ಇಮ್ರಾನ್ ಟು ಸ್ಟೋಕ್ಸ್; ನಿವೃತ್ತಿ ನಿರ್ಧಾರವನ್ನು ಬದಲಿಸಿದ ಪ್ರಮುಖ 7 ಕ್ರಿಕೆಟಿಗರಿವರು

|

Updated on: Aug 17, 2023 | 10:39 AM

Ben Stokes: ವರ್ಷದ ಹಿಂದೆಯೇ ಏಕದಿನ ಮದರಿಗೆ ವಿದಾಯ ಹೇಳಿದ್ದ ಸ್ಟಾರ್ ಇಂಗ್ಲಿಷ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಂದಹಾಗೆ, ತನ್ನ ದೇಶಕ್ಕಾಗಿ ಆಡಲು ನಿವೃತ್ತಿ ನಿರ್ಧಾರವನ್ನು ಬದಲಿಸಿದ ಕ್ರಿಕೆಟಿಗರಲ್ಲಿ ಸ್ಟೋಕ್ಸ್ ಅವರೇ ಮೊದಲಿಗರಲ್ಲ. ಅವರಿಗೂ ಮೊದಲು ಪ್ರಮುಖವಾಗಿ ಈ 7 ಆಟಗಾರರು ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಿಸಿದ್ದರು.

1 / 8
ವರ್ಷದ ಹಿಂದೆಯೇ ಏಕದಿನ ಮದರಿಗೆ ವಿದಾಯ ಹೇಳಿದ್ದ ಸ್ಟಾರ್ ಇಂಗ್ಲಿಷ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಇದೀಗ 2023ರ ಏಕದಿನ ವಿಶ್ವಕಪ್​ನಲ್ಲಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. 2019 ರಲ್ಲಿ ಇಂಗ್ಲೆಂಡ್‌ನ ಮೊದಲ ಏಕದಿನ ವಿಶ್ವಕಪ್ ವಿಜಯದಲ್ಲಿ ದೊಡ್ಡ ಪಾತ್ರವನ್ನು ಸ್ಟೋಕ್ಸ್ ವಹಿಸಿದ್ದರು. ಅಂದಹಾಗೆ, ತನ್ನ ದೇಶಕ್ಕಾಗಿ ಆಡಲು ನಿವೃತ್ತಿ ನಿರ್ಧಾರವನ್ನು ಬದಲಿಸಿದ ಕ್ರಿಕೆಟಿಗರಲ್ಲಿ ಸ್ಟೋಕ್ಸ್ ಅವರೇ ಮೊದಲಿಗರಲ್ಲ. ಅವರಿಗೂ ಮೊದಲು ಪ್ರಮುಖವಾಗಿ ಈ 7 ಆಟಗಾರರು ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಿಸಿದ್ದರು.

2 / 8
ಬೆನ್ ಸ್ಟೋಕ್ಸ್: ಇಂಗ್ಲೆಂಡ್‌ನ ಟೆಸ್ಟ್ ನಾಯಕ, ಸ್ಟೋಕ್ಸ್ ಕಳೆದ ವರ್ಷ ಜುಲೈ 18 ರಂದು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಆದರೆ ಒಂದು ವರ್ಷದ ನಂತರ ಸ್ಟೋಕ್ಸ್ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. 2019 ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಪರ್ಫಾರ್ಮರ್ ಆಗಿದ್ದ ಸ್ಟೋಕ್ಸ್, ಫೈನಲ್‌ ಪಂದ್ಯದಲ್ಲಿ ಅಜೇಯ 84 ರನ್‌ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

3 / 8
ಇಮ್ರಾನ್ ಖಾನ್: ಲೆಜೆಂಡರಿ ಪಾಕಿಸ್ತಾನಿ ಆಲ್‌ರೌಂಡರ್ ಮತ್ತು ಮಾಜಿ ನಾಯಕ ಇಮ್ರಾನ್ ಖಾನ್ ಕೂಡ ನಿವೃತ್ತಿ ನಿರ್ಧಾರದಿಂದ ಹೊರಬಂದು 1992 ರಲ್ಲಿ ಪಾಕ್ ತಂಡ ಮೊದಲ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1987 ರ ವಿಶ್ವಕಪ್‌ನ ಮುಕ್ತಾಯದ ನಂತರ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದ ಇಮ್ರಾನ್, ಬಳಿಕ 1988 ರಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿ ತಂಡಕ್ಕೆ ಮತ್ತೆ ಎಂಟ್ರಿಕೊಟ್ಟಿದ್ದರು.

