‘ನನ್ನ ಹೃದಯ ಯಾವಾಗಲೂ ಆರ್‌ಸಿಬಿ ಜೊತೆಗಿರುತ್ತದೆ’; ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿದ ಎಬಿ ಡಿವಿಲಿಯರ್ಸ್

Updated on: Aug 25, 2025 | 5:10 PM

AB de Villiers Hints at RCB Return: ಎಬಿ ಡಿವಿಲಿಯರ್ಸ್ ಅವರು ಐಪಿಎಲ್‌ಗೆ ಭವಿಷ್ಯದಲ್ಲಿ ಬೇರೆ ಪಾತ್ರದಲ್ಲಿ ಮರಳಬಹುದು ಎಂದು ಹೇಳಿದ್ದಾರೆ. ಆದರೆ ಪೂರ್ಣ ಸೀಸನ್ ಆಡುವುದು ಕಷ್ಟ ಎಂದೂ ಅವರು ತಿಳಿಸಿದ್ದಾರೆ. ಅವರ ಹೃದಯ ಆರ್‌ಸಿಬಿಯೊಂದಿಗೆ ಇದೆ ಎಂದು ಹೇಳಿ, ತರಬೇತಿ ಅಥವಾ ಮಾರ್ಗದರ್ಶನದ ಪಾತ್ರಕ್ಕೆ ಅವಕಾಶ ಸಿಕ್ಕರೆ ಆರ್‌ಸಿಬಿಯಲ್ಲಿ ಖಂಡಿತವಾಗಿಯೂ ಇರುತ್ತೇನೆ ಎಂದು ಸೂಚಿಸಿದ್ದಾರೆ.

1 / 6
ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಆಟಗಾರನಾಗಿ ಭಾರತದಲ್ಲಿ ಜನಪ್ರಿಯರಾಗಿದ್ದಕ್ಕಿಂತ ಆರ್​ಸಿಬಿಯ ಆಪತ್ಭಾಂದವರೆಂದೇ ಖ್ಯಾತರಾದರು. ಈ ತಂಡದ ಪರ 11 ವರ್ಷಗಳ ಕಾಲ ಆಡಿದ ಡಿವಿಲಿಯರ್ಸ್ ಅವಕಾಶ ಸಿಕ್ಕಾಗಲೆಲ್ಲ ಆರ್​ಸಿಬಿ ಮೇನಿನ ಪ್ರೀತಿಯನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಇದೀಗ ಆರ್​ಸಿಬಿ ವಿಚಾರವಾಗಿ ಮಾತನಾಡಿರುವ ಎಬಿ, ಮತ್ತೊಮ್ಮೆ ಆರ್​ಸಿಬಿ ತಂಡವನ್ನು ಸೇರುವ ಸುಳಿವು ನೀಡಿದ್ದಾರೆ.

2 / 6
ಐಎಎನ್‌ಎಸ್‌ ಜೊತೆ ಮಾತನಾಡಿದರುವ ಎಬಿ ಡಿವಿಲಿಯರ್ಸ್​, ‘ಭವಿಷ್ಯದಲ್ಲಿ ನಾನು ಬೇರೆ ಯಾವುದಾದರೂ ಪಾತ್ರದಲ್ಲಿ ಐಪಿಎಲ್‌ಗೆ ಸೇರಬಹುದು. ಆದರೆ ಒಬ್ಬ ವೃತ್ತಿಪರ ಆಟಗಾರನಾಗಿ ಇಡೀ ಸೀಸನ್ ಆಡುವುದು ಸ್ವಲ್ಪ ಕಷ್ಟ. ಆ ದಿನಗಳು ಮುಗಿದು ಹೋಗಿವೆ ಎಂದು ನಾನು ಭಾವಿಸುತ್ತೇನೆ.

3 / 6
 ನನ್ನ ಹೃದಯ ಆರ್‌ಸಿಬಿ ಜೊತೆಗಿದೆ ಮತ್ತು ಯಾವಾಗಲೂ ಇರುತ್ತದೆ. ಆದ್ದರಿಂದ ಫ್ರಾಂಚೈಸಿ ನನಗೆ ಒಂದು ಪಾತ್ರ (ತರಬೇತುದಾರ ಅಥವಾ ಮಾರ್ಗದರ್ಶಕ) ಇದೆ ಎಂದು ಭಾವಿಸಿದರೆ, ಇದಕ್ಕೆ ಪೂರಕವಾಗಿ ಸಮಯ ಕೂಡಿ ಬಂದರೆ ನಾನು ಖಂಡಿತವಾಗಿಯೂ ಆರ್‌ಸಿಬಿಯಲ್ಲಿ ಇರುತ್ತೇನೆ ಎಂದು ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ.

4 / 6
ಮೇಲೆ ಹೇಳಿದಂತೆ ಆರ್​ಸಿಬಿ ತಂಡದಲ್ಲಿ 11 ಸೀಸನ್‌ಗಳನ್ನು ಆಡಿದ್ದ ಡಿವಿಲಿಯರ್ಸ್, ಅದ್ಭುತ ಪ್ರದರ್ಶನ ನೀಡಿದದ್ದರು ಮತ್ತು ತಂಡದ ಅತ್ಯಂತ ವಿಶ್ವಾಸಾರ್ಹ ಆಟಗಾರರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ ಎಬಿ ತಂಡದಲ್ಲಿದ್ದಾಗ ಆರ್​ಸಿಬಿಗೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಅವರು 2021 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಇದೀಗ ಭವಿಷ್ಯದಲ್ಲಿ ಕೋಚ್ ಅಥವಾ ಮಾರ್ಗದರ್ಶಕ ಪಾತ್ರದಲ್ಲಿ ಆರ್‌ಸಿಬಿಗೆ ಸೇರಬಹುದು ಎಂದು ಡಿವಿಲಿಯರ್ಸ್ ಸೂಚಿಸಿದ್ದಾರೆ.

5 / 6
ಇನ್ನು ಆರ್​ಸಿಬಿ ತಂಡದಲ್ಲಿದ್ದಾಗ ಡಿವಿಲಿಯರ್ಸ್ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ.. ಈ ತಂಡದ ಪರ 157 ಪಂದ್ಯಗಳನ್ನಾಡಿದ್ದ ಎಬಿ 41.10 ಸರಾಸರಿಯಲ್ಲಿ 4522 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 158.33 ಆಗಿತ್ತು. ಆರ್‌ಸಿಬಿಯಲ್ಲಿದ್ದಾಗ ಅವರು 2 ಶತಕಗಳು ಮತ್ತು 37 ಅರ್ಧಶತಕಗಳನ್ನು ಬಾರಿಸಿದ್ದರು.

6 / 6
ಡಿವಿಲಿಯರ್ಸ್ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಆಡಿದ 184 ಪಂದ್ಯಗಳಲ್ಲಿ 39.71 ರ ಸರಾಸರಿಯಲ್ಲಿ 5162 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅವರ ಸ್ಟ್ರೈಕ್ ರೇಟ್ 151.69 ಆಗಿದೆ. ಐಪಿಎಲ್‌ನಲ್ಲಿ ಅವರ ಹೆಸರಿನಲ್ಲಿ 3 ಶತಕಗಳು ಮತ್ತು 40 ಅರ್ಧಶತಕಗಳಿವೆ ಮತ್ತು ಅವರ ಗರಿಷ್ಠ ಸ್ಕೋರ್ 133 ರನ್‌ಗಳಾಗಿವೆ.

Published On - 5:09 pm, Mon, 25 August 25