರಿ ಐಪಿಎಲ್ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿರುವ ಆಟಗಾರರು ಯಾರೆಲ್ಲಾ ನೋಡೋಣ...
1 / 9
ಐಪಿಎಲ್ ಸೀಸನ್ 15 ರಂಗೇರುತ್ತಿದೆ. ಆದರೆ ಕಳೆದ 14 ಸೀಸನ್ಗೆ ಒಂದು ಲೆಕ್ಕ, ಈ ಬಾರಿ ಮತ್ತೊಂದು ಲೆಕ್ಕ ಎಂಬಂತಾಗಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ಏಕೆಂದರೆ ಈ ಬಾರಿ ಐಪಿಎಲ್ನಲ್ಲಿ ಹಲವು ಬದಲಾವಣೆಗಳಾಗಿವೆ. ಅದರಲ್ಲೂ ಮುಖ್ಯವಾಗಿ 2 ಹೊಸ ತಂಡಗಳ ಸೇರ್ಪಡೆ. ಅದರಂತೆ ಈ ಬಾರಿ 10 ತಂಡಗಳು ಕಣಕ್ಕಿಳಿಯುತ್ತಿರುವುದು ವಿಶೇಷ.
2 / 9
ಇನ್ನು ಐಪಿಎಲ್ನಲ್ಲಿ ನಾಯಕರಾಗಿಯೇ ನೋಡಿದ್ದ ಕೆಲ ಆಟಗಾರರು ಈ ಬಾರಿ ಕೇವಲ ಆಟಗಾರರಾಗಿ ಕಾಣಿಸಿಕೊಳ್ತಿರುವುದು ಮತ್ತೊಂದು ಮತ್ತೊಂದು ವಿಶೇಷ ಎನ್ನಬಹುದು. ಇದಾಗ್ಯೂ ಕೆಲ ಸ್ಟಾರ್ ಆಟಗಾರರು ಟೂರ್ನಿಗೆ ವಿದಾಯ ಹೇಳಿದ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಹೀಗಾಗಿ ಕಳೆದ 14 ಸೀಸನ್ ಐಪಿಎಲ್ ನೋಡಿದ ಅನುಭವ ಈ ಬಾರಿ ಸಿಗಬೇಕೆಂದಿಲ್ಲ. ಏಕೆಂದರೆ ಐಪಿಎಲ್ನ ದಾಖಲೆಗಳ ಸರದಾರ, ಸ್ಪೋಟಕ ಬ್ಯಾಟ್ಸ್ಮನ್ಗಳು ಎನಿಸಿಕೊಂಡ ಆಟಗಾರರೇ ಈ ಬಾರಿ ಇಲ್ಲ. ಹಾಗಿದ್ರೆ ಈ ಬಾರಿ ಐಪಿಎಲ್ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿರುವ ಆಟಗಾರರು ಯಾರೆಲ್ಲಾ ನೋಡೋಣ...
3 / 9
ಎಬಿ ಡಿವಿಲಿಯರ್ಸ್: ಆರ್ಸಿಬಿ ತಂಡದ ಆಪತ್ಬಾಂಧವ ಎಂದೇ ಖ್ಯಾತರಾಗಿದ್ದ ಎಬಿಡಿ ಈ ಬಾರಿ ತಂಡದಲ್ಲಿಲ್ಲ ಎಂಬುದೇ ಅಭಿಮಾನಿಗಳಿಗೆ ದೊಡ್ಡ ನಿರಾಸೆ. ಏಕೆಂದರೆ ಆರ್ಸಿಬಿ ಪರ ಅದೆಂಥಂತಹ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಶ್ರೇಯಸ್ಸು ಎಬಿಡಿಗೆ ಸಲ್ಲುತ್ತೆ. ಹೀಗಾಗಿಯೇ ವಿರಾಟ್ ಕೊಹ್ಲಿಯಷ್ಟೇ ಆರ್ಸಿಬಿ ಅಭಿಮಾನಿಗಳಿಗೆ ಎಬಿಡಿಯನ್ನು ಇಷ್ಟಪಟ್ಟಿದ್ದರು. ಆದರೆ ಇದೇ ಮೊದಲ ಬಾರಿಗೆ ಎಬಿಡಿ ಇಲ್ಲದೆ ಆರ್ಸಿಬಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ನೋಡಲಿದ್ದಾರೆ.