4 / 8
ತಮೀಮ್ ಇಕ್ಬಾಲ್: ಬಾಂಗ್ಲಾದೇಶದ ಲೆಜೆಂಡರಿ ಆರಂಭಿಕ ಬ್ಯಾಟರ್ ತಮೀಮ್ ಇಕ್ಬಾಲ್, ಕಳೆದ ತಿಂಗಳು ಜುಲೈ 6 ರಂದು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ್ದರು. ಆದರೆ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾದ ಕೇವಲ ಒಂದು ದಿನದ ನಂತರ ತಮೀಮ್ ತಮ್ಮ ನಿರ್ಧಾರವನ್ನು ಬದಲಿಸಿ, ಮತ್ತೊಮ್ಮೆ ಆಯ್ಕೆಗೆ ಲಭ್ಯ ಎಂದಿದ್ದರು.

5 / 8
ಜಾವಗಲ್ ಶ್ರೀನಾಥ್: ಭಾರತದ ಲೆಜೆಂಡರಿ ವೇಗಿ ಜಾವಗಲ್ ಶ್ರೀನಾಥ್ ಅವರು 2002 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದರೆ ಆಗಿನ ಭಾರತ ತಂಡದ ನಾಯಕ ಸೌರವ್ ಗಂಗೂಲಿ ಅವರ ಒತ್ತಾಯದ ಮೇರೆಗೆ ಅವರು ಅದೇ ವರ್ಷ ಮತ್ತೆ ಟೀಂ ಇಂಡಿಯಾಕ್ಕೆ ಮರಳಿದರು.

6 / 8
ಶಾಹಿದ್ ಅಫ್ರಿದಿ: ಶಾಹಿದ್ ಅಫ್ರಿದಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಅವಧಿಯಲ್ಲಿ ಒಟ್ಟು ಐದು ಬಾರಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ಮತ್ತೆ ತಂಡಕ್ಕೆ ಮರಳಿದ್ದರು. 2006 ರಲ್ಲಿ ಟೆಸ್ಟ್ ಕ್ರಿಕೆಟ್ ತೊರೆದ ಅಫ್ರಿದಿ, 2 ವಾರಗಳ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿದ್ದರು. ಅಂತಿಮವಾಗಿ 2010 ರಲ್ಲಿ ಅಫ್ರಿದಿ, ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದರು. ಬಳಿಕ ಮೇ 2011 ರಲ್ಲಿ ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲು ನಿರ್ಧರಿಸಿದ ಅಫ್ರಿದಿ, ಐದು ತಿಂಗಳ ನಂತರ ತಮ್ಮ ನಿರ್ಧಾರದಿಂದ ಯು-ಟರ್ನ್ ಮಾಡಿದರು. 2015ರ ಏಕದಿನ ವಿಶ್ವಕಪ್ ಆಡಿದ ಅಫ್ರಿದಿ, ನಂತರ 2017 ರಲ್ಲಿ ಟಿ20 ಮಾದರಿಗೂ ವಿದಾಯ ಘೋಷಿಸಿದರು.

7 / 8
ಡ್ವೇನ್ ಬ್ರಾವೋ: ಲೆಜೆಂಡರಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡಿಜೆ ಬ್ರಾವೋ ಅವರು ಅಕ್ಟೋಬರ್ 2018 ರಲ್ಲಿ ಎಲ್ಲಾ ರೀತಿಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದರೆ ಒಂದು ವರ್ಷದ ನಂತರ, ಡಿಸೆಂಬರ್ 2019 ರಲ್ಲಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ನಿರ್ವಹಣೆಯಲ್ಲಿ ಬದಲಾವಣೆ ಮತ್ತು ಕೀರಾನ್ ಪೊಲಾರ್ಡ್ ಅವರ ನಾಯಕತ್ವದ ನಂತರ, ಅವರು ತಮ್ಮ ನಿರ್ಧಾರವನ್ನು ಬದಲಿಸಿದ್ದರು. ಅಂತಿಮವಾಗಿ 2021 ರ ಟಿ20 ವಿಶ್ವಕಪ್‌ನಲ್ಲಿ ಆಡಿದ ಬ್ರಾವೋ ಆ ಬಳಿಕ ಕ್ರಿಕೆಟ್​ನಿಂದ ದೂರ ಸರಿದರು.

8 / 8
ಮೊಯಿನ್ ಅಲಿ: ಇಂಗ್ಲಿಷ್ ಆಲ್‌ರೌಂಡರ್ ಮೊಯಿನ್ ಅಲಿ ಅವರು ಭಾರತ ವಿರುದ್ಧದ ತವರು ಸರಣಿಯಲ್ಲಿ ಆಡಿದ ನಂತರ ಸೆಪ್ಟೆಂಬರ್ 2021 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಆದರೆ 2023 ರ ಆಶಸ್‌ ಆರಂಭಕ್ಕೂ ಮುಂಚಿತವಾಗಿ, ಅವರು ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದರು.