
ಕ್ರಿಕೆಟ್ ಅಂಗಳದಲ್ಲಿ ಕಾಣಿಸುವ ಕೆಲ ರೋಚಕತೆಗಳಂತೆ ಕೆಲವೊಮ್ಮೆ ಅಂಕಿ ಅಂಶಗಳು ಕೂಡ ಇಂಟ್ರೆಸ್ಟಿಂಗ್ ಆಗಿರುತ್ತದೆ. ಇದೀಗ ಅಂತಹದೊಂದು ಅಂಕಿ ಅಂಶಗಳನ್ನು ಟೀಮ್ ಇಂಡಿಯಾ ಹೊಂದಿದೆ. ಇದೀಗ ಟೀಮ್ ಇಂಡಿಯಾ 94 ಅಂಕಿ ಅಂಶಗಳೊಂದಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಅಂದರೆ ಟೀಮ್ ಇಂಡಿಯಾದ ಟಿ20 ಅಂಕಿ ಅಂಶಗಳಲ್ಲಿ ಎಲ್ಲದರಲ್ಲೂ 94 ಕಾಣಿಸಿಕೊಂಡಿದೆ. ಹಾಗಿದ್ರೆ ಏನಿದು ಅಂಕಿ ಅಂಶ ನೋಡೋಣ...

ಭಾರತ ಪರ ಇದುವರೆಗೆ 94 ಆಟಗಾರರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವರಲ್ಲಿ 11 ಆಟಗಾರರು 2021ರಲ್ಲಿ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ.

ಭಾರತ ಇದುವರೆಗೆ 94 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದೆ. ಅಂದರೆ ಇಲ್ಲಿ ಟೀಮ್ ಇಂಡಿಯಾವನ್ನು ಟಿ20ಯಲ್ಲಿ ಪ್ರತಿನಿಧಿಸಿದ ಆಟಗಾರರ ಸಂಖ್ಯೆ ಹಾಗೂ ಗೆಲುವಿನ ಸಂಖ್ಯೆ ಒಂದೇ ಆಗಿದೆ.

ಹರ್ಷಲ್ ಪಟೇಲ್ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಿದ 94ನೇ ಆಟಗಾರ. ಅವರು ನವೆಂಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದರು.

ನವೆಂಬರ್ 21 ರಂದು ಭಾರತ ತನ್ನ 95 ನೇ ಟಿ20 ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅವೇಶ್ ಖಾನ್ಗೆ ಪಾದರ್ಪಣೆ ಮಾಡಿದರೆ ಭಾರತದ ಪರ ಟಿ20 ಕ್ರಿಕೆಟ್ ಆಡಿದ 95ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಂದರೆ 95 ಪಂದ್ಯದ ಜೊತೆ 95 ಆಟಗಾರನ ಅಂಕಿ ಅಂಶ ಮುಂದುವರೆಯುವ ಸಾಧ್ಯತೆಯಿದೆ.

ಇನ್ನು ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದು ವಿರಾಟ್ ಕೊಹ್ಲಿ. ಅವರ ಗರಿಷ್ಠ ಸ್ಕೋರ್ ಅಜೇಯ 94 ಎಂಬುದು ಇಲ್ಲಿ ವಿಶೇಷ.

ಇದಾಗ್ಯೂ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಆಟಗಾರರನ್ನು ಕಣಕ್ಕಿಳಿಸಿದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 98 ಆಟಗಾರರು ಕಣಕ್ಕಿಳಿದಿದ್ದಾರೆ. ಹೀಗಾಗಿ ದಾಖಲೆಯನ್ನು ಮುರಿಯಲು ಟೀಮ್ ಇಂಡಿಯಾ ಪರ ಇನ್ನೂ ಐವರು ಹೊಸ ಆಟಗಾರರು ಆಡಬೇಕಿದೆ.