4 / 9
ಕ್ರಿಸ್ ಗೇಲ್: ಎಬಿಡಿ ಬಿಟ್ಟರೆ ಆರ್ಸಿಬಿ ಅಭಿಮಾನಿಗಳು ಅತೀ ಹೆಚ್ಚು ಇಷ್ಟಪಟ್ಟಿದ್ದ ವಿದೇಶಿ ಆಟಗಾರನೆಂದರೆ ಕ್ರಿಸ್ ಗೇಲ್. ಆರ್ಸಿಬಿಯಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೋದರೂ ಗೇಲ್ ಅಬ್ಬರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಗೇಲ್ ಕೂಡ ಐಪಿಎಲ್ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈ ಬಾರಿ ಕ್ರಿಸ್ ಗೇಲ್ ಅವರ ಆರ್ಭಟ ಕೂಡ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ.
5 / 9
ಸುರೇಶ್ ರೈನಾ: ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅನ್ಸೋಲ್ಡ್ ಆಗಿದ್ದೇ ಅಚ್ಚರಿ. ಸಿಎಸ್ಕೆ ತಂಡದ ಆಧಾರಸ್ತಂಭವೇ ಆಗಿದ್ದ ರೈನಾ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ಹೀಗಾಗಿ ಸಿಎಸ್ಕೆ, ರೈನಾ ಅಭಿಮಾನಿಗಳು ಐಪಿಎಲ್ನಲ್ಲಿ ಎಡಗೈ ದಾಂಡಿಗನನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
6 / 9
ಇಯಾನ್ ಮೋರ್ಗನ್: ಕಳೆದ ಬಾರಿ ಕೆಕೆಆರ್ ತಂಡವನ್ನು ಫೈನಲ್ಗೆ ಕೊಂಡೊಯ್ದ ನಾಯಕ ಇಯಾನ್ ಮೋರ್ಗನ್ ಕೂಡ ಈ ಬಾರಿ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್ನ ಕೂಲ್ ಕ್ಯಾಪ್ಟನ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಮೋರ್ಗನ್ ಅವರನ್ನು ಈ ಸಲ ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.
7 / 9
ಶಾಕಿಬ್ ಅಲ್ ಹಸನ್: ಐಪಿಎಲ್ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಶಾಕಿಬ್ ಅಲ್ ಹಸನ್ ಪ್ರತಿನಿಧಿಸುವ ತಂಡಕ್ಕೆ ಬಾಂಗ್ಲಾದೇಶದ ಅಭಿಮಾನಿಗಳು ಹೆಚ್ಚಿರುತ್ತಾರೆ. ಆದರೆ ಈ ಬಾರಿ ಶಾಕಿಬ್ ಅನ್ಸೋಲ್ಡ್ ಆಗಿದ್ದಾರೆ. ಇತ್ತ ಐಪಿಎಲ್ನ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ಶಾಕಿಬ್ ಕೂಡ ಈ ಬಾರಿ ಐಪಿಎಲ್ನಲ್ಲಿ ಕಾಣಿಸಿಕೊಳ್ತಿಲ್ಲ.
8 / 9
ಸ್ಟೀವ್ ಸ್ಮಿತ್: ವಿಶ್ವ ಕ್ರಿಕೆಟ್ ಪ್ರೇಮಿಗಳು ಪ್ರೀತಿಸುವ ಆಟಗಾರರಲ್ಲಿ ಸ್ಟೀವ್ ಸ್ಮಿತ್ ಕೂಡ ಒಬ್ಬರು. ಆದರೆ ಸ್ಮಿತ್ಗೆ ಈ ಬಾರಿ ಐಪಿಎಲ್ನಲ್ಲಿ ಅವಕಾಶ ಸಿಕ್ಕಿಲ್ಲ. ಇದರೊಂದಿಗೆ ಸ್ಮಿತ್ ಅಭಿಮಾನಿಗಳಿಗೂ ಈ ಬಾರಿಯ ಐಪಿಎಲ್ ಈ ಹಿಂದಿನಂತೆ ಇರುವುದಿಲ್ಲ.
9 / 9
ಇಮ್ರಾನ್ ತಾಹಿರ್: ಐಪಿಎಲ್ನಲ್ಲಿ ತಮ್ಮ ವಿಭಿನ್ನ ಸೆಲೆಬ್ರೇಷನ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಆಟಗಾರನೆಂದರೆ ಇಮ್ರಾನ್ ತಾಹಿರ್. ಅದರಲ್ಲೂ ಸಿಎಸ್ಕೆ ಅಭಿಮಾನಿಗಳ ಪಾಲಿನ ಶಕ್ತಿ ಎಕ್ಸ್ಪ್ರೆಸ್ ಎಂದೇ ಖ್ಯಾತರಾಗಿದ್ದ ಇಮ್ರಾನ್ ತಾಹಿರ್ ಅವರನ್ನೂ ಕೂಡ ಈ ಬಾರಿ ಐಪಿಎಲ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.